ETV Bharat / entertainment

ಕನ್ನಡದ ಆಶಿಕಿ ಸಿನಿಮಾಗೆ ಅಜಯ್ ರಾವ್ ಬೆಂಬಲ.. ಆಡಿಯೋ ಬಿಡುಗಡೆ, ದಸರಾಗೆ ಸಿನಿಮಾ ರಿಲೀಸ್ - ಕನ್ನಡದಲ್ಲೂ ಆಶಿಕಿ ಸಿನಿಮಾ

ನಟ ಅಜಯ್ ರಾವ್ ಆಶಿಕಿ ಸಿನಿಮಾದ ಆಡಿಯೋ ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ಬೆಂಬಲ ಸೂಚಿಸಿದರು.

actor ajay rao supports Aashiqui movie
ಕನ್ನಡದ ಆಶಿಕಿ ಸಿನಿಮಾಗೆ ಅಜಯ್ ರಾವ್ ಬೆಂಬಲ
author img

By

Published : Sep 15, 2022, 7:56 PM IST

ಬಾಲಿವುಡ್ ಚಿತ್ರರಂಗದಲ್ಲಿ ಆಶಿಕಿ ಶೀರ್ಷಿಕೆಯ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೀಗ ಇದೇ ಟೈಟಲ್ ಇಟ್ಟುಕೊಂಡು ಕನ್ನಡದಲ್ಲೂ ಆಶಿಕಿ ಸಿನಿಮಾ ಬರುತ್ತಿದೆ. ಟ್ರೈಲರ್​ನಿಂದ ಗಮನ ಸೆಳೆದಿರೋ ಆಶಿಕಿ ಚಿತ್ರತಂಡ ತಮ್ಮ ಸಿನಿಮಾದ ಆಡಿಯೋ ಬಿಡುಗಡೆ ಮಾಡಿದೆ.

ಇತ್ತೀಚೆಗೆ ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಆಡಿಯೋ ಬಿಡುಗಡೆ ಕಾರ್ಯಕ್ರಮ ಜರುಗಿತು. ನಟ ಅಜಯ್ ರಾವ್ ಆಶಿಕಿ ಚಿತ್ರದ ಆಡಿಯೋ ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ಬೆಂಬಲ ಸೂಚಿಸಿದರು. ಜೊತೆಗೆ ನಿರ್ದೇಶಕ ಬಹದ್ದೂರ್ ಚೇತನ್, ಸಂಭಾಷಣೆಗಾರ ಮಾಸ್ತಿ ಸಾಥ್ ನೀಡಿದರು. ಈ ವೇಳೆ ಆಶಿಕಿ ಚಿತ್ರತಂಡ ಉಪಸ್ಥಿತಿ ಇತ್ತು.

ಆಡಿಯೋ ಬಿಡುಗಡೆ ಮಾಡಿ ಮಾತನಾಡಿದ ನಟ ಅಜಯ್ ರಾವ್, ಪ್ರಯತ್ನ ಎನ್ನುವುದು ಒಂದು ಯಶಸ್ಸು. ಪ್ರಯತ್ನ ಮಾಡದೇ ಸುಮ್ಮನೆ ಕುಳಿತುಕೊಳ್ಳುವುದರಿಂದ ಯಾವುದಕ್ಕೂ ಸಾರ್ಥಕತೆ ಇರುವುದಿಲ್ಲ. ಮಹಿಳಾ ನಿರ್ದೇಶಕಿಯ ಪ್ರಯತ್ನ, ಸಂದೀಪ್ ತೆರೆಮೇಲೆ ಹೇಗೆ ಕಾಣಿಸುತ್ತಾರೆ, ನಾಯಕನಾಗಿ ಪಾತ್ರ ಹೇಗೆ ಪಾತ್ರ ನಿರ್ವಹಿಸುತ್ತಾರೆ ಎಂಬುದನ್ನು ನೋಡಲು ನಾನು ಕಾತುರನಾಗಿದ್ದೇನೆ. ಸಂದೀಪ್ ಅವರ ದೊಡ್ಡ ಜರ್ನಿ ಇಲ್ಲಿಂದ ಸಾಗಲಿ. ನಿರ್ಮಾಪಕರಿಗೆ ದುಡ್ಡು ಬರಲಿ. ನನ್ನ ಸಿನಿಮಾ ಜರ್ನಿಯಲ್ಲಿ ದುಡ್ಡು ಮಾಡಿದ್ದನ್ನು ನೋಡಿದ್ದೇನೆ. ಕಳೆದುಕೊಂಡಿದ್ದನ್ನು ನೋಡಿದ್ದೇನೆ. ನಿರ್ಮಾಪಕರಿಗೆ ಒಳ್ಳೆ ದುಡ್ಡು ಬಂದರೆ ಇಡೀ ಸಿನಿಮಾ ಗೆದ್ದಂತೆ ಎಂದರು.

ಇನ್ನು ಮಹಿಳಾ ನಿರ್ದೇಶಕಿ ಜೆ.ಚಂದ್ರಕಲಾ ಆಶಿಕಿ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಮಹಿಳಾ ನಿರ್ದೇಶಕಿಯರು ಬಳಹ ಅಪರೂಪ ಅಂತಾ ಎಲ್ಲರೂ ಹೇಳುತ್ತಿದ್ದರು. ಮಹಿಳಾ ನಿರ್ದೇಶಕಿಯರನ್ನು ನಂಬಿಕೊಂಡು ಯಾವ ನಿರ್ಮಾಪಕರು ದುಡ್ಡು ಹಾಕುತ್ತಾರೆ. ನಾನು ಇಂಡಸ್ಟ್ರಿಗೆ ಬಂದು ಹದಿನಾರರಿಂದ ಹದಿನೇಳು ವರ್ಷವಾಯ್ತು. ಏನೂ ಸಾಧಿಸಲು ಆಗಿಲ್ಲ. ನಾನು ಏನಾದರೂ ಸಾಧಿಸಬೇಕೆಂಬ ಪ್ರಯತ್ನದಲ್ಲೇ ಇದ್ದೇನೆ. ಆಶಿಕಿ ಮ್ಯೂಸಿಕಲ್ ಲವ್ ಸ್ಟೋರಿ ಸಿನಿಮಾ. ಲಿಯೋ ಅದ್ಭುತ ಮ್ಯೂಸಿಕ್ ಕೊಟ್ಟಿದ್ದಾರೆ ಎಂದರು.

ಇದನ್ನೂ ಓದಿ: ಕನ್ನಡ ಓಟಿಟಿ ಬಿಗ್ ಬಾಸ್ ಮನೆಗೆ ಕಾಮಿಡಿ ಕಿಲಾಡಿ ಲೋಕೇಶ್ ಎಂಟ್ರಿ

ತ್ರಿಕೋನ ಪ್ರೇಮಕಥೆಯಿರುವ ‘ಆಶಿಕಿ’ ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದ್ದು, ಪ್ರತಿ ಹಾಡುಗಳು ಡಿಫ್ರೆಂಟ್ ಆಗಿ ಮೂಡಿಬಂದಿವೆ. ಹಲವು ವರ್ಷಗಳ ಹಿಂದೆ ಮಾಧ್ಯಮ ರಂಗದಲ್ಲಿ ಸಿನಿಮಾ ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ ಸಂದೀಪ್ ಕುಮಾರ್, ಪ್ರದೀಪ್ ರಾಜ್ ನಾಯಕರಾಗಿ ಅಭಿನಯಿಸಿದ್ದು, ನಾಯಕಿಯಾಗಿ ಐಶ್ವರ್ಯ ಸಿಂಧೋಗಿ ಬಣ್ಣ ಹಚ್ಚಿದ್ದಾರೆ. ಗುರುಪ್ರಸಾದ್, ಸುಚೇಂದ್ರ ಪ್ರಸಾದ್, ತುಳಸಿ ಶಿವಮಣಿ, ಪ್ರಮೋದಿನಿ ಹಿರಿಯ ತಾರಾಬಳಗ ಚಿತ್ರದಲ್ಲಿದೆ. ಶ್ರೀ ಲಕ್ಷ್ಮೀ ನರಸಿಂಹ ಮೂವೀಸ್ ಬ್ಯಾನರ್​ನಡಿ ಜಿ ಚಂದ್ರಶೇಖರ್ ಆಶಿಕಿ ಸಿನಿಮಾಗೆ ಬಂಡವಾಳ ಹೂಡಿದ್ದು, ರಾಜರತ್ನ, ನಿತಿನ್ ಅಪ್ಪಿ ಛಾಯಾಗ್ರಾಹಣ, ಲಿಯೋ ಸಂಗೀತ ನಾಗೇಂದ್ರ ಅರಸ್ ಸಂಕಲನ ಚಿತ್ರಕ್ಕಿದೆ. ಇತ್ತೀಚೆಗಷ್ಟೇ ಸೆನ್ಸಾರ್ ಪಾಸಾಗಿರುವ ಆಶಿಕಿ ಸಿನಿಮಾ ದಸರಾಗೆ ತೆರೆಗೆ ಬರಲು ಸಜ್ಜಾಗಿದೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.