ETV Bharat / entertainment

ಬಹು ಕಾಲದ ಪ್ರೀತಿಗೆ ದಾಂಪತ್ಯದ ಮುದ್ರೆ ಒತ್ತಲು ಅಮೀರ್​ ಖಾನ್​ ಪುತ್ರಿ ಇರಾ ಖಾನ್​ ಸಜ್ಜು - ಈಟಿವಿ ಭಾರತ ಕನ್ನಡ

ಬಹುಕಾಲದ ಗೆಳೆಯ ನೂಪುರ್​ ಶಿಖರೆ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ಅಮೀರ್​ ಖಾನ್ ಪುತ್ರಿ ​ಇರಾ ಖಾನ್ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿರಿಸಲು ಸಜ್ಜಾಗಿದ್ದಾರೆ.

Aamir Khan's daughter Ira Khan to tie knot with longtime beau Nupur Shikhare on THIS day; deets inside
ಬಹುಕಾಲದ ಪ್ರೀತಿಗೆ ದಾಂಪತ್ಯದ ಮುದ್ರೆ ಒತ್ತಲು ಅಮೀರ್​ ಖಾನ್​ ಪುತ್ರಿ ಇರಾ ಖಾನ್​ ಸಜ್ಜು
author img

By ETV Bharat Karnataka Team

Published : Sep 14, 2023, 5:00 PM IST

ಬಾಲಿವುಡ್​ ಸೂಪರ್​ಸ್ಟಾರ್​ ಅಮೀರ್​ ಖಾನ್​ ಮತ್ತು ನಿರ್ಮಾಪಕಿ ರೀನಾ ದತ್ತಾ ಅವರ ಪುತ್ರಿ ಆಗಿರುವ ರಂಗಭೂಮಿ ನಿರ್ದೇಶಕಿ ಇರಾ ಖಾನ್​ ಕಳೆದ ವರ್ಷ ನವೆಂಬರ್​ನಲ್ಲಿ ಬಹುಕಾಲದ ಗೆಳೆಯ ನೂಪುರ್​ ಶಿಖರೆ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಜೋಡಿ ಶೀಘ್ರದಲ್ಲೇ ಮದುವೆಯಾಗಲು ನಿರ್ಧರಿಸಿದ್ದಾರೆ. ಬಹುಕಾಲದ ಪ್ರೀತಿಗೆ ದಾಂಪತ್ಯದ ಮುದ್ರೆ ಒತ್ತಲು ಸಿದ್ಧರಾಗಿದ್ದಾರೆ. ಆದಷ್ಟು ಶೀಘ್ರದಲ್ಲೇ ಇರಾ ಖಾನ್ ಅವರು ನೂಪುರ್​ ಶಿಖರೆ ಜೊತೆ ತಮ್ಮ ಮುಂದಿನ ಬದುಕನ್ನು ಸಂತೋಷವಾಗಿ ಕಳೆಯಲು ಉತ್ಸುಕರಾಗಿದ್ದಾರೆ ಎಂದು ಇರಾ ಅವರ ಹತ್ತಿರದ ಮೂಲವೊಂದು ತಿಳಿಸಿದೆ.

ವರದಿಗಳ ಪ್ರಕಾರ, ಇರಾ ಖಾನ್​ ಮತ್ತು ನೂಪುರ್​ ಶಿಖರೆ ಮುಂದಿನ ವರ್ಷ 2024ರ ಜನವರಿ 3 ರಂದು ನ್ಯಾಯಾಲಯದಲ್ಲಿ ಮದುವೆಯಾಗಲಿದ್ದಾರೆ. ಎರಡು ವರ್ಷಗಳ ಕಾಲ ಡೇಟಿಂಗ್​ನಲ್ಲಿದ್ದ ಜೋಡಿ ನವೆಂಬರ್​ 2022 ರಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ವರದಿಗಳ ಪ್ರಕಾರ, ಜೋಡಿ ಉದಯಪುರದಲ್ಲಿ ಮೂರು ದಿನಗಳ ವಿವಾಹ ಕಾರ್ಯಕ್ರಮವನ್ನು ಯೋಜಿಸುತ್ತಿದ್ದಾರೆ. ಅಮೀರ್​ ಖಾನ್​ ಅವರು ಈಗಾಗಲೇ ತಮ್ಮ ಮಗಳ ಮದುವೆಯ ಯೋಜನೆ ಆರಂಭಿಸಿದ್ದಾರೆ.

ಇರಾ ಅವರ ಹತ್ತಿರದ ಮೂಲವೊಂದು ನೀಡಿರುವ ಮಾಹಿತಿ ಪ್ರಕಾರ, "ಇರಾ ಖಾನ್​ ಮತ್ತು ನೂಪುರ್​ ಶಿಖರೆ ಉದಯಪುರದಲ್ಲಿ ವಿವಾಹ ಸಮಾರಂಭ ಯೋಜಿಸಿದ್ದಾರೆ. ಕಾರ್ಯಕ್ರಮವು ಮೂರು ದಿನಗಳ ಕಾಲ ನಡೆಯಲಿದೆ. ಜೋಡಿಯ ಸ್ನೇಹಿತರು ಮತ್ತು ಕುಟುಂಬಸ್ಥರು ಪಾಲ್ಗೊಳ್ಳಲಿದ್ದಾರೆ. ಯಾವುದೇ ಸಿನಿಮಾ ಇಂಡಸ್ಟ್ರಿಯವರೆಗೂ ಆಹ್ವಾನ ಇರುವುದಿಲ್ಲ. ಮದುವೆ ಬಗ್ಗೆ ಅಮೀರ್​ ಖಾನ್​ ಉತ್ಸುಕರಾಗಿದ್ದಾರೆ. ಮಗಳ ಮದುವೆಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ" ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಇರಾ ಖಾನ್ - ನೂಪುರ್ ಶಿಖರೆ ನಿಶ್ಚಿತಾರ್ಥ: ಸ್ಟಾರ್​ ಕುಡಿಯ ಸಂಭ್ರಮಕ್ಕೆ ಸಾಕ್ಷಿಯಾದ ಸೆಲೆಬ್ರಿಟಿಗಳು

ಇರಾ ಖಾನ್​ ಈ ಹಿಂದೆ ಸಂದರ್ಶನವೊಂದರಲ್ಲಿ ಫಿಟ್ನೆಸ್​ ತರಬೇತುದಾರ ನೂಪುರ್​ ಶಿಖರೆ ಅವರನ್ನು ಹೇಗೆ ಭೇಟಿಯಾದರು ಮತ್ತು ಪ್ರೀತಿಯ ಬಗ್ಗೆ ಮಾತನಾಡಿದ್ದರು. "ಪಾಪೈ (ಇರಾ ಖಾನ್​ ಅವರು ತಮ್ಮ ಗೆಳೆಯನನ್ನು ಕರೆಯುವುದು ಹೀಗೆ) ನಾನು 17 ವರ್ಷ ಇರುವಾಗ ನನಗೆ ಫಿಟ್ನೆಸ್​ ತರಬೇತಿ ನೀಡಲು ಪ್ರಾರಂಭಿಸಿದರು. ನಾನು ಅವರನ್ನು ಸೂಪರ್​ ಫಿಟ್​ ವ್ಯಕ್ತಿ ಎಂದು ಪರಿಗಣಿಸಿದ್ದೇನೆ. ಅವರ ದೈಹಿಕ ಸಾಮರ್ಥ್ಯಗಳು ನನ್ನಲ್ಲಿ ಇರಬೇಕೆಂದು ನಾನು ಬಯಸುತ್ತೇನೆ. ನಾವು ಕ್ರಮೇಣ ಉತ್ತಮ ಸ್ನೇಹಿತರಾದೆವು. ನಂತರ ಡೇಟಿಂಗ್​ ಮಾಡಲು ಪ್ರಾರಂಭಿಸಿದೆವು" ಎಂದು ಹೇಳಿದ್ದರು.

ನಟ ಅಮೀರ್​ ಖಾನ್ ಅವರ ಮೊದಲ ಪತ್ನಿ ರೀನಾ ದತ್ತಾ ಅವರ ಮಗಳೇ ಈ ಇರಾ. 2002 ರಲ್ಲಿ ಅಮೀರ್​ ಮತ್ತು​ ರೀನಾ ವಿಚ್ಚೇದನ ಪಡೆದುಕೊಂಡಿದ್ದಾರೆ. ಇರಾ ಮತ್ತು ಫಿಟ್ನೆಸ್​ ತರಬೇತುದಾರ​ ನೂಪುರ್ 2020ರಿಂದ ಡೇಟಿಂಗ್​ ನಡೆಸುತ್ತಿದ್ದಾರೆ. ಅಲ್ಲಿಂದ ಈ ಜೋಡಿ ಆಗಾಗಾ ಡಿನ್ನರ್ ಮತ್ತು ಪಾರ್ಟಿಗಳಲ್ಲಿ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು.

ಇದನ್ನೂ ಓದಿ: ಮಗಳ ನಿಶ್ಚಿತಾರ್ಥ ಸಮಾರಂಭದಲ್ಲಿ ಸೂಪರ್ ಸ್ಟಾರ್ ಅಮೀರ್ ಖಾನ್ ಡ್ಯಾನ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.