ETV Bharat / entertainment

'ಲಾಲ್ ಸಿಂಗ್ ಚಡ್ಡಾ' ಚಿತ್ರದ ನೆಗೆಟಿವ್ ಪಬ್ಲಿಸಿಟಿಗೆ ಇವರೇ ಕಾರಣ ಎಂದ ಕಂಗನಾ! - ಅಮೀರ್ ಖಾನ್ ನಟನೆಯ ಬಹುನಿರೀಕ್ಷಿತ ಚಿತ್ರ

ಅಮೀರ್ ಖಾನ್ ನಟನೆಯ ಬಹುನಿರೀಕ್ಷಿತ ಚಿತ್ರ 'ಲಾಲ್ ಸಿಂಗ್ ಚಡ್ಡಾ' ಚಿತ್ರದ ಬಗ್ಗೆ ಲೇವಡಿ ಮಾಡಿರುವ ಕಂಗನಾ ರಣಾವತ್, ಈ ರೀತಿ ನೆಗೆಟಿವ್ ಪಬ್ಲಿಸಿಟಿ ಮಾಡುವುದರಲ್ಲಿ ಅವರು ಸಿದ್ಧಹಸ್ತರು ಎಂದಿದ್ದಾರೆ.

Aamir Khan 'mastermind' behind negativity around Laal Singh Chaddha: Kangana Ranaut

author img

By

Published : Aug 3, 2022, 8:10 PM IST

ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ನಟ ಅಮೀರ್ ಖಾನ್ ನಟನೆಯ ಹೊಸ ಚಿತ್ರ 'ಲಾಲ್ ಸಿಂಗ್ ಚಡ್ಡಾ' ಬಗ್ಗೆ ಬಾಲಿವುಡ್ ನಟಿ ಕಂಗನಾ ರಣಾವತ್ ವ್ಯಂಗ್ಯವಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಮೀರ್ ಖಾನ್ ಹಾಗೂ ಅವರ ಚಿತ್ರದ ಬಗ್ಗೆ ವಿಸ್ತೃತವಾಗಿ ಬರೆದುಕೊಂಡಿದ್ದಾರೆ. ಅನೇಕ ಕಾರಣಗಳಿಗೆ ಅಮಿರ್ ನಟನೆಯ ಲೇಟೆಸ್ಟ್‌ ಚಿತ್ರವನ್ನು ಬಾಯ್ಕಾಟ್ ಮಾಡಬೇಕು ಎಂದು ಹೇಳಲಾಗುತ್ತಿದೆ. ಇದೀಗ ನಟಿ ಕಂಗನಾ ಕೂಡ ಪರೋಕ್ಷವಾಗಿ ದನಿಗೂಡಿಸಿದ್ದಾರೆ.

Aamir Khan 'mastermind' behind negativity around Laal Singh Chaddha: Kangana Ranaut
ಕಂಗನಾ ರಣಾವತ್ ಪೋಸ್ಟ್​

ತಮ್ಮ ಸಿನಿಮಾಗೆ ಪ್ರಚಾರ ಸಿಗಲಿ ಎನ್ನುವ ಕಾರಣಕ್ಕೆ ಸಿನಿಮಾದ ಬಿಡುಗಡೆಗೂ ಮುನ್ನ ನೆಗೆಟಿವ್ ಸುದ್ದಿ ಹರಡಲಿ ಎಂದು ಸ್ವತಃ ಅವರೇ ಈ ರೀತಿ ಸಂಚು ಮಾಡುತ್ತಿದ್ದಾರೆ. ಇಂತಹ ನೆಗೆಟಿವ್ ಪಬ್ಲಿಸಿಟಿ ಮಾಡುವುದರಲ್ಲಿ ಅವರು ಸಿದ್ಧಹಸ್ತರು ಎಂದು ಕಿಡಿಕಾರಿದ್ದಾರೆ. ಹಿಂದೂ-ಮುಸ್ಲಿಂ ಅನ್ನೋ ಧರ್ಮಾಧಾರಿತ ಚಿತ್ರಗಳನ್ನು ಮಾಡುವುದನ್ನು ನಿಲ್ಲಿಸುವಂತೆ ಕೇಳಿಕೊಂಡಿರುವ ಅವರು, ಭಾರತೀಯ ವೀಕ್ಷಕರ ನಾಡಿಮಿಡಿತ ಅಭಿರುಚಿಗೆ ತಕ್ಕಂತೆ ಅಥವಾ ಈ ನೆಲದ ಕಥೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳನ್ನು ಮಾಡಲಿ ಎಂದು ಸಲಹೆ ನೀಡಿದ್ದಾರೆ.

ಈ ವರ್ಷ ಕೆಲವೇ ಕೆಲವು ಚಿತ್ರಗಳನ್ನು ಹೊರತುಪಡಿಸಿ ಎಲ್ಲ ಹಿಂದಿ ಚಲನಚಿತ್ರಗಳು ಜನರ ಮನ ಗೆಲ್ಲುವಲ್ಲಿ ಸೋತಿವೆ. ದಕ್ಷಿಣ ಭಾರತದ ಸಿನಿಮಾಗಳು ಮಾತ್ರ ಭಾರತೀಯ ಸಂಸ್ಕೃತಿಯ ಸೊಗಡಿನೊಂದಿಗೆ, ಪ್ರಾದೇಶಿಕ ಸ್ಥಳದ ಛಾಯೆಯೊಂದಿಗೆ ಹಿಟ್ ಆಗಿವೆ. ಹಾಲಿವುಡ್ ಸಿನಿಮಾದ ರಿಮೇಕ್ ಕೆಲಸ ಮಾಡುವುದಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ. ಪಿಕೆ ಸಿನಿಮಾ ಮಾಡಿ ಅವರು ತಮ್ಮ ಜೀವನದಲ್ಲಿ ದೊಡ್ಡ ಹಿಟ್ ನೀಡಿರುವೆ ಎಂದು ಭಾವಿಸಿಕೊಂಡಿದ್ದಾರೆ. ಧರ್ಮ ಮತ್ತು ಐಡಿಯಾಲಜಿ ಅಂತಹ ಸಿನಿಮಾಗಳನ್ನು ಮಾಡುವುದನ್ನು ನಿಲ್ಲಿಸಿ. ಇದರಿಂದ ಕೆಟ್ಟ ನಟನೆ, ಕೆಟ್ಟ ಸಿನಿಮಾಗಳು ದೂರವಾಗುತ್ತವೆ ಎಂದಿದ್ದಾರೆ.

ಅದ್ವೈತ್ ಚಂದನ್ ನಿರ್ದೇಶನದ 'ಲಾಲ್ ಸಿಂಗ್ ಚಡ್ಡಾ' ಚಿತ್ರದಲ್ಲಿ ಕರೀನಾ ಕಪೂರ್ ಖಾನ್ ಜೊತೆಗೆ ಅಮೀರ್ ಖಾನ್ ನಟಿಸಿದ್ದು ಆಗಸ್ಟ್ 11 ರಂದು ತೆರೆ ಕಾಣಲಿದೆ. ಇದು ಹಾಲಿವುಡ್​ನ ಫಾರೆಸ್ಟ್ ಗಂಪ್‌ ಎಂಬ ಚಿತ್ರದ ರಿಮೇಕ್​ ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.