ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಮತ್ತು ಪತ್ನಿ ಆಲಿಯಾ ಸಿದ್ದಿಕಿ ಅವರ ಸುದ್ದಿ ಆಗಾಗ್ಗೆ ಮುನ್ನಲೆಗೆ ಬರುತ್ತಿರುತ್ತದೆ. ಈ ದಂಪತಿ ತಮ್ಮ ನಡುವೆ ಏನೂ ಸರಿಯಿಲ್ಲ ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ. ದಾಂಪತ್ಯದಲ್ಲಿ ಬಿರುಕು ವಿಚಾರ ಆಗಾಗ್ಗೆ ಸದ್ದು ಮಾಡುತ್ತಿರುತ್ತದೆ.
ಆಲಿಯಾ ಸಿದ್ದಿಕಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಸ್ನೇಹಿತನ ಜೊತೆಗಿರುವ ಫೋಟೋ ಶೇರ್ ಮಾಡಿದ್ದಾರೆ. ಇಬ್ಬರೂ ಪರಸ್ಪರ ಹತ್ತಿರ ಕುಳಿತು, ನಗುಮೊಗದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋ ಸದ್ದು ಮಾಡುತ್ತಿದ್ದಂತೆ ತಮ್ಮ ಸರ್ಮೇಮ್ (ಸಿದ್ದಿಕಿ) ಬದಲಾಯಿಸಿಕೊಳ್ಳಿ ಎಂಬ ಸಲಹೆ ಆಲಿಯಾ ಸಿದ್ದಿಕಿ ಅವರಿಗೆ ಸೋಷಿಯಲ್ ಮೀಡಿಯಾ ಬಳಕೆದಾರರಿಂದ ಬಂದಿದೆ. ತಮ್ಮ ಉಪನಾಮವನ್ನು ಬದಲಾಯಿಸುವಂತೆ ಕೇಳಿಕೊಂಡ ಇನ್ಸ್ಟಾಗ್ರಾಮ್ ಬಳಕೆದಾರರ ಕಾಮೆಂಟ್ಗೆ ಸದ್ಯ ಆಲಿಯಾ ಪ್ರತಿಕ್ರಿಯಿಸಿದ್ದಾರೆ.
ಸಂತೋಷವಾಗಿರುವುದು ನನ್ನ ಹಕ್ಕು ಅಲ್ಲವೇ?: ಫೋಟೋವೊಂದನ್ನು ಶೇರ್ ಮಾಡಿದ ನವಾಜುದ್ದೀನ್ ಸಿದ್ದಿಕಿ ಪತ್ನಿ ಆಲಿಯಾ ಸಿದ್ದಿಕಿ, "ಅಮೂಲ್ಯವಾದ ಸಂಬಂಧದಿಂದ ಹೊರಬರಲು 19 ವರ್ಷಗಳಿಗೂ ಹೆಚ್ಚು ಸಮಯ ತೆಗೆದುಕೊಂಡಿತು. ಆದರೆ, ನನ್ನ ಜೀವನದಲ್ಲಿ ನನ್ನ ಮಕ್ಕಳು ಯಾವಾಗಲೂ ನನ್ನ ಜೊತೆಗಿದ್ದಾರೆ ಮತ್ತು ನನ್ನೊಂದಿಗೆ ಮುಂದುವರಿಯುತ್ತಿದ್ದಾರೆ.
ಆದಾಗ್ಯೂ, ಸ್ನೇಹಕ್ಕಿಂತ ಮಿಗಿಲು ಎಂಬ ಕೆಲ ದೊಡ್ಡ ಸಂಪರ್ಕಗಳಿವೆ. ಇದು (ಶೇರ್ ಮಾಡಿರುವ ಫೋಟೋ ಕುರಿತಾಗಿ) ಅವುಗಳಲ್ಲಿ ಒಂದು. ನಾನು ಈ ಸ್ನೇಹದ ಬಗ್ಗೆ ನಿಜವಾಗಿಯೂ ಸಂತೋಷ ಪಡುತ್ತೇನೆ. ಹಾಗಾಗಿ ನಾನು ನನ್ನ ಸಂತೋಷವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಸಂತೋಷವಾಗಿರುವುದು ನನ್ನ ಹಕ್ಕು ಅಲ್ಲವೇ?" ಎಂದು ಬರೆದುಕೊಂಡಿದ್ದಾರೆ.
ಅತಿ ಶೀಘ್ರದಲ್ಲಿ ಹೆಸರು ಬದಲಾಯಿಸುವೆ: ಈ ಫೋಟೋ ಹೊರಬರುತ್ತಿದ್ದಂತೆ ಸಾಮಾಜಿಕ ಜಾಲತಾಣ ಬಳಕೆದಾರರು ಪ್ರತಿಕ್ರಿಯಿಸಲು ಪ್ರಾರಂಭಿಸಿದ್ದಾರೆ. ಪೋಸ್ಟ್‌ಗೆ ಪ್ರತಿಕ್ರಿಯಿಸಿದ ವ್ಯಕ್ತಿಯೊಬ್ಬರು, "ನಿಮ್ಮ ಉಪನಾಮವನ್ನು ಬದಲಾಯಿಸಿ" ಎಂದು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಆಲಿಯಾ, 'ಅತಿ ಶೀಘ್ರದಲ್ಲಿ' ಎಂದು ಉತ್ತರಿಸಿದರು. ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದು, 'ಸಂತೋಷವಾಗಿರಿ, ವಿಷಕಾರಿ ಮನುಷ್ಯನನ್ನು ಬಿಡುತ್ತಿರುವುದಕ್ಕೆ ಅಭಿನಂದನೆಗಳು' ಎಂದು ತಿಳಿಸಿದ್ದಾರೆ. ಮತ್ತೋರ್ವ ಅಭಿಮಾನಿ ಪ್ರತಿಕ್ರಿಯಿಸಿ, 'ಬಹಳ ಖುಷಿ ಆಗಿದೆ, ಉತ್ತಮ ಭವಿಷ್ಯ ನಿಮ್ಮದಾಗಲಿ' ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಪ್ರಶಾಂತ್ ನೀಲ್ ನಿರ್ದೇಶನದಲ್ಲಿ NTR 31: ಆರ್‌ಆರ್‌ಆರ್ ಸ್ಟಾರ್ಗೆ ಜೋಡಿಯಾಗಲಿದ್ದಾರೆ ಪ್ರಿಯಾಂಕಾ ಚೋಪ್ರಾ
ಆಲಿಯಾ ಈ ವರ್ಷದ ಮಾರ್ಚ್‌ನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಚಿತ್ರವನ್ನು ಪೋಸ್ಟ್ ಮಾಡಿ, ತಮ್ಮ ಹೆಸರು ಬದಲಾವಣೆಯ ಬಗ್ಗೆ ಮಾತನಾಡಿದ್ದರು. "ನನ್ನ ಹೆಸರು ಶ್ರೀಮತಿ ಆಲಿಯಾ ಸಿದ್ದಿಕಿಗೆ ಸಂಬಂಧಿಸಿದಂತೆ, ಇದು ಕೆಲವೇ ದಿನಗಳಿಗಾಗಿ, ನಾನು ಅಧಿಕೃತವಾಗಿ ವಿಚ್ಛೇದನ ಪಡೆದರೆ, ನನ್ನ ಮೂಲ ಮತ್ತು ಹಿಂದಿನ ಗುರುತಿಗೆ ಮರಳುತ್ತೇನೆ. ನಾನು ಶಾಶ್ವತವಾಗಿ ಮತ್ತು ಅಧಿಕೃತವಾಗಿ ನನ್ನ ಹೆಸರನ್ನು ಬದಲಾಯಿಸುತ್ತೇನೆ. ಶ್ರೀಮತಿ ಆಲಿಯಾ ಸಿದ್ದಿಕಿ ಇಂದ ಮಿಸ್ ಅಂಜನಾ ಕಿಶೋರ್ ಪಾಂಡೆ" ಎಂದು ಬದಲಾಯಿಸಲಾಗುವುದು ಎಂದು ತಿಳಿಸಿದ್ದರು.
ಇದನ್ನೂ ಓದಿ: ಮದುವೆ ಬಗ್ಗೆ ಬಹಿರಂಗಪಡಿಸಿದ ನಟ ಪ್ರಭಾಸ್: ಎಲ್ಲಿ, ಯಾವಾಗ, ವಧು ಯಾರು?