ETV Bharat / entertainment

ಹಿಮಾಚಲ ಪ್ರಕೃತಿ ವಿಕೋಪ ಸಂತ್ರಸ್ತ ಕುಟುಂಬಗಳಿಗೆ ₹25 ಲಕ್ಷ ನೆರವು ನೀಡಿದ ಅಮೀರ್​ ಖಾನ್​ - aamir khan social work

Aamir Khan: ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರಕೃತಿ ವಿಕೋಪದಿಂದಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಬಾಲಿವುಡ್ ನಟ ಅಮೀರ್​ ಖಾನ್​ ಸಹಾಯಹಸ್ತ ಚಾಚಿದ್ದಾರೆ.

actor aamir khan
ನಟ ಅಮೀರ್​ ಖಾನ್​​
author img

By ETV Bharat Karnataka Team

Published : Sep 24, 2023, 12:25 PM IST

ಇತ್ತೀಚೆಗೆ ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ಭಾರಿ ಪ್ರಮಾಣದ ಪ್ರಕೃತಿ ವಿಕೋಪಕ್ಕೆ ತುತ್ತಾದ ಸಂತ್ರಸ್ತ ಕುಟುಂಬಗಳಿಗೆ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಹಣಕಾಸು ಸಹಾಯ ಮಾಡಿದ್ದಾರೆ ಎಂದು ವರದಿಯಾಗಿದೆ. ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರು ಅಮೀರ್​ ಖಾನ್​​ 25 ಲಕ್ಷ ರೂ. ನೆರವು ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ನಟನಿಗೆ ಕೃತಜ್ಞತೆ ಸಲ್ಲಿಸಿದ ಸುಖ್ವಿಂದರ್ ಸಿಂಗ್ ಸುಖು, ಅಮೀರ್ ಖಾನ್ ಅವರ ಹಣಕಾಸು ನೆರವು ಪುನರ್ವಸತಿ ಕಾರ್ಯಗಳಿಗೆ ಬಳಕೆಯಾಗಲಿದೆ. ದುರಂತದ ಪರಿಣಾಮ ಎದುರಿಸುತ್ತಿರುವ ಸಂತ್ರಸ್ತ ಕುಟುಂಬಗಳು ಚೇತರಿಸಿಕೊಳ್ಳಲು ಸಹಾಯ ಮಾಡುವುದು ಅವರ ಪ್ರಮುಖ ಉದ್ದೇಶವಾಗಿದೆ. ಈ ನೆರವು ಅಗತ್ಯವಿರುವ ಜನರಿಗೆ ತಲುಪುತ್ತದೆ. ಆಗಸ್ಟ್ ತಿಂಗಳ ಕೊನೆಯಲ್ಲಿ ಉಂಟಾದ ನೈಸರ್ಗಿಕ ವಿಕೋಪಗಳಿಂದ ಸಂತ್ರಸ್ತರಾದವರ ಜೀವನದಲ್ಲಿ ಅಮೀರ್ ಖಾನ್ ಸಹಾಯ ಗಮನಾರ್ಹ ಬದಲಾವಣೆ ತರಲಿದೆ ಎಂದು ಹೇಳಿದ್ದಾರೆ.

ಅಮೀರ್ ಖಾನ್ ಸದ್ಯ ಸಿನಿಮಾಗಳಿಂದ ವಿರಾಮ ಪಡೆದಿದ್ದಾರೆ. ಸಂಪೂರ್ಣ ಸಮಯವನ್ನು ಕುಟುಂಬಕ್ಕೆ ಮೀಸಲಿಟ್ಟಿದ್ದಾರೆ. ಸಾರ್ವಜನಿಕವಾಗಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಇವರ ಮಗಳು ಇರಾ ಖಾನ್ ತಮ್ಮ ಗೆಳೆಯ ನೂಪುರ್ ಶಿಖರೆ ಎಂಬವರನ್ನು ಮದುವೆ ಆಗುತ್ತಿದ್ದಾರೆ. ಅದ್ಧೂರಿ ವಿವಾಹದ ತಯಾರಿಯಲ್ಲಿ ನಟ ನಿರತರಾಗಿದ್ದಾರೆ ಎನ್ನಲಾಗುತ್ತಿದೆ. ಆದಾಗ್ಯೂ, 'ಮಿಸ್ಟರ್ ಪರ್ಫೆಕ್ಷನಿಸ್ಟ್' ಮುಂಬರುವ ಪ್ರೊಜೆಕ್ಟ್​​​ ಸಲುವಾಗಿ ನಿರ್ದೇಶಕರು, ನಿರ್ಮಾಪಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂಬ ವರದಿಗಳಿವೆ.

ಇದನ್ನೂ ಓದಿ: 'ಕಣ್ಣಪ್ಪ' ಸಿನಿಮಾದಲ್ಲಿ ಶಿವ-ಪಾರ್ವತಿಯಾಗಿ ಪ್ರಭಾಸ್, ನಯನತಾರಾ; 16 ವರ್ಷಗಳ ಬಳಿಕ ಒಟ್ಟಿಗೆ ಅಭಿನಯ?

ಅಮೀರ್​ ಖಾನ್ ನಟನೆಯ​ ಕೊನೆಯ ಚಿತ್ರ 'ಲಾಲ್ ಸಿಂಗ್ ಚಡ್ಡಾ'. ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಭಾರಿ ಹಿನ್ನಡೆ ಕಂಡಿತ್ತು. ಶೀಘ್ರದಲ್ಲೇ ಹೊಸ ಸಿನಿಮಾ ಘೋಷಿಸಲಿದ್ದಾರೆ ಎಂಬ ಮಾಹಿತಿ ಇದೆ.

ಇದನ್ನೂ ಓದಿ: ರಾಘ್​ನೀತಿ ವಿವಾಹೋತ್ಸವ: ಕೇಜ್ರಿವಾಲ್​, ಭಗವಂತ್​ ಮಾನ್​ ಆಗಮನ; ಅತಿಥಿಗಳಿಗೆ ವಿಶೇಷ ಭಕ್ಷ್ಯಗಳ ತಯಾರಿ

ಇತ್ತೀಚೆಗೆ ಸಿನಿಮಾ ವಿಮರ್ಷಕ ತರಣ್​ ಆದರ್ಶ್​,​ ಅಮೀರ್​​ ಹೊಸ ಸಿನಿಮಾ ಕುರಿತು ಮಾಹಿತಿ ಹಂಚಿಕೊಂಡಿದ್ದರು. ಮುಂಬರುವ ಸಿನಿಮಾ 2024ರ ಡಿಸೆಂಬರ್​ 20 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎಂದು ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್ X ನಲ್ಲಿ ತಿಳಿಸಿದ್ದರು. ಅಮೀರ್​ ಖಾನ್​ ಪ್ರೊಡಕ್ಷನ್ಸ್​ನ 16 (ಟೈಟಲ್​ ಫೈನಲ್​ ಆಗಿಲ್ಲ) ಚಿತ್ರ ಎಂದು ತರಣ್​ ಆದರ್ಶ್​ ತಿಳಿಸಿದ್ದು ಬಿಟ್ಟರೆ ಅಮೀರ್​ ಅಥವಾ ಚಿತ್ರತಂಡದಿಂದ ಅಧಿಕೃತವಾಗಿ ಸಿನಿಮಾ ಘೋಷಣೆ ಆಗಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.