ETV Bharat / entertainment

ಜ.3ಕ್ಕೆ ಅಮೀರ್​​ ಪುತ್ರಿಯ ವಿವಾಹ: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಇರಾ- ನೂಪುರ್ - ಅಮೀರ್​ ಖಾನ್ ಮಗಳು ಇರಾ

ಇರಾ ಖಾನ್ ಮತ್ತು ನೂಪುರ್ ಶಿಖರೆ ಜನವರಿ 3ರಂದು ದಾಂಪತ್ಯ ಜೀವನ ಆರಂಭಿಸಲಿದ್ದಾರೆ.

ನೂಪುರ್ ಶಿಖರೆ ಇರಾ ಖಾನ್
Nupur Shikhare Ira Khan
author img

By ETV Bharat Karnataka Team

Published : Dec 29, 2023, 12:44 PM IST

ಬಾಲಿವುಡ್​ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಖ್ಯಾತಿಯ ಅಮೀರ್ ಖಾನ್​ ಪುತ್ರಿಯ ವಿವಾಹಕ್ಕೆ ಸಿದ್ಧತೆ ನಡೆದಿದೆ. ವಿವಾಹಕ್ಕೆ ದಿನಗಣನೆ ಆರಂಭವಾಗಿದ್ದು, ಕುಟುಂಬಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ. ​ಇರಾ ಖಾನ್ ಅವರು ನೂಪುರ್ ಶಿಖರೆ ಅವರೊಂದಿಗೆ 2024ರ ಜನವರಿ 3ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಇರಾ ಖಾನ್​ ಗೆಳೆಯ ನೂಪುರ್ ಶಿಖರೆ ಅವರೊಂದಿಗೆ ಇಟಲಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಎರಡು ತಿಂಗಳ ನಂತರ ಆಪ್ತರಿಗಾಗಿ ಸ್ಪೆಷಲ್​ ಪಾರ್ಟಿ ಇಟ್ಟುಕೊಂಡಿದ್ದರು. ಈ ಖಾಸಗಿ ಕಾರ್ಯಕ್ರಮದಲ್ಲಿ ಇಮ್ರಾನ್ ಖಾನ್, ಅಮೀರ್ ಖಾನ್​​ ಅವರ ಮಾಜಿ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್ ಮತ್ತು ನಟಿ ಫಾತಿಮಾ ಸನಾ ಶೇಖ್ ಸೇರಿದಂತೆ ಕೆಲವರು ಕಾಣಿಸಿಕೊಂಡಿದ್ದರು. ಸದ್ಯ ಮದುವೆ ದಿನ ಸಮೀಪಿಸುತ್ತಿದೆ. ವಿವಾಹದ ಸಂಬಂಧ ಮಾಹಿತಿಗಳು ಹೊರಬೀಳುತ್ತಿವೆ.

ಮದುವೆಗೆ ಇನ್ನೊಂದು ವಾರವೂ ಕೂಡ ಬಾಕಿ ಉಳಿದಿಲ್ಲ. ​ಇರಾ ಖಾನ್ ಹಾಗೂ ನೂಪುರ್ ಶಿಖರೆ ಈಗಾಗಲೇ ಮದುವೆ ಮುನ್ನದ ಶಾಸ್ತ್ರ, ಆಚರಣೆಗಳನ್ನು ಆರಂಭಿಸಿದ್ದಾರೆ. ಮಹಾರಾಷ್ಟ್ರದ ಸಂಪ್ರದಾಯವನ್ನು ಪಾಲಿಸಿ ಜನವರಿ 3ರಂದು ಮದುವೆ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ. ಸೂಪರ್​ ಸ್ಟಾರ್ ಅಮೀರ್ ಖಾನ್ ತಮ್ಮ ಮಗಳ ಮದುವೆ ಸಂಭ್ರಮದೊಂದಿಗೆ 2024ನೇ ವರ್ಷವನ್ನು ಆರಂಭಿಸಲು ಸಜ್ಜಾಗಿದ್ದಾರೆ.

ಆಪ್ತ ಮೂಲಗಳ ಪ್ರಕಾರ, ಇರಾ ಮತ್ತು ನೂಪುರ್ ಬಾಂದ್ರಾದಲ್ಲಿನ ರಾಯಲ್​ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್‌ನಲ್ಲಿ ಮದುವೆ ಆಗಲಿದ್ದಾರೆ. ಜನವರಿ 6ರಿಂದ 10ರ ನಡುವೆ, ಎರಡು ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಿದ್ದಾರೆ. ದೆಹಲಿ ಮತ್ತು ಜೈಪುರದಲ್ಲಿ ರಿಸೆಪ್ಷನ್​ ಪಾರ್ಟಿ ನಡೆಯಲಿದೆ.

ಇದನ್ನೂ ಓದಿ: 'ಸಲಾರ್'​​ ಕಲೆಕ್ಷನ್​​: ಭಾರತದಲ್ಲೇ 300 ಕೋಟಿ ದಾಟಿದ ಪ್ರಭಾಸ್ ಸಿನಿಮಾ!

ವರದಿಗಳ ಪ್ರಕಾರ, ಅಮೀರ್ ಖಾನ್​ ತಮ್ಮ ಮಗಳ ದಾಂಪತ್ಯ ಜೀವನದ ಬಗ್ಗೆ ಬಹಳ ಉತ್ಸುಕರಾಗಿದ್ದಾರೆ. ನವ ದಂಪತಿಗೆ ಶುಭ ಹಾರೈಸಲು ಬಿ-ಟೌನ್ ಸ್ನೇಹಿತರು ಮತ್ತು ಗೆಳೆಯರನ್ನು ವೈಯಕ್ತಿಕವಾಗಿ ಆಹ್ವಾನಿಸಿದ್ದಾರೆ. ಆದರೆ, ಹೆಚ್ಚಿನ ಸಂಖ್ಯೆಯ ಕಲಾವಿದರು ವೆಕೇಶನ್​​ನಲ್ಲಿದ್ದಾರೆ. ಮದುವೆಗೆ ಸಾಧ್ಯವಾಗದಿದ್ದರೂ ಆರತಕ್ಷತೆ ಸಮಾರಂಭದಲ್ಲಿ ಬಾಲಿವುಡ್​​ ದಂಡೇ ಆಗಮಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ರಾಜ್ಯಾದ್ಯಂತ 'ಕಾಟೇರ' ಅಬ್ಬರ; ಚಾಲೆಂಜಿಂಗ್​ ಸ್ಟಾರ್​ ಅಭಿಮಾನಿಗಳ ಸಂಭ್ರಮ

ವರ ನೂಪುರ್ ಶಿಖರೆ ಅವರ ಸಾಂಸ್ಕೃತಿಕ ಹಿನ್ನೆಲೆಗೆ ಅನುಗುಣವಾಗಿ, ಮಹಾರಾಷ್ಟ್ರ ಶೈಲಿಯಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದೆ. ಮೂಲಗಳ ಪ್ರಕಾರ, ಸಾಂಪ್ರದಾಯಿಕ ಆಭರಣಗಳನ್ನು ಖರೀದಿಸಲಾಗಿದೆ. ಮದುವೆಯಲ್ಲಿ ವೈವಿಧ್ಯಮಯ ತಿಂಡಿ - ತಿನಿಸುಗಳಿಗೆ ವ್ಯವಸ್ಥೆ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.