ETV Bharat / entertainment

ಲಂಡನ್​ನಲ್ಲಿ ಸೋನಂ ಕಪೂರ್ ಸೀಮಂತ: ಅದ್ಧೂರಿ ಸಮಾರಂಭ - ಸೋನಂ ಆನಂದ ಅಹುಜಾ ದಂಪತಿ

ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ಸೋನಂ ಕಪೂರ್ ತಮ್ಮ ಅದ್ಧೂರಿ ಸೀಮಂತ ಕಾರ್ಯದ ಖುಷಿಯ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

A sneak-peak inside Sonam Kapoor's chic baby shower in London

author img

By

Published : Jun 16, 2022, 12:08 PM IST

Updated : Jun 16, 2022, 12:23 PM IST

ಮುಂಬೈ (ಮಹಾರಾಷ್ಟ್ರ): ಗರ್ಭಿಣಿಯಾಗಿರುವ ಬಾಲಿವುಡ್ ತಾರೆ ಸೋನಂ ಕಪೂರ್ ಅವರ ಸೀಮಂತ ಕಾರ್ಯಕ್ರಮವು ಇತ್ತೀಚೆಗೆ ಲಂಡನ್​ನಲ್ಲಿ ನಡೆಯಿತು. ಪತಿ ಆನಂದ ಅಹುಜಾ ಅವರೊಂದಿಗೆ ಹೊಸ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ಸೋನಂ ಕಪೂರ್ ತಮ್ಮ ಅದ್ದೂರಿ ಸೀಮಂತ ಕಾರ್ಯದ ಖುಷಿಯ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಲಂಡನ್​ನಲ್ಲಿ ಸೋನಂ ಕಪೂರ್ ಸೀಮಂತ ಕಾರ್ಯ: ಅದ್ದೂರಿ ಸಮಾರಂಭ

ಸೋನಂ ಅವರ ಸಹೋದರಿ ರಿಯಾ ಕಪೂರ್ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಲಂಡನ್​ನಲ್ಲಿರುವ ತಮ್ಮ ಮನೆಯ ಗಾರ್ಡನ್​ನಲ್ಲಿ ಸೀಮಂತ ಕಾರ್ಯ ನಡೆದಿರುವುದು ಈ ಚಿತ್ರಗಳಿಂದ ಸ್ಪಷ್ಟವಾಗುತ್ತದೆ. ಆಗಮಿಸಿದ ಪ್ರತಿಯೊಬ್ಬ ಅತಿಥಿಗೂ ವಿಶೇಷವಾದ ಖಾದ್ಯಗಳನ್ನು ತಯಾರಿಸಲಾಗಿತ್ತು ಹಾಗೂ ಹಲವಾರು ಅಂದವಾದ ವಸ್ತುಗಳನ್ನು ಕಾಣಿಕೆಯಾಗಿ ನೀಡಲಾಯಿತು.

ರಿಯಾ ಕಪೂರ್ ಸಹ ತಮ್ಮ ಇನ್ ಸ್ಟಾ ನಲ್ಲಿ ಚಿತ್ರವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ತಮ್ಮ ಹೆಸರಿನೊಂದಿಗೆ - ಎಷ್ಟೊಂದು ಸುಂದರವಾದ ಸೀಮಂತ ಕಾರ್ಯಕ್ರಮ- ಎಂದು ಬರೆದುಕೊಂಡಿದ್ದಾರೆ.

ಕಾರ್ಯಕ್ರಮದ ಹಲವಾರು ಅದ್ದೂರಿ ಸಿಂಗಾರದ ಚಿತ್ರಗಳನ್ನು ಸಹ ರಿಯಾ ಹಂಚಿಕೊಂಡಿದ್ದಾರೆ. ಇನ್ನು ಚಿತ್ರಗಳಲ್ಲಿ ಸೋನಂ ಕಪೂರ್ ಗುಲಾಬಿ ವರ್ಣದ ಸುಂದರವಾದ ಉಡುಪು ಧರಿಸಿರುವುದು ಕಾಣಿಸುತ್ತದೆ.

Last Updated : Jun 16, 2022, 12:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.