ETV Bharat / entertainment

Ghoomer Trailer: ಇತಿಮಿತಿ ಮೆಟ್ಟಿ ನಿಂತು ಕ್ರಿಕೆಟ್​ ಸಾಧನೆ - ಬಲಗೈ ಇಲ್ಲದಿದ್ದರೇನಂತೆ? ಎಡಗೈಯಲ್ಲೇ ಬೌಲಿಂಗ್​​! - ಅಭಿಷೇಕ್​​ ಬಚ್ಚನ್​ ಘೂಮರ್ ಸಿನಿಮಾ

Ghoomer Trailer: ನಟ ಅಭಿಷೇಕ್​​ ಬಚ್ಚನ್​ ಮತ್ತು ನಟಿ ಸೈಯಾಮಿ ಖೇರ್​ ನಟನೆಯ 'ಘೂಮರ್'​ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದೆ.

Ghoomer trailer
ಘೂಮರ್ ಟ್ರೇಲರ್​
author img

By

Published : Aug 4, 2023, 3:54 PM IST

ಬಾಲಿವುಡ್​ ಬಿಗ್​ ಬಿ ಪುತ್ರ, ನಟ ಅಭಿಷೇಕ್​​ ಬಚ್ಚನ್​ ಅಭಿನಯದ ಬಹುನಿರೀಕ್ಷಿತ 'ಘೂಮರ್'​ ಸಿನಿಮಾದ ಟ್ರೇಲರ್ ಇಂದು​ ಅನಾವರಣಗೊಂಡಿದೆ. ಜೂನಿಯರ್​ ಬಚ್ಚನ್ ಅವರು ಕೋಚ್​ ಪಾತ್ರದಲ್ಲಿ ನಟಿಸಿದ್ದು, ಪವರ್‌ಫುಲ್​ ಲುಕ್​ ಬೀರಿದ್ದಾರೆ. ಕೋಚ್​ ಅಭಿಷೇಕ್​​ ಬಚ್ಚನ್​ ಮಾರ್ಗದರ್ಶನದಲ್ಲಿ ಕ್ರಿಕೆಟ್ ತರಬೇತಿ ಪಡೆಯುವ ಸೈಯಾಮಿ ಖೇರ್ (Saiyami) ಪಾತ್ರ ಕೂಡ ಗಮನ ಸೆಳೆದಿದೆ. ಕ್ರೀಡಾಪಟು ಸೈಯಾಮಿಯ ಸ್ಫೂರ್ತಿದಾಯಕ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಆರ್​ ಬಾಲ್ಕಿ ಆ್ಯಕ್ಷನ್​ ಕಟ್​ ಹೇಳಿರುವ ಘೂಮರ್​ ಸಿನಿಮಾ ಇದೇ ಆಗಸ್ಟ್ 18 ರಂದು ಚಿತ್ರಮಂದಿರದಲ್ಲಿ ತೆರೆ ಕಾಣಲಿದೆ.

Ghoomer Trailer ಹೇಗಿದೆ? : 'ಘೂಮರ್'​ ಟ್ರೇಲರ್ ಪ್ರಕಾರ, ಬಲಗೈ ಇಲ್ಲದ / ಪಾರ್ಶ್ವವಾಯು ಅಥ್ಲೀಟ್​​ ಅನಿನಾ (Anina) ಪಾತ್ರದಲ್ಲಿ ನಟಿ ಸೈಯಾಮಿ ಕಾಣಿಸಿಕೊಂಡಿದ್ದಾರೆ. ಇನ್ನೂ ನಟ ಅಭಿಷೇಕ್​ ಬಚ್ಚನ್​​ ಕೋಚ್​ ಪಾತ್ರದಲ್ಲಿ ದರ್ಶನ ಕೊಟ್ಟಿದ್ದಾರೆ. ತರಬೇತುದಾರ ಅಭಿಷೇಕ್​ ಅವರ ಮೊಗದಲ್ಲಿ ಗಂಭೀರ ಮತ್ತು ಚಿಂತನಾಶೀಲ ಗುಣಲಕ್ಷಣಗಳನ್ನು ನಾವು ಕಾಣಬಹುದು. ದೈಹಿಕ ಇತಿಮಿತಿಗಳ ಹೊರತಾಗಿಯೂ ತನ್ನ ದೇಶದ ಕೀರ್ತಿ ಹೆಚ್ಚಿಸಲು, ಸಾಧನೆ ಮಾಡುವ ಮಹಿಳಾ ಕ್ರಿಕೆಟ್​ ಆಟಗಾರ್ತಿ ಅನಿನಾ ಅವರ ಹೋರಾಟವನ್ನು ತೆರೆ ಮೇಲೆ ವಿಶಿಷ್ಠವಾಗಿ ತರುವ ಪ್ರಯತ್ನ ನಡೆದಿದೆ.

  • " class="align-text-top noRightClick twitterSection" data="">

ಆರ್​ ಬಾಲ್ಕಿ ಅವರೇ ಕಥೆ ಬರೆದು ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಶಬಾನಾ ಅಜ್ಮಿ ಮತ್ತು ಅಂಗದ್​ ಬೇಡಿ ಕೂಡ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕಥೆ ಮಹಿಳಾ ಆಟಗಾರ್ತಿ ಅನಿನಾ ಮೇಲೆ ಕೇಂದ್ರೀಕೃತವಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡುವ ಮುನ್ನ ಭೀಕರ ಅಪಘಾತಕ್ಕೊಳಗಾಗಿ ತಮ್ಮ ಬಲಗೈ ಕಳೆದುಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಹತಾಶ ಮನೋಭಾವ ಹೊಂದುತ್ತಾರೆ. ಈ ಹತಾಶ ಆಟಗಾರ್ತಿಯೇ ಅನಿನಾ ಅವರ ಮುಂದಿನ ಹೋರಾಟಕ್ಕೆ ಪ್ರೇರಣೆ ಒದಗಿಸುತ್ತದೆ. ಜೀವನದಲ್ಲಿ ಒಂದು ಗುರಿ ಇಟ್ಟುಕೊಳ್ಳುತ್ತಾರೆ. ಬೌಲರ್​ ಆಗಿ ದೇಶಕ್ಕೆ ಕೊಡುಗೆ ನೀಡಲು ಉತ್ತಮ ತರಬೇತಿ ಪಡೆಯಲು ನಿರ್ಧರಿಸುತ್ತಾರೆ. ಅಭಿಷೇಕ್​ ಬಚ್ಚನ್​​ ಕೋಚ್ ಆಗಿ ಅವರಿಗೆ ಮಾರ್ಗದರ್ಶನ ನೀಡುತ್ತಾರೆ. ಇದೇ ಘೂಮರ್​ ಸಿನಿಮಾದ ಹೂರಣ.

ಇದನ್ನೂ ಓದಿ: 'ಹರಿಯಾಣ ಸಂಘರ್ಷದ ಟ್ವೀಟ್​ ನನ್ನದಲ್ಲ, ನನ್ನ ಖಾತೆ ಹ್ಯಾಕ್​ ಮಾಡಲಾಗಿದೆ': ನಟ ಗೋವಿಂದ

ಘೂಮರ್​ ಚಿತ್ರದಲ್ಲಿ ಹೊಸ ಬೌಲಿಂಗ್​ ಶೈಲಿಯನ್ನು ವಿನ್ಯಾಸಗೊಳಿಸಲಾಗಿದೆ. ಸಿನಿಮಾ ಅಥ್ಲೀಟ್​ ಕರೋಲಿ ಟಕಾಕ್ಸ್​ (Karoly Takacs) ಸಾಧನೆಯಿಂದ ಸ್ಫೂರ್ತಿ ಪಡೆದಿದೆ. ನಟ ಅಭಿಷೇಕ್​ ಬಚ್ಚನ್​ ಅವರಿಗೆ ಸಿನಿಮಾ ಜೀವನದ ಯಶಸ್ಸಿಗೆ ಸಹಾಯವಾಗಲಿದೆ ಎಂದು ನಂಬಲಾಗಿದೆ. ಅಲ್ಲದೇ ಚಿತ್ರದ ಪ್ರೀಮಿಯರ್ ಶೋ ಇಂಡಿಯನ್​​ ಫಿಲ್ಮ್ ಫೆಸ್ಟಿವಲ್​ ಆಫ್​ ಮೆಲ್ಬೋರ್ನ್ 2023 ರಲ್ಲಿ ನಡೆಯಲಿದೆ. ಸಿನಿಮಾ ಇದೇ ಆಗಸ್ಟ್ 18 ರಂದು ಥಿಯೇಟರ್​ನಲ್ಲಿ ತೆರೆ ಕಾಣಲಿದೆ.

ಇದನ್ನೂ ಓದಿ: 'ಕೋಯಿ ಮಿಲ್ ಗಯಾ' ರೀ ರಿಲೀಸ್​​: ಖುಷಿ ಹಂಚಿಕೊಂಡ ಹೃತಿಕ್ ರೋಷನ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.