ETV Bharat / entertainment

ಮಗಳ ಮದುವೆಯಲ್ಲಿ ಅಮೀರ್​ ಖಾನ್​ ಭಾವುಕ - ನೂಪುರ್​ ಶಿಖರೆ

ಮಗಳ ಮದುವೆ ಸಂದರ್ಭದಲ್ಲಿ ಅಮೀರ್ ಖಾನ್ ಭಾವುಕರಾದ ಕ್ಷಣಗಳ ಫೋಟೋ, ವಿಡಿಯೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗುತ್ತಿವೆ.

Emotional Aamir Khan
ಮಗಳನ್ನು ಮದುವೆ ಮಂಟಪಕ್ಕೆ ಕರೆತಂದ ಅಮೀರ್​ ಖಾನ್​: ಭಾವುಕರಾಗಿ ಕಣ್ಣೀರು ಒರೆಸಿಕೊಂಡ ನಟ
author img

By ETV Bharat Karnataka Team

Published : Jan 12, 2024, 8:19 AM IST

Updated : Jan 12, 2024, 9:04 AM IST

ಹೈದರಾಬಾದ್​: ಜನವರಿ 3ರಂದು ರಿಜಿಸ್ಟರ್​ ಮದುವೆಯಾಗಿದ್ದ ಬಾಲಿವುಡ್​ ನಟ​ ಅಮೀರ್​ ಖಾನ್ ಅವರ ಮಗಳು ಇರಾ ಖಾನ್​ ಹಾಗೂ ಆಕೆಯ ಬಹುಕಾಲದ ಗೆಳೆಯ, ಫಿಟ್ನೆಸ್​ ಟ್ರೈನರ್​ ನೂಪುರ್​ ಶಿಖರೆ ಕಳೆದ ಗುರುವಾರ ಉದಯಪುರದಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಆಪ್ತರಿಷ್ಟರ ಸಮ್ಮುಖದಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಾಲ್ಕು ದಿನಗಳ ಕಾಲ ನಡೆದ ವಿವಾಹೋತ್ಸವದ ಹಲವು ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಕ್ರಿಶ್ಚಿಯನ್​ ಪದ್ಧತಿಯಲ್ಲಿ ನೆರವೇರಿದ ಕಾರ್ಯಕ್ರಮದಲ್ಲಿ ಇರಾ ಖಾನ್​ ಅವರು ಬಿಳಿ ಗೌನ್​ ಧರಿಸಿದ್ದರು. ವಧುವಿನ ವಸ್ತ್ರ ವಿನ್ಯಾಸಕ್ಕೆ ಒಪ್ಪುವಂಥ ಶೈಲಿ ಹಾಗೂ ಬಣ್ಣದ ಸೂಟ್​ನಲ್ಲಿ ಮದುಮಗ ನೂಪರ್​ ಶಿಖರೆ ಕಂಗೊಳಿಸಿದರು. ಒಂದೆಡೆ ನವಜೋಡಿಯ ಗ್ಲಿಂಪ್ಸ್​ ವೈರಲ್​ ಆಗುತ್ತಿದ್ದರೆ, ಇನ್ನೊಂದೆಡೆ ಅಮೀರ್​ ಖಾನ್​ ಹಾಗೂ ಇರಾ ಖಾನ್​ ಅವರ ಭಾವನಾತ್ಮಕ ಕ್ಷಣಗಳ ಫೋಟೋಗಳು ವೈರಲ್​ ಆಗುತ್ತಿವೆ.

ಮದುವೆ ವೇದಿಕೆ​ ಮೇಲೆ ಇರಾ ಖಾನ್​ ಹಾಗೂ ನೂಪುರ್​ ಶಿಖರೆ ತಮ್ಮ ತಮ್ಮ ಪ್ರತಿಜ್ಞೆಗಳನ್ನು ಪಠಿಸಿದ್ದು, ಈ ವೇಳೆ ಅಮೀರ್​ ಖಾನ್​ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಮಗಳನ್ನು ವೇದಿಕೆಗೆ ಕರೆದುಕೊಂಡು ಬರುತ್ತಿದ್ದಾಗ ಅಮೀರ್​​ ಉಮ್ಮಳಿಸಿ ಬರುತ್ತಿದ್ದ ಕಣ್ಣೀರೊರೆಸಿಕೊಳ್ಳುವ ಹೃದಯಸ್ಪರ್ಶಿ ಕ್ಷಣಗಳು ಕ್ಯಾಮರಾ ಕಂಗಳಲ್ಲಿ ಸೆರೆಯಾಗಿವೆ.

ಮಗಳು ಹೊಸ ಜೀವನ ಆರಂಭಿಸುವುದನ್ನು ನೋಡುತ್ತಿರುವ ತಂದೆಯ ಭಾವುಕ ಕ್ಷಣಗಳು ಅದಾಗಿದ್ದವು. ಇರಾ ಖಾನ್​ ಸೋದರ ಸಂಬಂಧಿ ಝೈನ್​ ಮೇರಿ ಖಾನ್​ ವಿವಾಹ ಮಹೋತ್ಸವವನ್ನು ಹೋಸ್ಟ್​ ಮಾಡಿದರು. ಸಮಾರಂಭದಲ್ಲಿ ಇಬ್ಬರ ಕುಟುಂಬಸ್ಥರು ಹಾಗೂ ಆತ್ಮೀಯರು ಭಾಗವಹಿಸಿದ್ದರು.

ಇದನ್ನೂ ಓದಿ: ಇರಾ ತಲೆ ಮೇಲಿನ ಪರದೆ ಸರಿಪಡಿಸಿದ ಅಮೀರ್​: ತಂದೆ - ಮಗಳ ಭಾವನಾತ್ಮಕ ಕ್ಷಣಗಳು ಫೋಟೊಗಳಲ್ಲಿ ಸೆರೆ

Last Updated : Jan 12, 2024, 9:04 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.