ETV Bharat / entertainment

ತಮನ್ನಾ ಜೊತೆ ಡೇಟಿಂಗ್​: ಮದುವೆ ಬಗ್ಗೆ ಮನಬಿಚ್ಚಿ ಮಾತನಾಡಿದ ನಟ ವಿಜಯ್​ ವರ್ಮಾ

author img

By

Published : Jul 21, 2023, 7:26 PM IST

ನಟ ವಿಜಯ್​ ವರ್ಮಾ ಅವರು ತಮ್ಮ ಮದುವೆ ಆಲೋಚನೆ ಬಗ್ಗೆ, ಅದಕ್ಕಾಗಿ ಕುಟುಂಬದ ಒತ್ತಾಯದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

Vijay Varma
ವಿಜಯ್ ವರ್ಮಾ

ಬಹುಭಾಷಾ ತಾರೆ ತಮನ್ನಾ ಭಾಟಿಯಾ ಮತ್ತು ನಟ ವಿಜಯ್​​ ವರ್ಮಾ ನಡುವಿನ ಸಂಬಂಧ ಈಗಾಗಲೇ ಅಧಿಕೃತಗೊಂಡಿದೆ. 'ಲಸ್ಟ್​ ಸ್ಟೋರಿಸ್​ 2' ವಿಚಾರಕ್ಕಾಗಿ ಈ ತಾರೆಯರು ಸುದ್ದಿಯಲ್ಲಿದ್ದಾರೆ. ಇವರಿಬ್ಬರು ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಘೋಷಿಸುವ ಮೊದಲು ಅವರ ರಿಲೇಷನ್​ಶಿಪ್​ ಬಗ್ಗೆ ಕೆಲ ವದಂತಿಗಳಿದ್ದವು. ಈ ಮಧ್ಯೆ ವಿಜಯ್​ ವರ್ಮಾ ಅವರು ತಮ್ಮ ಮದುವೆ ಆಲೋಚನೆ ಬಗ್ಗೆ, ಅದಕ್ಕಾಗಿ ಕುಟುಂಬದ ಒತ್ತಾಯದ ಬಗ್ಗೆ ಮಾತನಾಡಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ವಿಜಯ್​ ವರ್ಮಾ ಅವರನ್ನು ಮದುವೆಯಾಗುವಂತೆ ಅವರ ಕುಟುಂಬ ಸದಸ್ಯರು ಒತ್ತಡ ಹೇರುತ್ತಾರೆಯೇ ಎಂದು ಕೇಳಲಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ವಿಜಯ್​, "ನಾನು ಮಾರ್ವಾಡಿ. ನಮ್ಮ ಸಮುದಾಯದಲ್ಲಿ ಗಂಡು ಮಕ್ಕಳ ಮದುವೆ ವಯಸ್ಸು 16 ವರ್ಷ. ಹಾಗಾಗಿ ನನ್ನೊಂದಿಗೆ ಎಲ್ಲವೂ ಹಿಂದೆಯೇ ಪ್ರಾರಂಭವಾಗಬೇಕಿತ್ತು. ನಾನು ನಮ್ಮ ಸಂಪ್ರದಾಯದ ಪ್ರಕಾರ ಮದುವೆಯ ವಯಸ್ಸನ್ನು ಮೀರಿದ್ದೇನೆ. ಅದಲ್ಲದೇ, ನಾನು ಅಷ್ಟೊತ್ತಿಗಾಗಲೇ ನಟನಾದೆ" ಎಂದಿದ್ದಾರೆ.

"ನಾನು ಈ ಪ್ರಶ್ನೆಗಳ ಬಗ್ಗೆ ಎಂದಿಗೂ ಯೋಚಿಸಲಿಲ್ಲ ಮತ್ತು ನನ್ನ ವೃತ್ತಿಜೀವನದ ಬಗ್ಗೆ ಮಾತ್ರ ಗಮನಹರಿಸಿದೆ. ಆದರೆ ಈಗಲೂ ನನ್ನ ತಾಯಿ ನನ್ನ ಮದುವೆಗೆ ಒತ್ತಾಯಿಸುತ್ತಾರೆ. ಅವರು ಇನ್ನೂ ಪ್ರತಿ ಫೋನ್​ ಕರೆಯಲ್ಲಿ ಮದುವೆಯ ಬಗ್ಗೆ ಕೇಳುತ್ತಾರೆ. ಆದರೆ ನಾನು ಅದಕ್ಕೆ ಉತ್ತರ ಕೊಡದೇ ತಪ್ಪಿಸಿಕೊಳ್ಳುತ್ತೇನೆ. ನಾನು ನನ್ನ ಜೀವನದಲ್ಲಿನ್ನೂ ಬೆಳೆಯುತ್ತಿದ್ದೇನೆ" ಎಂದು ಹೇಳಿದ್ದಾರೆ.

ಇನ್ನು ತಮನ್ನಾ ಮತ್ತು ವಿಜಯ್​ ನಡುವಿನ ಪ್ರೀತಿ ಸುಜಯ್​ ಘೋಷ್​ ನಿರ್ದೇಶನದ 'ಲಸ್ಟ್​ ಸ್ಟೋರಿಸ್​ 2' ಸೆಟ್​ನಲ್ಲಿ ಹುಟ್ಟಿಕೊಂಡಿತು. ಗೋವಾದಲ್ಲಿ ನಡೆದ ನ್ಯೂ ಇಯರ್​ ಪಾರ್ಟಿಯಲ್ಲಿ ಪರಸ್ಪರ ಚುಂಬನದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುವವರೆಗೆ ಈ ಜೋಡಿ ತಮ್ಮ ವಿಚಾರವನ್ನು ಮರೆಮಾಚಿದ್ದರು. ಈ ಚಿತ್ರ ಬಹಿರಂಗಗೊಂಡ ಬಳಿಕ ಇವರಿಬ್ಬರ ನಡುವಿನ ಸಂಬಂಧದ ಕುರಿತು ಹಲವು ಊಹಾಪೋಹಗಳು ಎದ್ದವು. ಇವರಿಬ್ಬರ ಆತ್ಮೀಯ ದೃಶ್ಯಗಳು ತೆರೆ ಮೇಲೆ ಮೋಡಿ ಮಾಡಿದವು. ನಂತರದಲ್ಲಿ ಈ ಜೋಡಿ ಸಿನಿಮಾ ಮತ್ತು ಡಿನ್ನರ್​ ಡೇಟ್​ಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು.

ಮತ್ತೊಂದು ಮುಖ್ಯ ವಿಚಾರವೆಂದರೆ, ನಟಿ ತಮನ್ನಾ ತಮ್ಮ 17 ವರ್ಷದ ಸಿನಿ ಜೀವನದಲ್ಲಿ ನೋ ಕಿಸ್ಸಿಂಗ್​ ಪಾಲಿಸಿಯನ್ನು ಅಂದರೆ, ತೆರೆ ಮೇಲೆ ನಟರಿಗೆ ಮುತ್ತಿಕ್ಕುವ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂಬ ನಿರ್ಣಯವನ್ನು ತೆಗೆದುಕೊಂಡಿದ್ದರು. ಆದರೆ, ಲಸ್ಟ್​​ ಸ್ಟೋರಿಸ್​ನಲ್ಲಿ ಅವರು ತಮ್ಮ ಈ ನಿಯಮವನ್ನು ಮುರಿದಿದ್ದು, ತೆರೆ ಮೇಲೆ ಮೊದಲ ಬಾರಿಗೆ ನಟ ವಿಜಯ್​ ಅವರಿಗೆ ಮುತ್ತಿಕ್ಕಿದ್ದರು.

ಮಿಜೊರಾಂ ಮೂಲದ ನಟ ವಿಜಯ್​ ಈಗಾಗಲೇ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಮುಂಬರುವ ಸಿನಿಮಾದ ಬಗ್ಗೆ ನೋಡುವುದಾದರೆ, ಕಾಲ್‌ಕೂಟ ವೆಬ್​ಸರಣಿ ಬಿಡುಗಡೆಗೆ ಸಜ್ಜಾಗಿದೆ. ತಮನ್ನಾ ಅವರು ಕೊನೆಯದಾಗಿ ಲಸ್ಟ್ ಸ್ಟೋರೀಸ್​ 2 ಮತ್ತು ಜೀ ಕರ್ದಾ ಸೀರಿಸ್​ನಲ್ಲಿ ಕೆಲಸ ಮಾಡಿದ್ದರು. ಸದ್ಯ ಅವರು ತೆಲುಗಿನ ಭೋಲಾ ಶಂಕರ್​ ಮತ್ತು ರಜನಿಕಾಂತ್​ ಅವರ ಜೈಲರ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೇ, ನಿಖಿಲ್ ಅಡ್ವಾಣಿ ನಿರ್ದೇಶನದ ವೇದಾ (Vedaa) ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೈ ಆ್ಯಕ್ಷನ್​ ಡ್ರಾಮಾ 'ವೇದಾ' ಇತ್ತೀಚೆಗೆ ರಾಜಸ್ಥಾನದಲ್ಲಿ ಚಿತ್ರೀಕರಣ ಪ್ರಾರಂಭಿಸಿದೆ.

ಇದನ್ನೂ ಓದಿ: 'ಮದುವೆಯೆಂಬುದು ಪಾರ್ಟಿಯಲ್ಲ, ಅದು ಹೆಚ್ಚಿನ ಜವಾಬ್ದಾರಿ'; ಹೀಗೆ ಹೇಳಿದ್ದೇಕೆ ತಮನ್ನಾ!?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.