ETV Bharat / entertainment

ಅವಳಿ ಮಕ್ಕಳೊಂದಿಗೆ ಓಣಂ ಆಚರಿಸಿದ ನಯನತಾರಾ ವಿಘ್ನೇಶ್​.. ಫೋಟೋ ವೈರಲ್​ - ದೀರ್ಘಕಾಲದ ಗೆಳೆಯ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್

ನಟಿ ನಯನತಾರಾ ಇತ್ತೀಚೆಗೆ ತಮ್ಮ ಮಕ್ಕಳು ಮತ್ತು ಪತಿ ವಿಘ್ನೇಶ್ ಶಿವನ್ ಅವರೊಂದಿಗೆ ಓಣಂ ಹಬ್ಬವನ್ನು ಆಚರಿಸಿದರು. ನಯನತಾರಾ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿಲ್ಲವಾದರೂ ಅವರ ಪತಿ ಆಗಾಗ್ಗೆ ಕುಟುಂಬದ ಕ್ಷಣಗಳನ್ನು ಹಂಚಿಕೊಳ್ಳುತ್ತಿರುತ್ತಾರೆ..

Nayanthara and Vignesh Shivan  sneak peek into Nayanthara  Onam celebrations with sons  Onam celebrations in Kerala  ಅವಳಿ ಮಕ್ಕಳನೊಂದಿಗೆ ಓಣಂ ಆಚರಿಸಿದ ನಯನತಾರಾ ವಿಘ್ನೇಶ್​ ಮಕ್ಕಳು ಮತ್ತು ಪತಿ ವಿಘ್ನೇಶ್ ಶಿವನ್ ಅವರೊಂದಿಗೆ ಓಣಂ ಹಬ್ಬ  ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯ  ಸೌತ್ ಇಂಡಸ್ಟ್ರಿಯ ಯಶಸ್ವಿ ನಟಿ ನಯನತಾರಾ  ವೈಯಕ್ತಿಕ ಜೀವನದ ಬಗ್ಗೆ ಚರ್ಚೆ  ದೀರ್ಘಕಾಲದ ಗೆಳೆಯ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್  ನಯನತಾರಾ ಮತ್ತು ವಿಘ್ನೇಶ್ ಅವಳಿ ಗಂಡುಮಕ್ಕಳ
ಅವಳಿ ಮಕ್ಕಳನೊಂದಿಗೆ ಓಣಂ ಆಚರಿಸಿದ ನಯನತಾರಾ ವಿಘ್ನೇಶ್​.. ಫೋಟೋ ವೈರಲ್​
author img

By ETV Bharat Karnataka Team

Published : Aug 28, 2023, 9:16 AM IST

ಹೈದರಾಬಾದ್​: ಸೌತ್ ಇಂಡಸ್ಟ್ರಿಯ ಯಶಸ್ವಿ ನಟಿ ನಯನತಾರಾ ಆಗಾಗ್ಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಚರ್ಚೆ ಆಗುತ್ತಿರುತ್ತಾರೆ. ಕಳೆದ ವರ್ಷ ಅವರು ತಮ್ಮ ದೀರ್ಘಕಾಲದ ಗೆಳೆಯ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ವಿವಾಹವಾದರು. ಮದುವೆಯಾದ ಕೆಲವು ತಿಂಗಳ ನಂತರ, ನಯನತಾರಾ ಮತ್ತು ವಿಘ್ನೇಶ್ ಅವಳಿ ಗಂಡುಮಕ್ಕಳಿಗೆ ಪೋಷಕರಾದರು.

ಕೇರಳದಲ್ಲಿ ಆಗಸ್ಟ್ 27 ರಿಂದ ಓಣಂ ಹಬ್ಬ ಪ್ರಾರಂಭವಾಗಿದೆ. ಈ ಹಬ್ಬ 10 ದಿನಗಳ ಕಾಲ ನಡೆಯುವ ಹಬ್ಬವಾಗಿದೆ. ಪ್ರತಿಯೊಬ್ಬರೂ ತಮ್ಮ ಕುಟುಂಬದೊಂದಿಗೆ ಈ ವಿಶೇಷ ಹಬ್ಬವನ್ನು ಆಚರಿಸುತ್ತಾರೆ. ಅದರಂತೆ ನಯನತಾರಾ ಮತ್ತು ವಿಘ್ನೇಶ್ ಅವರು ತಮ್ಮ ಮಕ್ಕಳೊಂದಿಗೆ ಮೊದಲ ಬಾರಿಗೆ ಓಣಂ ಆಚರಿಸುತ್ತಿರುವುದು ಕಂಡು ಬಂದಿತು. ಚಿತ್ರಗಳಲ್ಲಿ, ಪೋಷಕರಾದ ನಯನತಾರಾ ಮತ್ತು ವಿಘ್ನೇಶ್ ಇಬ್ಬರೂ ತುಂಬಾ ಉತ್ಸಾಹ ಮತ್ತು ಸಂತೋಷದಿಂದ ಕಾಣುತ್ತಿದ್ದಾರೆ. ಈ ಹಬ್ಬದಂದು ದಂಪತಿಗಳು ಮಕ್ಕಳಿಗೆ ಸಾಂಪ್ರದಾಯಿಕ ಬಟ್ಟೆಗಳನ್ನು ತೊಡಿಸಿದ್ದರು. ನಯನತಾರಾ ಅವರ ಅವಳಿ ಮಕ್ಕಳು ಧೋತಿ ಧರಿಸಿದ್ದು, ಓಣಂ ಔತಣವನ್ನು ಸವಿಯುತ್ತಿರುವ ಮುದ್ದಾದ ಚಿತ್ರಗಳು ಗಮನ ಸೆಳೆಯುತ್ತಿವೆ.

ಓಣಂ ಹಬ್ಬ ಆಚರಣೆ ಕುರಿತು ನಯನತಾರಾ ಪತಿ ವಿಘ್ನೇಶ್ ಶಿವನ್ ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಹಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅವಳಿ ಮಕ್ಕಳು ಓಣಂ ಔತಣವನ್ನು ಸವಿಯುತ್ತಿರುವಾಗ ಹಿಂಬದಿಯಿಂದ ಅವರ ಫೋಟೋಗಳನ್ನು ತೆಗೆಯಲಾಗಿದೆ. ಒಂದು ಫೋಟೋದಲ್ಲಿ, ನಯನತಾರಾ ಮತ್ತು ವಿಘ್ನೇಶ್ ತಮ್ಮ ಮಕ್ಕಳ ಮೇಲೆ ಪ್ರೀತಿ ತೋರುತ್ತಿರುವುದು ಕಂಡು ಬಂದಿದೆ. ಸದ್ಯ ಈ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗ್ತಿವೆ.

ಚಿತ್ರಗಳನ್ನು ಹಂಚಿಕೊಂಡಿರುವ ವಿಘ್ನೇಶ್, "ನನ್ನ ಉಯಿರ್ ಮತ್ತು ಉಲಗಮ್ ಜೊತೆಗಿನ ನನ್ನ ಮೊದಲ ಓಣಂ. ಇಲ್ಲಿ ಹಬ್ಬ ಆರಂಭವಾಗಿದೆ. ನಯನತಾರಾ ಬಿಳಿ ಉಡುಪಿನಲ್ಲಿ ಸುಂದರವಾಗಿ ಕಾಣುತ್ತಿದ್ರೆ, ವಿಘ್ನೇಶ್ ಸಾಂಪ್ರದಾಯಿಕ ಉಡುಪಿನಲ್ಲಿ ಕಂಗೊಳಿಸಿದರು. ವೈಟ್​ ಡ್ರೆಸ್​ನಲ್ಲಿ ಮಿಂಚಿದ ಈ ಜೋಡಿ ಕ್ಯಾಮೆರಾಗೆ ಪೋಸ್​ ನೀಡಿದರು.

2023 ರ ಬಹುನಿರೀಕ್ಷಿತ ಚಿತ್ರ 'ಜವಾನ್'ನಲ್ಲಿ ನಯನತಾರಾ ಕಾಣಿಸಿಕೊಳ್ಳಲಿದ್ದಾರೆ. ಇದು ಸೆಪ್ಟೆಂಬರ್ 7 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಅವರು ಶಾರುಖ್ ಖಾನ್ ಜೊತೆ ಅಭಿನಯಿಸಿದ್ದಾರೆ. ಟೀಸರ್​ನಲ್ಲಿ ನಟಿ ನಯನತಾರಾ ಅವರ ಪವರ್ ಫುಲ್ ಲುಕ್ ಅಭಿಮಾನಿಗಳ ಮನಗೆದ್ದಿದೆ.

ನಟಿ ನಯನತಾರಾ ಕಳೆದ ವರ್ಷ 2022 ರಲ್ಲಿ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಸ್ವಾಗತಿಸಿದರು. ಸ್ಟಾರ್​ ದಂಪತಿ ತಮ್ಮ ಮಕ್ಕಳ ಮೊದಲ ಓಣಂ ಹಬ್ಬದ ಮುದ್ದಾದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಓದಿ: Jawan: ಎಸ್​ಆರ್​ಕೆ ನಟನೆಯ ಜವಾನ್​ ಕ್ರೇಜ್​ - 15 ನಿಮಿಷದೊಳಗೆ ಮೊದಲ ದಿನದ ಟಿಕೆಟ್​ ಸೇಲ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.