ETV Bharat / entertainment

ಆಡೇ ನಮ್ ಗಾಡ್​​.. ಅ.6ಕ್ಕೆ ಆಡಿನ ಕಥೆ ತೆರೆ ಮೇಲೆ - ಸ್ಯಾಂಡಲ್​ವುಡ್​​

Aade Nam God: ಆಡೇ ನಮ್ ಗಾಡ್ ಎಂಬ ವಿಭಿನ್ನ ಶೀರ್ಷಿಕೆಯುಳ್ಳ ಚಿತ್ರದ ಟ್ರೇಲರ್​ ಅನಾವರಣಗೊಂಡಿದೆ.

Aade Nam God
ಆಡೇ ನಮ್ ಗಾಡ್​​ ಟ್ರೇಲರ್​ ಅನಾವರಣ
author img

By ETV Bharat Karnataka Team

Published : Oct 4, 2023, 1:48 PM IST

ಆಡನ್ನು ದೇವರಾಗಿ ಪೂಜೆ ಮಾಡಿದಾಗ ಏನೆಲ್ಲಾ ಆಗುತ್ತದೆ ಎನ್ನುವ ಕಥಾಹಂದರ ಹೊಂದಿರುವ 'ಆಡೇ ನಮ್ ಗಾಡ್​' ಸಿನಿಮಾದ ಟ್ರೇಲರ್ ಅನಾವರಣಗೊಂಡಿದೆ. ಒಂದೊಳ್ಳೆ ಸಂದೇಶದೊಂದಿಗೆ ಹಾಸ್ಯಮಯ ಕಥೆ ಹೆಣೆದಿದ್ದಾರೆ ಹಿರಿಯ ನಿರ್ದೇಶಕ ಪಿ.ಹೆಚ್ ವಿಶ್ವನಾಥ್. ರಾಮಾ ರಾಮಾ ರೇ ಸಿನಿಮಾದ ನಟರಾಜ್ ಅಭಿನಯದ ಆಡೇ ನಮ್ ಗಾಡ್​​ ಚಿತ್ರದ ಟ್ರೇಲರ್​ ಬಿಡುಗಡೆ ಕಾರ್ಯಕ್ರಮದಲ್ಲಿ, ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದೆ ಚಿತ್ರತಂಡ.

ಪ್ರೇಕ್ಷಕರಿಗೆ ಕಥೆ ಹಿಡಿಸಲಿದೆ.. ನಿರ್ದೇಶಕ ಪಿಹೆಚ್ ವಿಶ್ವನಾಥ್ ಮಾತನಾಡಿ, ಸಿನಿಮಾ ಮಾಡಿದ ಮೇಲೆ ಸಿನಿಮಾದ ಕುರಿತು ನಿರ್ದೇಶಕರು ಮಾತನಾಡುವುದು ಏನೂ ಇರುವುದಿಲ್ಲ. ಸಿನಿಮಾನೇ ಏನಾದರೂ ಹೇಳಬೇಕು. ಇಂದಿನ ಟ್ರೆಂಡ್​​ಗೆ ಹೊಂದುವ ಸಿನಿಮಾ ಇದು. ಇಂದಿನ ಪ್ರೇಕ್ಷಕರಿಗೆ ಕಥೆ ಹಿಡಿಸಲಿದೆ. ಗಂಭೀರ ವಿಷಯವನ್ನು ಲಘು ಹಾಸ್ಯದೊಂದಿಗೆ ಹೇಳಿದ್ದೇವೆ. ಹೊಸ ಹುಡುಗರು ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ. ಇವರು ಏನು ಮಾಡಿದ್ದಾರೆ ಎಂಬ ಕುತೂಹಲದಿಂದ ಪ್ರೇಕ್ಷಕರು ಬಂದು ಸಿನಿಮಾ ನೋಡಬೇಕು ಎಂದು ತಿಳಿಸಿದರು.

Aade Nam God
ಆಡೇ ನಮ್ ಗಾಡ್​​ ಚಿತ್ರತಂಡ

ನಟರಾಜ್ ಮಾತನಾಡಿ, ನನ್ನದು ಓರ್ವ ಮಧ್ಯವರ್ತಿಯ ಪಾತ್ರ. ಅವನು ಮಾಡದ ಕೆಲಸವಿಲ್ಲ. ಸರ್ ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ನಿಯತ್ತನ್ನು ನಂಬಿಕೊಂಡಿರುವ ಪಾತ್ರ ಇದು. ಒಂದೊಳ್ಳೆ ಪಾತ್ರ ಕೊಟ್ಟಿದ್ದಕ್ಕೆ ನಿರ್ದೇಶಕ ಪಿ ಹೆಚ್ ವಿಶ್ವನಾಥ್ ಸರ್​ಗೆ ಧನ್ಯವಾದ. ಸಂಭಾಷಣೆ ಬರೆಯಲು ಸಹ ಅವಕಾಶ ಸಿಕ್ಕಿದೆ. ತುಂಬಾ ಖುಷಿ ಕೊಟ್ಟ ಪಯಣವಿದು ಎಂದು ತಿಳಿಸಿದರು.

ಸಮಾಜಕ್ಕೆ ಒಂದೊಳ್ಳೆ ಸಂದೇಶ.. ನಿರ್ಮಾಪಕ ಬಿ ಬಸವರಾಜ್ ಮಾತನಾಡಿ, ನಾನು ನಿವೃತ್ತ ಪ್ರೊಫೆಸರ್. ನಿರ್ದೇಶಕ ಪಿ ಹೆಚ್ ವಿಶ್ವನಾಥ್ ಅವರ ಪರಿಚಯವಾದಾಗ ಹೊಸ ಆಸೆ ಹುಟ್ಟಿತ್ತು. ಸಿನಿಮಾ ಮಾಡಬೇಕು ಎಂದು ಅನಿಸಿತ್ತು. ಇದೀಗ ಬಹಳ ಸಂತೋಷವಾಗುತ್ತಿದೆ. ಸಮಾಜಕ್ಕೆ ಒಂದೊಳ್ಳೆ ಮೆಸೇಜ್ ಕೊಟ್ಟರೆ ನನ್ನ ವೃತ್ತಿ ಜೀವನ ಸಾರ್ಥಕವಾಗುತ್ತದೆ ಎನ್ನುವ ಉದ್ದೇಶದಿಂದ ಈ ಚಿತ್ರ ನಿರ್ಮಾಣ ಮಾಡಿದ್ದೇನೆ. ಇಡೀ ತಂಡ ಸೇರಿ ಒಂದೊಳ್ಳೆ ಸಿನಿಮಾ ಮಾಡಿದ್ದೇವೆ ಎಂದು ತಿಳಿಸಿದರು.

  • " class="align-text-top noRightClick twitterSection" data="">

ಈ ಚಿತ್ರದಲ್ಲಿ ನಟರಾಜ್, ಮಂಜುನಾಥ್ ಜಂಬೆ, ಅಜಿತ್ ಬೊಪ್ಪನಹಳ್ಳಿ, ಅನೂಪ್ ಶೂನ್ಯ, ಸಾರಿಕ ರಾವ್, ಬಿ ಸುರೇಶ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಪಿ.ಕೆ. ಹೆಚ್ ದಾಸ್ ಛಾಯಾಗ್ರಹಣ, ಬಿ.ಎಸ್ ಕೆಂಪರಾಜು ಸಂಕಲನ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ, ಅಕ್ಷಯ್ ವಿಶ್ವನಾಥ್ ಚಿತ್ರಕಥೆ-ಸಹ ನಿರ್ದೇಶನ ಈ ಚಿತ್ರಕ್ಕಿದೆ.

ಇದನ್ನೂ ಓದಿ: ಗನ್ಸ್ ಆ್ಯಂಡ್​​ ರೋಸಸ್ ಸಿನಿಮಾ ಸಾಂಗ್​​​ಗೆ ದನಿಯಾದ ಸ್ಟಾರ್ ಸಿಂಗರ್ ವಿಜಯ್​​ ಪ್ರಕಾಶ್

ಕನ್ನಡ ಚಿತ್ರರಂಗದಲ್ಲಿ ಪಂಚಮವೇದ, ಶ್ರೀಗಂಧ, ಅರಗಿಣಿ, ಅರುಣೋದಯ, ರಂಗೋಲಿ, ಅಂಡಮಾನ್, ಮುಂಜಾನೆ ಮಂಜು, ಮುಸುಕು ಅಂತಹ ಸಿನಿಮಾಗಳನ್ನು ಕೊಟ್ಟಿದ್ದಾರೆ ಪಿ.ಹೆಚ್ ವಿಶ್ವನಾಥ್. ಅಂಬರೀಶ್, ಶಿವರಾಜ್​ಕುಮಾರ್, ರಮೇಶ್ ಅರವಿಂದ್ ಅಂತಹ ಸ್ಟಾರ್ ನಟರ ಸಿನಿಮಾ ನಿರ್ದೇಶನ ಮಾಡಿ ಸಕ್ಸಸ್ ಕಂಡಿರುವ ಇವರು ಕೆಲ ವರ್ಷಗಳ ಬಳಿಕ ವಿಭಿನ್ನ ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: ಧರ್ಮಣ್ಣನ 'ರಾಜಯೋಗ' ಆರಂಭ...ಮಹಿಳೆಯರಿಂದ ಟ್ರೇಲರ್​ ಅನಾವರಣ

ಆರ್.ಕೆ ಸ್ವಾಮಿನಾಥನ್ ಸಂಗೀತ, ಶಶಿಕುಮಾರ್ ಎಸ್ ಹಿನ್ನೆಲೆ ಸಂಗೀತದ ಹಾಡುಗಳಿಗೆ ಹೃದಯ ಶಿವ, ನಿತಿನ್ ನಾರಾಯಣ್ ಸಾಹಿತ್ಯ ಬರೆದಿದ್ದು, ರವೀಂದ್ರ ಸೊರಗಾವಿ, ಚೇತನ್ ನಾಯಕ್ ಧ್ವನಿಯಾಗಿದ್ದಾರೆ. ಬಿ.ಬಿ ಆರ್ ಫಿಲಂಸ್ ಹಾಗೂ ಎವೆರೆಸ್ಟ್ ಇಂಡಿಯಾ ಎಂಟರ್ ಟೈನರ್ಸ್ ಬ್ಯಾನರ್ ಅಡಿ ಪ್ರೊ.ಬಿ. ಬಸವರಾಜ್ ಹಾಗೂ ರೇಣುಕಾ ಬಸವರಾಜ್ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಸದ್ಯ ಟ್ರೈಲರ್​ನಿಂದಲೇ ಗಮನ ಸೆಳೆದಿರೋ ಆಡೇ ನಮ್ ಗಾಡ್​​ ಸಿನಿಮಾ ಇದೇ ಅಕ್ಟೋಬರ್ 6ಕ್ಕೆ ಪ್ರೇಕ್ಷಕರ‌ ಮುಂದೆ ಬರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.