ETV Bharat / entertainment

ಕೆಜಿಎಫ್​ 2 ಜೊತೆ ಆಗುತ್ತಿದ್ದ ಘರ್ಷಣೆಯಿಂದ ನಮ್ಮ ಸಿನಿಮಾ ತಪ್ಪಿಸಿಕೊಂಡಿದೆ: ಅಮೀರ್ ಖಾನ್ - etvbharatkannada

ಮುಂಬರುವ ಚಿತ್ರ ಲಾಲ್ ಸಿಂಗ್ ಚಡ್ಡಾ ಈ ವರ್ಷದ ಆರಂಭದಲ್ಲಿ ಬಂದಿದ್ದರೆ ಬ್ಲಾಕ್‌ಬಸ್ಟರ್ ಚಲನಚಿತ್ರ ಕೆಜಿಎಫ್​ 2 ಜೊತೆ ಘರ್ಷಣೆಯಾಗುತ್ತಿತ್ತು ಎಂದು ಅಮೀರ್ ಖಾನ್ ಹೇಳಿದ್ದಾರೆ.

ಈಟಿವಿಭಾರತಕನ್ನಡ
ಈಟಿವಿಭಾರತಕನ್ನಡ
author img

By

Published : Jul 26, 2022, 3:41 PM IST

ಮುಂಬೈ (ಮಹಾರಾಷ್ಟ್ರ): ಲಾಲ್​​ಸಿಂಗ್ ಚಡ್ಡಾ ಚಿತ್ರದ ಪೋಸ್ಟ್-ಪ್ರೊಡಕ್ಷನ್‌ನಲ್ಲಿನ ವಿಳಂಬದ ಬಗ್ಗೆ ಬಾಲಿವುಡ್ ಸೂಪರ್‌ಸ್ಟಾರ್ ಅಮೀರ್ ಖಾನ್ ಮಾತನಾಡಿದ್ದಾರೆ. ಇದು ಈ ವರ್ಷದ ಆರಂಭದಲ್ಲಿ ಬ್ಲಾಕ್‌ಬಸ್ಟರ್ ಚಲನಚಿತ್ರ ಕೆಜಿಎಫ್ 2 ಜೊತೆ ಬರಬೇಕಿತ್ತು. ಆದರೆ, ಇವೆರಡರ ನಡುವೆ ಘರ್ಷಣೆ ಉಂಟಾಗುತ್ತಿತ್ತು. ಅದರಿಂದ ಈಗ ನಾವು ಬಚಾವ್​ ಆಗಿದ್ದೇವೆ ಎಂದು ಹೇಳಿದ್ದಾರೆ.

ಕೆಜಿಎಫ್ 2 ಬಿಡುಗಡೆಗೆ ಬಂದಾಗ ಹಿಂದಿ ಪ್ರೇಕ್ಷಕರಲ್ಲಿ ಅದರಲ್ಲೂ ನನ್ನ ಸ್ವಂತ ಸ್ನೇಹಿತರಲ್ಲಿಯೂ ಸಾಕಷ್ಟು ಉತ್ಸಾಹವಿತ್ತು. ಲಾಲ್ ಸಿಂಗ್ ಚಡ್ಡಾ ಆ ವೇಳೆಗೆ ಬಿಡುಗಡೆಯಾಗಬೇಕಿತ್ತು. ಆದರೆ, ನಮ್ಮ ಅದೃಷ್ಟಕ್ಕೆ ರೆಡ್ ಚಿಲ್ಲಿಸ್ ಸ್ವಲ್ಪ ಸಮಯ ತೆಗೆದುಕೊಂಡಿತು. ಇಲ್ಲದಿದ್ದರೆ, ನಾವು ಕೆಜಿಎಫ್​ 2 ನೊಂದಿಗೆ ಬರುತ್ತಿದ್ದೆವು ಎಂದು ಸುದ್ದಿಗಾರರಿಗೆ ತಿಳಿಸಿದರು. ಲಾಲ್ ಸಿಂಗ್ ಚಡ್ಡಾ 1994 ರ ಟಾಮ್ ಹ್ಯಾಂಕ್ಸ್-ನಟನೆಯ ಫಾರೆಸ್ಟ್ ಗಂಪ್‌ನ ಹಿಂದಿ ರೂಪಾಂತರವಾಗಿದೆ.

ಈವೆಂಟ್‌ನಲ್ಲಿ, ಲಾಲ್ ಸಿಂಗ್ ಚಡ್ಡಾ ಅವರ ತೆಲುಗು ಆವೃತ್ತಿಯನ್ನು ಪ್ರಸ್ತುತಪಡಿಸುತ್ತಿರುವ ಚಿರಂಜೀವಿ ಮತ್ತು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ನಾಗ ಚೈತನ್ಯ ಅವರು ಖಾನ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು.

ಪುಷ್ಪ: ದಿ ರೈಸ್, ಎಸ್ ಎಸ್ ರಾಜಮೌಳಿಯವರ ಆರ್‌ಆರ್‌ಆರ್‌ನಿಂದ ಕೆಜಿಎಫ್ 2 ವರೆಗೆ ದಕ್ಷಿಣ ಚಲನಚಿತ್ರಗಳ ಪ್ಯಾನ್-ಇಂಡಿಯಾ ಯಶಸ್ಸನ್ನು ನೋಡುವುದು ಹೃದಯ ತುಂಬಿ ಬರುತ್ತದೆ ಎಂದು ಖಾನ್ ಇದೇ ವೇಳೆ ಹೇಳಿದರು. ಕೆಜಿಎಫ್ 2 ಕನ್ನಡ ಚಿತ್ರ, ಪುಷ್ಪ, ಬಾಹುಬಲಿ, ಆರ್​ಆರ್​ಆರ್​ ಈ ಎಲ್ಲಾ ಚಿತ್ರಗಳು ದಕ್ಷಿಣ ಭಾರತದಿಂದ ಬಂದಿವೆ ಮತ್ತು ದೇಶಾದ್ಯಂತ ಪ್ರೇಕ್ಷಕರ ಹೃದಯವನ್ನು ಗೆದ್ದಿವೆ.

ಈ ಚಿತ್ರಗಳನ್ನು ನೋಡಲು ಅದ್ಭುತವಾಗಿದ್ದವು. ಭಾರತದ ಒಂದು ರಾಜ್ಯದಿಂದ ಹೊರಬರುವ ಸಿನಿಮಾ ಯಶಸ್ವಿಯಾಗಿ ಇಡೀ ದೇಶಕ್ಕೆ ಸಂತೋಷ ಮತ್ತು ಮನರಂಜನೆಯನ್ನು ನೀಡುತ್ತದೆ. ಈ ರೀತಿಯಾದಾಗ ನಮಗೆ ನಿಜವಾಗಿಯೂ ಸಂಭ್ರಮಾಚರಣೆಯಾಗಿದೆ ಎಂದು ಹೊಗಳಿಕೆ ಸುರಿ ಮಳೆಗರಿದರು.

ಅದ್ವೈತ್ ಚಂದನ್ ನಿರ್ದೇಶಿಸಿದ ಮತ್ತು ಕರೀನಾ ಕಪೂರ್ ಖಾನ್ ನಟಿಸಿರುವ ಲಾಲ್ ಸಿಂಗ್ ಚಡ್ಡಾ ಆಗಸ್ಟ್ 11 ರಂದು ಬಿಡುಗಡೆಯಾಗಲಿದೆ. ಈ ಚಿತ್ರವು ಅಕ್ಷಯ್ ಕುಮಾರ್ ಅವರ ಶೀರ್ಷಿಕೆಯ ರಕ್ಷಾ ಬಂಧನದೊಂದಿಗೆ ತೆರೆಗೆ ಬರಲಿದೆ.

ಇದನ್ನೂ ಓದಿ : ಅಸ್ವಸ್ಥಗೊಂಡ ಲಂಗೂರಗೆ ಒಆರ್‌ಎಸ್‌ ನೀಡಿ ಮಾನವೀಯತೆ ಮೆರೆದ ಪೊಲೀಸರು​​: ​​ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.