ETV Bharat / entertainment

ಅಮೆಜಾನ್ ಪ್ರೈಮ್​ನಲ್ಲಿ ಆ್ಯಕ್ಷನ್ ಥ್ರಿಲ್ಲರ್ ವೆಬ್ ಸರಣಿ ಸಿಟಾಡೆಲ್ ಬಿಡುಗಡೆ - ಪ್ರಿಯಾಂಕಾ ಚೋಪ್ರಾ ಮತ್ತು ರಿಚರ್ಡ್ ಮ್ಯಾಡೆನ್ ಸಿಟಾಡೆಲ್

ಪ್ರಿಯಾಂಕಾ ಚೋಪ್ರಾ ಮತ್ತು ರಿಚರ್ಡ್ ಮ್ಯಾಡೆನ್ ಅವರು ನಟಿಸಿರುವ ಬಹು ನಿರೀಕ್ಷಿತ ಆ್ಯಕ್ಷನ್ ಥ್ರಿಲ್ಲರ್ ಸರಣಿ ಸಿಟಾಡೆಲ್ ಶುಕ್ರವಾರ ಅಮೆಜಾನ್ ಪ್ರೈಮ್​ನಲ್ಲಿ ಬಿಡುಗಡೆಯಾಗಿದೆ.

ಸಿಟಾಡೆಲ್
ಸಿಟಾಡೆಲ್
author img

By

Published : Apr 28, 2023, 10:33 PM IST

Updated : Apr 28, 2023, 11:01 PM IST

ಹೈದರಾಬಾದ್ : ಕಳೆದ ಒಂದು ವರ್ಷದಿಂದ ಅತ್ಯಂತ ಕುತೂಹಲದಿಂದ ಕಾಯುತ್ತಿರುವ ಬಹು ನಿರೀಕ್ಷಿತ ಆ್ಯಕ್ಷನ್ ಥ್ರಿಲ್ಲರ್ ವೆಬ್ ಸರಣಿಗಳಲ್ಲಿ ಒಂದಾದ ಸಿಟಾಡೆಲ್ ಶುಕ್ರವಾರ ಅಮೆಜಾನ್ ಪ್ರೈಮ್​ನಲ್ಲಿ ಬಿಡುಗಡೆಯಾಗಿದೆ. 'ಸಿಟಾಡೆಲ್' ಎಂಬುದು ರುಸ್ಸೋ ಸಹೋದರರೊಂದಿಗೆ ಅಮೆಜಾನ್ ಪ್ರೈಮ್ ವಿಡಿಯೋಗಾಗಿ ಡೇವಿಡ್ ವೇಲ್ ರಚಿಸಿದ ವೈಜ್ಞಾನಿಕ ಕಾಲ್ಪನಿಕ ಆ್ಯಕ್ಷನ್ ಥ್ರಿಲ್ಲರ್ ವೆಬ್ ಸರಣಿಯಾಗಿದೆ. ಸಿಟಾಡೆಲ್​ನಲ್ಲಿ ವಿಭಿನ್ನ ಪಾತ್ರದಲ್ಲಿ ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡಿದ್ದಾರೆ.

ಇವರ ಜೊತೆಗೆ ಬಾಲಿವುಡ್​ ನಟ ವರುಣ್ ಧವನ್ ಮತ್ತು ದಕ್ಷಿಣದ ತಾರೆ ಸಮಂತಾ ರುತ್ ಪ್ರಭು ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ, ವೆಬ್ ಸರಣಿಯ ವರ್ಲ್ಡ್ ಪ್ರೀಮಿಯರ್ ಅನ್ನು ಲಂಡನ್‌ನಲ್ಲಿ ಆಯೋಜಿಸಲಾಗಿತ್ತು. ಆಗ ರುಸ್ಸೋ ಬ್ರದರ್ಸ್ ತಮ್ಮ 'ಸಿಟಾಡೆಲ್' ಪಯಣದ ಬಗ್ಗೆ ಮಾತನಾಡಿದ್ದರು.

ಇದನ್ನೂ ಓದಿ: ಪುನಿತ್ - ಯುವ ರಾಜ್​ಕುಮಾರ್​ ನಡುವೆ ಸಾಮ್ಯತೆ ಹುಡುಕುತ್ತಿರುವ ಫ್ಯಾನ್ಸ್​: '5'ರ ಸೀಕ್ರೆಟ್​ ಇಲ್ಲಿದೆ

ಅಲ್ಲದೇ ಈ ಸರಣಿಯಲ್ಲಿ ಖ್ಯಾತರಾದ ರಿಚರ್ಡ್ ಮ್ಯಾಡೆನ್, ಸ್ಟಾನ್ಲಿ ಟುಸಿ, ಲೆಸ್ಲಿ ಮ್ಯಾನ್‌ವಿಲ್ಲೆ, ಓಸಿ ಇಖಿಲೆ, ಆಶ್ಲೀಗ್ ಕಮ್ಮಿಂಗ್ಸ್, ರೋಲ್ಯಾಂಡ್ ಮುಲ್ಲರ್ ಮತ್ತು ಕಾಯೋಲಿನ್ ಸ್ಪ್ರಿಂಗಲ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿಟಾಡೆಲ್ ಬಗ್ಗೆ ಟ್ವಿಟರ್ ​ಸೇರಿದಂತೆ ಸಾಮಾಜಿಕ ಜಾಲತಾಣ ಸಾಕಷ್ಟು ಚರ್ಚೆ ಆಗುತ್ತಿದೆ.

ಇದನ್ನೂ ಓದಿ: 'ಕೆಡಿ' ಆ್ಯಕ್ಷನ್ ಪ್ರಿನ್ಸ್ ರಾಣಿಯಾಗಿ ರೀಷ್ಮಾ ನಾಣಯ್ಯ; ಫಸ್ಟ್ ಲುಕ್ ಔಟ್​

ಈ ಬಗ್ಗೆ ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದು, "ಸಿಟಾಡೆಲ್ ಎಪಿಸೋಡ್​​ನ 1 ಮತ್ತು 2 ವೀಕ್ಷಿಸಿದ್ದೇನೆ. ಪ್ರಿಯಾಂಕಾ ಚೋಪ್ರಾ ಹಾಗೂ ರಿಚರ್ಡ್ಸ್​​ ಗಮನ ಸೆಳೆಯುತ್ತಾರೆ. ಇಬ್ಬರನ್ನೂ ಒಟ್ಟಿಗೆ ನೋಡುವುದು ರೋಮಾಂಚಕ ಅನುಭವ'' ಎಂದಿದ್ದಾರೆ.

'ಸಿಟಾಡೆಲ್ ಥ್ರಿಲ್ಲರ್​ ವೆಬ್ ಸರಣಿಯಲ್ಲಿ ಪ್ರಿಯಾಂಕಾ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ. ನಮ್ಮ ದೇಸಿ ಹುಡುಗಿ ಹೊಸ ಪ್ರಪಂಚ, ವಿಭಿನ್ನ ಸಂಸ್ಕೃತಿಗೆ ಹೇಗೆ ಹೊಂದಿಕೊಳ್ಳುತ್ತಾಳೆ ಎಂಬುದು ಎಪಿಸೋಡ್​ನಲ್ಲಿ ಅದ್ಭುತವಾಗಿ ಚಿತ್ರಿತವಾಗಿದೆ' ಎಂದು ಮತ್ತೊಬ್ಬ ಅಭಿಮಾನಿ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ಕನ್ನಡದ ಬಹುನಿರೀಕ್ಷಿತ ಪ್ರಯೋಗಾತ್ಮಕ ಸಿನಿಮಾಗಳು ಇಂದು ರಿಲೀಸ್

ಸರಣಿಯಲ್ಲಿನ ಹೆಚ್ಚಿನ ಸಾಹಸಗಳನ್ನು ತಾನೇ ನಿರ್ವಹಿಸಿದ್ದೇನೆ ಎಂದು ಸಂದರ್ಶನವೊಂದರಲ್ಲಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಹೇಳಿಕೊಂಡಿದ್ದರು. ಇದೀಗ ಈ ಸರಣಿಯು ತಾನು ಮೊದಲು ಮಾಡಿದ್ದಕ್ಕಿಂತ ವಿಭಿನ್ನವಾಗಿದೆ ಎಂದು ಅವರು ಖುಷಿ ಹಂಚಿಕೊಂಡಿದ್ದಾರೆ.

ಇದೀಗ ಅಮೆಜಾನ್​ ಪ್ರೈಮ್​ನಲ್ಲಿ ಸಿಟಾಡೆಲ್‌ನ ಮೊದಲ ಸೀಸನ್​ನಲ್ಲಿ ಆರು ಸಂಚಿಕೆಗಳಿವೆ. ಮೇ 26 ರವರೆಗೆ ಪ್ರತಿ ವಾರ ಒಂದು ಸಂಚಿಕೆ ಪ್ರಸಾರವಾಗಲಿದೆ. ಈ ಸರಣಿಯು 240ಕ್ಕೂ ಹೆಚ್ಚು ದೇಶಗಳಲ್ಲಿ ಮತ್ತು ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ವೀಕ್ಷಕರಿಗೆ ಲಭ್ಯವಿದೆ.

ಇದನ್ನೂ ಓದಿ: ಫಿಲ್ಮ್‌ಫೇರ್ ಅವಾರ್ಡ್ಸ್ 2023: ಬರೋಬ್ಬರಿ ಹತ್ತು ಪ್ರಶಸ್ತಿ ಬಾಚಿಕೊಂಡ 'ಗಂಗೂಬಾಯಿ ಕಥಿಯಾವಾಡಿ'

Last Updated : Apr 28, 2023, 11:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.