ETV Bharat / entertainment

'ನೋವಿನಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ': ಅಮಿತಾಭ್ ಬಚ್ಚನ್ - Amitabh Bachchan latest news

ಶೂಟಿಂಗ್​ ಸೆಟ್​ನಲ್ಲಿ ಗಾಯಗೊಂಡಿರುವ ಹಿರಿಯ ನಟ ಅಮಿತಾಭ್ ಬಚ್ಚನ್ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

actor Amitabh Bachchan
ನಟ ಅಮಿತಾಭ್ ಬಚ್ಚನ್
author img

By

Published : Mar 7, 2023, 3:15 PM IST

ಹಿಂದಿ ಚಿತ್ರರಂಗದ ಹಿರಿಯ, ಖ್ಯಾತ ನಟ ಅಮಿತಾಭ್​​​ ಬಚ್ಚನ್​ ಅವರು ತಮ್ಮ ಸಿನಿಮಾ ಶೂಟಿಂಗ್​ ಸಂದರ್ಭದಲ್ಲಿ ಗಾಯಗೊಂಡಿದ್ದರು. ನಾಗ್ ಅಶ್ವಿನ್ ನಿರ್ದೇಶನದ 'ಪ್ರಾಜೆಕ್ಟ್​ ಕೆ' ಸಿನಿಮಾ ಸೆಟ್​ನಲ್ಲಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಹೋಳಿ ಹಬ್ಬಕ್ಕೆ ವಿಶೇಷವಾಗಿ ಶುಭ ಕೋರಿರುವ ಬಿಗ್​ ಬಿ ತಮ್ಮ ಹೆಲ್ತ್​ ಅಪ್​​ಡೇಟ್ ಕೂಡ ಕೊಟ್ಟಿದ್ದಾರೆ.

ಸೂಪರ್​ ಸ್ಟಾರ್ ಅಮಿತಾಭ್ ಬಚ್ಚನ್ ಅವರು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ಹೋಳಿ ಹಬ್ಬದ ಶುಭಾಶಯ ಕೋರಿದ್ದಾರೆ. ನಿಯಮಿತವಾಗಿ ಸಾಮಾಜಿಕ ಮಾಧ್ಯಮ ಬಳಸುವ ಹಿರಿಯ ನಟ ಹೈದರಾಬಾದ್‌ನ ಶೂಟಿಂಗ್​ ಸೆಟ್​ನಲ್ಲಿ ಗಾಯಗೊಂಡ ಬಗ್ಗೆ, ಚೇತರಿಸಿಕೊಂಡಿರುವ ಬಗ್ಗೆ ತಮ್ಮ ಅಭಿಮಾನಿಗಳಿಗೆ ಮಾಹಿತಿ ಕೊಟ್ಟಿದ್ದಾರೆ. ಪ್ರೀತಿ, ಬೆಂಬಲ, ಪ್ರಾರ್ಥನೆಗಾಗಿ ಬಿಗ್​ ಬಿ ಅಭಿಮಾನಿಗಳಿಗೆ ಅಪಾರ ಕೃತಜ್ಞತೆ ಸಲ್ಲಿಸಿದ್ದಾರೆ.

ನನ್ನ ಗಾಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಎಲ್ಲರಿಗೂ, ನಿಮ್ಮ ಪ್ರಾರ್ಥನೆಗೆ ಕೃತಜ್ಞತೆ ಮತ್ತು ಪ್ರೀತಿ ವ್ಯಕ್ತಪಡಿಸುತ್ತೇನೆ. ತಮ್ಮ ಮೇಲೆ ಪ್ರೀತಿ ವ್ಯಕ್ತಪಡಿಸಿದ ಪ್ರತಿಯೊಬ್ಬರಿಗೂ ನನ್ನ ಕೃತಜ್ಞತೆ ಎಂದ ನಟ ಅಮಿತಾಭ್​​​ ಬಚ್ಚನ್​ ಅವರು, ಆರೋಗ್ಯ ಸುಧಾರಿಸುತ್ತಿದೆ. ಆದರೆ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ ಎಂದು ತಮ್ಮ ಬ್ಲಾಗ್​ನಲ್ಲಿ ತಿಳಿಸಿದ್ದಾರೆ.

ವೈದ್ಯರ ಆದೇಶ, ಸಲಹೆಯನ್ನು ಅಚ್ಚುಕಟ್ಟಾಗಿ ಪಾಲಿಸುತ್ತಿರುವುದಾಗಿ 80ರ ಹರೆಯದ ಹಿರಿಯ ನಟ ತಿಳಿಸಿದ್ದಾರೆ. ವಿಶ್ರಾಂತಿ ಅಗತ್ಯವಿದೆ. ಸದ್ಯ ಎಲ್ಲಾ ಕೆಲಸಗಳು ಸ್ಥಗಿತಗೊಂಡಿವೆ. ವೈದ್ಯರು ಒಪ್ಪಿಗೆ ನೀಡುವವರೆಗೆ ಯಾವುದೇ ಕೆಲಸ ಪುನರಾರಂಭಿಸುವುದಿಲ್ಲ ಎಂದು ಹೇಳಿದರು. ಉಳಿದಂತೆ ಅಭಿಮಾನಿಗಳಿಗೆ ಹೋಳಿ ಹಬ್ಬದ ಶುಭ ಕೋರಿದ್ದಾರೆ.

ಹಿಂದಿ ಕ್ಯಾಲೆಂಡರ್ ಅನುಸಾರವಾಗಿ ಹೋಳಿ ದಿನಾಂಕ ಮತ್ತು ಸಮಯದ ಗೊಂದಲ ಇತ್ತು. ಒಂದು ದಿನ ಮುಂಚಿತವಾಗಿ ಹೋಳಿ ಆಚರಿಸಿದ್ದೇವೆ ಎಂದು ನಟ ಬಹಿರಂಗಪಡಿಸಿದರು. ನಂತರ ಅವರು ತಮ್ಮ ಅಭಿಮಾನಿ ಬಳಗಕ್ಕೆ ಬಣ್ಣದ ಹಬ್ಬದ ಶುಭಾಶಯಗಳನ್ನು ಕೋರಿದರು.

ಇದನ್ನೂ ಓದಿ: ಆ್ಯಕ್ಷನ್​ ಸೀನ್​ ಶೂಟಿಂಗ್​ ವೇಳೆ ಅಮಿತಾಬ್​ ಬಚ್ಚನ್‌ಗೆ ಗಾಯ

'ಪ್ರಾಜೆಕ್ಟ್​ ಕೆ' ಚಿತ್ರೀಕರಣದ ಸೆಟ್​ನಲ್ಲಿ ಗಾಯಗೊಂಡ ಕೂಡಲೇ ಅವರನ್ನು ಗಚ್ಚಿಬೌಲಿಯ ಎಐಜಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಿನ್ನೆ (ಸೋಮವಾರ, ಮಾರ್ಚ್ 6) ಈ ಬಗ್ಗೆ ಅಮಿತಾಭ್ ಬಚ್ಚನ್​​ ತಮ್ಮ ಬ್ಲಾಗ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. "ಹೈದರಾಬಾದ್​ನಲ್ಲಿ ಪ್ರಾಜೆಕ್ಟ್​ ಕೆ ಶೂಟಿಂಗ್​ ವೇಳೆ ಆ್ಯಕ್ಷನ್​ ಸೀನ್​ ಸಮಯದಲ್ಲಿ ಗಾಯಗೊಂಡೆ. ಬಳಿಕ ಆಸ್ಪತ್ರೆಗೆ ಕರೆದೊಯ್ದರು, ಸಿಟಿ ಸ್ಕ್ಯಾನ್​ ಮಾಡಲಾಗಿದೆ. ಪಕ್ಕೆಲುಬಿನ ಕಾರ್ಟಿಲೆಜ್ ಮುರಿದು ಬಲಭಾಗಕ್ಕೆ ಸರಿದಿದೆ. ವೈದ್ಯರು ಪರಿಶೀಲಿಸಿ ನೋವಿಗೆ ಚಿಕಿತ್ಸೆ, ಔಷಧ ನೀಡಿದ್ದಾರೆ. ಸದ್ಯ ಮನೆಗೆ ಮರಳಿದ್ದೇನೆ. ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ನಡೆದಾಡಲು ಮತ್ತು ಉಸಿರಾಟಕ್ಕೆ ಕೊಂಚ ತೊಂದರೆ ಇದೆ. ಗಾಯದಿಂದ ಚೇತರಿಸಿಕೊಳ್ಳುವವರೆಗೆ ಚಿತ್ರೀಕರಣ ಸ್ಥಗಿತಗೊಳಿಸಲಾಗಿದೆ" ಎಂದು ತಿಳಿಸಿದ್ದರು.

ಇದನ್ನೂ ಓದಿ: ಹೋಳಿ ಬಣ್ಣದಲ್ಲಿ ಮಿಂದೆದ್ದ ಬಾಲಿವುಡ್​ ನವದಂಪತಿ ಸಿದ್​ ಕಿಯಾರಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.