ETV Bharat / entertainment

ಮಂಡ್ಯದಲ್ಲಿ ಅಭಿಷೇಕ್​ ಅಂಬರೀಶ್-​ ಅವಿವಾ ಅದ್ಧೂರಿ ಬೀಗರೂಟಕ್ಕೆ ಜನಸಾಗರ: ಊಟದ ಮೆನು ಹೇಗಿತ್ತು ಗೊತ್ತಾ? - ಈಟಿವಿ ಭಾರತ ಕನ್ನಡ

ಇಂದು ಅಭಿಷೇಕ್​ ಅಂಬರೀಶ್​ ಮತ್ತು ಅವಿವಾ ಬಿದ್ದಪ್ಪ ಬೀಗರ ಔತಣಕೂಟ ಮಂಡ್ಯದ ಗೆಜ್ಜಲಗೆರೆ ಕಾಲೋನಿ ಬಳಿ ನಡೆಯಿತು.

mandya
'ಅಭಿವಾ' ಅದ್ಧೂರಿ ಬೀಗರೂಟ
author img

By

Published : Jun 16, 2023, 4:32 PM IST

Updated : Jun 16, 2023, 4:42 PM IST

ಅಭಿಷೇಕ್​ ಅಂಬರೀಶ್​ ಮತ್ತು ಅವಿವಾ ಬಿದ್ದಪ್ಪ ಬೀಗರ ಔತಣಕೂಟ

ಮಂಡ್ಯ: 'ರೆಬಲ್​ ಸ್ಟಾರ್' ಖ್ಯಾತಿಯ ಹಿರಿಯ ನಟ ದಿ.​ ಅಂಬರೀಶ್ ಅವರ​ ಪುತ್ರ ಅಭಿಷೇಕ್​ ಅಂಬರೀಶ್​ ಮತ್ತು ಅವಿವಾ ಬಿದ್ದಪ್ಪ ಮದುವೆಯ ಬೀಗರ ಔತಣಕೂಟವನ್ನು ಇಂದು ಸಕ್ಕರೆನಾಡು ಮಂಡ್ಯದಲ್ಲಿ ಅದ್ದೂರಿಯಾಗಿ ಏರ್ಪಡಿಸಲಾಗಿತ್ತು. ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿಯ 15 ಎಕರೆ ಪ್ರದೇಶದಲ್ಲಿ ಬೀಗರೂಟವನ್ನು ಆಯೋಜಿಸಲಾಗಿತ್ತು. ಸುಮಾರು 50 ಸಾವಿರ ಮಂದಿಗೆ ಬೊಂಬಾಟ್​ ಬಾಡೂಟ ತಯಾರಿಸಲಾಗಿತ್ತು.

ಸುಮಲತಾ ಅಂಬರೀಶ್​ ಕುಟುಂಬದ ಅಭಿಮಾನಿಗಳಿಗೆ ಊಟಕ್ಕೆಂದೇ ಬೃಹತ್​ ವೇದಿಕೆಯನ್ನು ಸಿದ್ಧಪಡಿಸಲಾಗಿತ್ತು. ವಿಶಾಲವಾದ ಜಾಗದಲ್ಲಿ ಬೃಹತ್​ ಜರ್ಮನ್​ ಟೆಂಟ್​ ಹಾಕಿಸಿ ಒಮ್ಮೆಲೇ 4,500 ಮಂದಿ ಕುಳಿತುಕೊಳ್ಳುವಂತಹ ಆಸನದ ವ್ಯವಸ್ಥೆ ಮಾಡಲಾಗಿತ್ತು. ಇಂದು ಮಧ್ಯಾಹ್ನ 12.30 ರಿಂದಲೇ ಔತಣಕೂಟ ಪ್ರಾರಂಭವಾಗಿತ್ತು.

ಊಟದ ಮೆನು ಹೀಗಿತ್ತು!: ಮಂಡ್ಯ ಶೈಲಿಯಲ್ಲಿ ಬಾಡೂಟ ತಯಾರಿಸಲಾಗಿದ್ದು, ಮಂಡ್ಯದ ಪ್ರಖ್ಯಾತ ಬಾಣಸಿಗರ ತಂಡದ 900 ಮಂದಿಯಿಂದ ಅಡುಗೆ ತಯಾರಿಗಳು ನಡೆದಿದೆ. 7 ಟನ್​ ಮಟನ್​ ಮತ್ತು 8 ಟನ್​ ಚಿಕನ್​ ಬಳಸಿ ಬಗೆ ಬಗೆಯ ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು. ರಾಗಿ ಮುದ್ದೆ, ಮಟನ್ ಬಿರಿಯಾನಿ, ಬೋಟಿ ಗೊಜ್ಜು, ನಾಟಿಕೋ​ಳಿ ಸಾಂಬಾರ್​, ಕಬಾಬ್​, ಮೊಟ್ಟೆ, ತಿಳಿ ಸಾಂಬಾರ್​, ಬಾದುಶಾ, ಪಾಯಸ, ಬೀಡಾ, ಐಸ್​ಕ್ರೀಂ, ಬಾಳೆಹಣ್ಣು ಸೇರಿದಂತೆ ಭರ್ಜರಿ ಭೋಜನವಿತ್ತು.

ಬೀಗರೂಟದಲ್ಲಿ ಸಾವಿರಾರು ಮಂದಿ ಭಾಗಿ: ಬೀಗರ ಔತಣಕೂಟದಲ್ಲಿ ಸಾವಿರಾರು ಮಂದಿ ಭಾಗಿಯಾಗಿ ಭರ್ಜರಿ ಬಾಡೂಟ ಸವಿದರು. ಜನ ಜಂಗುಳಿ ಹೆಚ್ಚಾಗಿ ಮೈಸೂರು- ಬೆಂಗಳೂರು ಹೆದ್ದಾರಿಯ ಸಂಚಾರ ಅಸ್ತವ್ಯಸ್ತಗೊಂಡಿತ್ತು. ರಸ್ತೆಯಲ್ಲಿ ಜನಸಾಗರವೇ ತುಂಬಿತ್ತು. ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ಇದನ್ನೂ ಓದಿ: Abhishek Aviva: 'ಅಭಿವಾ' ಸಂಗೀತಾ ಕಾರ್ಯಕ್ರಮದಲ್ಲಿ ಯಶ್​- ದರ್ಶನ್​ ದರ್ಬಾರ್​​: ಸಖತ್​ ಸ್ಟೆಪ್​ ಹಾಕಿದ ಸುಮಲತಾ ಅಂಬರೀಶ್​ ​

ಅಂಬಿ ಕನಸಿನಂತೆ ಬೀಗರೂಟ ಏರ್ಪಾಡು: ಅಂಬರೀಶ್​ ಕನಸಿನಂತೆಯೇ ಮದುವೆ ಕಾರ್ಯಗಳು ನಡೆದಿವೆ. ಅಂಬಿ ಹುಟ್ಟೂರಿನಲ್ಲೇ ಅಭಿಷೇಕ್​ ಮದುವೆಯ ಬೀಗರ ಔತಣಕೂಟ ಮಾಡಬೇಕು ಎಂಬುದು ರೆಬಲ್​ ಸ್ಟಾರ್​ ಆಸೆಯಾಗಿತ್ತು. ಅದರಂತೆ ಅಂಬರೀಶ್​ ಕನಸನ್ನು ಪತ್ನಿ ಸುಮಲತಾ ಮತ್ತು ಪುತ್ರ ಅಭಿಷೇಕ್​ ನನಸು ಮಾಡಿದ್ದಾರೆ.

ವಿವಾಹೋತ್ಸಹ: ಅಭಿಷೇಕ್​ ಅಂಬರೀಶ್​ ಮತ್ತು ಅವಿವಾ ಬಿದ್ದಪ್ಪ ಜೂನ್​ 5 ರಂದು ಬೆಂಗಳೂರಿನ ಅರಮನೆ ಮೈದಾನದ ಚಾಮರ ವಜ್ರದಲ್ಲಿ ವಿವಾಹವಾದರು. ಜೂನ್​ 7 ರಂದು ಅದ್ಧೂರಿ ಆರತಕ್ಷತೆ ಕಾರ್ಯಕ್ರಮವು ಬೆಂಗಳೂರಿನ ಅರಮನೆಯ ತ್ರಿಪುರವಾಸಿನಿಯಲ್ಲಿ ಅದ್ದೂರಿಯಾಗಿ ನೆರವೇರಿದೆ. ಸಮಾರಂಭದಲ್ಲಿ ಭಾರತೀಯ ಚಿತ್ರರಂಗದ ಗಣ್ಯರು, ರಾಜಕಾರಣಿಗಳು, ಆಪ್ತರು, ಸ್ನೇಹಿತರು, ಅಭಿಮಾನಿಗಳು ಭಾಗಿಯಾಗಿದ್ದರು.

ಜೂನ್​ 10 ರಂದು ರಾತ್ರಿ ಬೆಂಗಳೂರಿನ ಖಾಸಗಿ ಹೊಟೇಲ್​ನಲ್ಲಿ ಸಂಗೀತ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು. ಸಂಗೀತ ಕಾರ್ಯಕ್ರಮವನ್ನು ಅವಿವಾ ಬಿದ್ದಪ್ಪ ತಂದೆ ಪ್ರಸಾದ್​ ಬಿದ್ದಪ್ಪ ಆಯೋಜಿಸಿದ್ದರು. ಯಶ್​ ಮತ್ತು ದರ್ಶನ್​ ಡ್ಯಾನ್ಸ್​ ಸೋಷಿಯಲ್ ಮೀಡಿಯಾದಲ್ಲಿ ಸಖತ್​ ಸದ್ದು ಮಾಡಿದ್ದವು.​

ಇದನ್ನೂ ಓದಿ: ಅದ್ದೂರಿಯಾಗಿ ನಡೆದ 'ಅಭಿವಾ' ವಿವಾಹ: ಸಮಾರಂಭಕ್ಕೆ ಸಾಕ್ಷಿಯಾದ ರಜನಿ, ಸುದೀಪ್​, ಯಶ್ ​

Last Updated : Jun 16, 2023, 4:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.