ETV Bharat / entertainment

ವಾರಿಯರ್ ಅವತಾರ ತಾಳಿದ ಅಭಿಷೇಕ್ ಅಂಬರೀಶ್ - ಅಭಿಷೇಕ್ ಅಂಬರೀಶ್

ರೆಬೆಲ್ ಸ್ಟಾರ್‌ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ನೂತನ ಸಿನಿಮಾದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಸದ್ಯಕ್ಕೆ ಬಿಡುಗಡೆ ಆಗಿರುವ ಪೋಸ್ಟರ್​ನಲ್ಲಿ ಅಭಿಷೇಕ್ ವಾರಿಯರ್‌ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

abhishek ambarish
ಅಭಿಷೇಕ್ ಅಂಬರೀಶ್
author img

By

Published : Aug 29, 2022, 2:15 PM IST

'ಅಮರ್' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿರೋ ನಟ ಅಭಿಷೇಕ್ ಅಂಬರೀಶ್. ಈ ಸಿನಿಮಾ ಬಳಿಕ ಸೈಲೆಂಟ್ ಆಗಿ ಬ್ಯಾಡ್ ಮ್ಯಾನರ್ಸ್​ ಸಿನಿಮಾ ಮಾಡ್ತಾ ಇರೋ ಅಭಿಷೇಕ್, ಇದೀಗ ಹೆಸರಿಡದ ಹೊಸ ಚಿತ್ರವನ್ನ ಒಪ್ಪಿಕೊಂಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸದಭಿರುಚಿ ಚಿತ್ರಗಳನ್ನು ನೀಡಿರುವ ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಈ ಹೊಸ ಚಿತ್ರ ನಿರ್ಮಾಣವಾಗುತ್ತಿದೆ.

ಸುಮಲತಾ ಅಂಬರೀಶ್ ಅವರ ಹುಟ್ಟುಹಬ್ಬದಂದು ಅಭಿಷೇಕ್ ನಟಿಸುತ್ತಿರುವ ನೂತನ ಚಿತ್ರದ AA04 ಫಸ್ಟ್‌ ಲುಕ್ ಮೋಷನ್ ಪೋಸ್ಟರ್ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಸಮಾಧಿ ಬಳಿ ಅನಾವರಣ ಮಾಡಲಾಯಿತ್ತು. ಸದ್ಯ ಬಿಡುಗಡೆ ಆಗಿರುವ ಪೋಸ್ಟರ್​ನಲ್ಲಿ ಅಭಿಷೇಕ್ ಅಂಬರೀಶ್ ವಾರಿಯರ್‌ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

abhishek ambarish
ಅಭಿಷೇಕ್ ಅಂಬರೀಶ್ ಸಿನಿಮಾದ ಫಸ್ಟ್‌ ಲುಕ್ ಮೋಷನ್ ಪೋಸ್ಟರ್

ಇದನ್ನೂ ಓದಿ: 'ಬ್ಯಾಡ್ ಮ್ಯಾನರ್ಸ್' ಅಡ್ಡಾದಲ್ಲಿ ನಟ ಡಾಲಿ ಧನಂಜಯ್!

ಈ ಬಗ್ಗೆ ಮಾತನಾಡಿದ ಸುಮಲತಾ ಅಂಬರೀಶ್, ಅಂಬರೀಶ್ ಅವರ ಆಶೀರ್ವಾದ ಸಂಪೂರ್ಣ ಇದೆ. ಇದಕ್ಕೆ ಸಾಕ್ಷಿಯಾಗಿ ಪೋಸ್ಟರ್ ಬಿಡುಗಡೆಯಾಗುತ್ತಿದ್ದಂತೆ ಅಂಬರೀಶ್ ಅವರ ಭಾವಚಿತ್ರದ ಬಲಗಡೆಯಿಂದ ಹೂವು ಬಿತ್ತು. ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದರು‌.

ನಂತರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮಾತನಾಡಿ, ಅಭಿಷೇಕ್ ಅವರಿಗೆ ಸಿನಿಮಾ ಮಾಡಬೇಕೆಂಬುದು ನನಗೆ ಬಹಳ ದಿನಗಳ ಆಸೆ. ಆದರೆ ಚಿತ್ರದ ಕಥೆ ಚೆನ್ನಾಗಿರಬೇಕು ಅಂತ ಕಾಯುತ್ತಿದ್ದೆ. ಅಭಿ ಅವರೇ ಈ ಕಥೆಯ ಬಗ್ಗೆ ನನಗೆ ಹೇಳಿದ್ದರು. ಚಿತ್ರ ಅದ್ಧೂರಿಯಾಗಿ ನಿರ್ಮಾಣವಾಗಲಿದೆ. ಸುಮಲತಾ ಅಂಬರೀಶ್ ಹುಟ್ಟುಹಬ್ಬದ ದಿನ, ಅಂಬರೀಶ್ ಅವರ ಆಶೀರ್ವಾದದೊಂದಿಗೆ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದ್ದೀವಿ. ಮುಂದೆ ಹೆಚ್ಚಿನ ಮಾಹಿತಿ ನೀಡುತ್ತೇವೆ‌ ಅಂದರು.

ಇದನ್ನೂ ಓದಿ: ಅಪ್ಪನ ಹಾದಿಯಲ್ಲಿ ಅಭಿ: 'ಬ್ಯಾಡ್ ಮ್ಯಾನರ್ಸ್​'ನಲ್ಲಿ ಪೊಲೀಸ್ ಅಧಿಕಾರಿ

ಇನ್ನು ಅಭಿಷೇಕ್ ಮಾತನಾಡಿ, ಅಪ್ಪನ ಹುಟ್ಟುಹಬ್ಬ ಹಾಗೂ ನನ್ನ ಹುಟ್ಟುಹಬ್ಬಕ್ಕೆ ಏನಾದರೂ ವಿಶೇಷತೆ ಇರುತ್ತಿತ್ತು. ಆದರೆ, ನಮ್ಮ ಅಮ್ಮನ ಹುಟ್ಟುಹಬ್ಬದ ದಿನ ಈ ಮೋಷನ್ ಪೋಸ್ಟರ್ ಬಿಡುಗಡೆ ಮಾಡಬೇಕೆಂದು ನನ್ನ ಆಸೆಯಿತ್ತು. ಹಾಗಾಗಿ, ಇಂದು ಬಿಡುಗಡೆ ಮಾಡಿದ್ದೀವಿ‌. ಇದೇ ಅಮ್ಮನಿಗೆ ನನ್ನ ಕಡೆಯಿಂದ ಹುಟ್ಟುಹಬ್ಬದ ಉಡುಗೊರೆ. ಮಹೇಶ್ ಕುಮಾರ್ ಮೋಷನ್ ಪೋಸ್ಟರ್ ಬಹಳ ಚೆನ್ನಾಗಿ ಮಾಡಿದ್ದಾರೆ. ಚಿತ್ರವನ್ನು ಅಷ್ಟೇ ಚೆನ್ನಾಗಿ ಮಾಡುತ್ತಾರೆ ಎಂಬ ಭರವಸೆಯಿದೆ ಎಂದರು.

ಮದಗಜ ಸಿನಿಮಾ ನಂತರ‌ ನಿರ್ದೇಶಕ ಮಹೇಶ್ ಕುಮಾರ್ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ಮಾತನಾಡಿದ ಮಹೇಶ್, ನಾನು ಅಂಬರೀಶ್ ಅಣ್ಣನ ದೊಡ್ಡ ಅಭಿಮಾನಿ. ಅವರ ಮಗ ಅಭಿಷೇಕ್​ಗೆ ಸಿನಿಮಾ ಮಾಡುತ್ತಿರುವುದು ಖುಷಿಯಾಗಿದೆ. ನಿರ್ದೇಶನಕ್ಕೆ ಅವಕಾಶ ನೀಡಿರುವ ರಾಕ್ ಲೈನ್ ವೆಂಕಟೇಶ್ ಸರ್ ಮತ್ತು ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ಹಾರೈಸಿದ ಸುಮಲತಾ ಅಂಬರೀಶ್ ಅವರಿಗೆ ಧನ್ಯವಾದ. ರವಿ ಬಸ್ರೂರು, ಟಿ.ಕೆ.ದಯಾನಂದ್ ಸೇರಿದಂತೆ ನನ್ನ ಇಡೀ ಚಿತ್ರತಂಡದ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿ ಬರಲಿದೆ. ಸದ್ಯದಲ್ಲೇ ಈ ಹೆಸರಿಡದ ಈ ಚಿತ್ರ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ ಎಂದರು.

ಇದನ್ನೂ ಓದಿ: ಜೂ. ಅಂಬರೀಶ್ ಅಭಿನಯದ ಬ್ಯಾಡ್ ಮ್ಯಾನರ್ಸ್ ಶೂಟಿಂಗ್ ಅಡ್ಡದಲ್ಲಿ ಟಗರು ಶಿವ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.