ಒಂದರ ಮೇಲೊಂದರಂತೆ ಹೊರಬರುತ್ತಿರುವ ಮಣಿಪುರದ ಘಟನಾವಳಿಗಳು ದೇಶವನ್ನೇ ಬೆಚ್ಚಿಬೀಳಿಸುತ್ತಿವೆ. ಇತ್ತೀಚೆಗೆ ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ, ಮೆರವಣಿಗೆ ಮಾಡಿದ ಅತ್ಯಂತ ನಾಚಿಕೆಗೇಡಿನ ಘಟನೆ ಭಾರಿ ಸಂಚಲನ ಮೂಡಿಸಿತ್ತು. ದುರುಳರ ದುಷ್ಕೃತ್ಯಕ್ಕೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಪ್ರಕರಣದ ಪೊಲೀಸ್ ತನಿಖೆ ಚುರುಕುಗೊಂಡಿದೆ, ಈಗಾಗಲೇ ಹಲವರನ್ನು ಬಂಧಿಸಲಾಗಿದ್ದು, ವಿಚಾರಣೆ ಸಾಗುತ್ತಿದೆ. ಅಮಾನವೀಯ ಘಟನೆಯನ್ನು ಖಂಡಿಸಿದವರಲ್ಲಿ ಕಾಶ್ಮೀರಿ ಫೈಲ್ಸ್ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೂಡಾ ಒಬ್ಬರು.
ವಿವೇಕ್ ಅಗ್ನಿಹೋತ್ರಿ ದೊಡ್ಡ ಟಿಪ್ಪಣಿಯೊಂದಿಗೆ ಟ್ವಿಟರ್ನಲ್ಲಿ ಮಣಿಪುರ ಕೃತ್ಯಕ್ಕೆ ಖಂಡನೆ ವ್ಯಕ್ತಪಡಿಸಿದ್ದರು. ರಾಜ್ಯದ ಮಹಿಳೆಯರಲ್ಲಿ ಕ್ಷಮೆ ಯಾಚಿಸಿದ್ದರು. ಬಳಿಕ ಅವರ ಸೂಪರ್ ಹಿಟ್ ಸಿನಿಮಾ ಕಾಶ್ಮೀರಿ ಫೈಲ್ಸ್ ಬಗ್ಗೆ ಟ್ವೀಟ್ ಮಾಡಿಕೊಳ್ಳುತ್ತಿದ್ದರು. ಈ ವೇಳೆ ನೆಟ್ಟಿಗರೊಂದಿಗೆ ಟ್ವೀಟ್, ರಿಟ್ವೀಟ್ ನಡೆದಿದೆ. ಇದೇ ಸಂದರ್ಭದಲ್ಲಿ 'ಮಣಿಪುರ ಫೈಲ್ಸ್' ಸಿನಿಮಾ ಮಾಡುವಂತೆ ನಿರ್ದೇಶಕರಿಗೆ ನೇರ ಸವಾಲು ಬಂದಿದೆ.
-
Don't waste time go and make a movie 'Manipur Files' if you are man enough.
— Wanderer_ali (@WandererAli) July 21, 2023 " class="align-text-top noRightClick twitterSection" data="
">Don't waste time go and make a movie 'Manipur Files' if you are man enough.
— Wanderer_ali (@WandererAli) July 21, 2023Don't waste time go and make a movie 'Manipur Files' if you are man enough.
— Wanderer_ali (@WandererAli) July 21, 2023
ನಿರ್ದೇಶಕರಿಗೆ ನೆಟ್ಟಿಗರ ಸವಾಲು: ವಿವೇಕ್ ಅಗ್ನಿಹೋತ್ರಿ ಅವರಿಗೆ ನೆಟ್ಟಿಗರೋರ್ವರು, 'ಸಮಯ ವ್ಯರ್ಥ ಮಾಡಬೇಡಿ, ತಾಕತ್ತಿದ್ದರೆ ಮಣಿಪುರ ಫೈಲ್ಸ್ ಸಿನಿಮಾ ಮಾಡಿ' (Don't waste time go and make a movie 'Manipur Files' if you are man enough) ಎಂದು ಸವಾಲು ಹಾಕಿದ್ದಾರೆ.
ಅಗ್ನಿಹೋತ್ರಿ ಹೇಳಿದ್ದೇನು?: ಇದಕ್ಕೆ ನಿರ್ದೇಶಕರೂ ಕೂಡ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ. ''ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ಧನ್ಯವಾದಗಳು. ಆದರೆ ಎಲ್ಲ ಸಿನಿಮಾಗಳನ್ನು ನನ್ನಿಂದನೇ ಮಾಡಿಸುತ್ತೀರಾ? ನಿಮ್ಮ 'ಟೀಮ್ ಇಂಡಿಯಾ'ದಲ್ಲಿ 'ಮ್ಯಾನ್' ಫಿಲ್ಮ್ಮೇಕರ್' ಇಲ್ಲವೇ?'' ಎಂದು ಕೇಳಿದ್ದಾರೆ.
-
Thanks for having so much faith in me. Par saari films mujhse hi banwaoge kya yaar? Tumhari ‘Team India’ mein koi ‘man enough’ filmmaker nahin hai kya? https://t.co/35U9FMf32G
— Vivek Ranjan Agnihotri (@vivekagnihotri) July 21, 2023 " class="align-text-top noRightClick twitterSection" data="
">Thanks for having so much faith in me. Par saari films mujhse hi banwaoge kya yaar? Tumhari ‘Team India’ mein koi ‘man enough’ filmmaker nahin hai kya? https://t.co/35U9FMf32G
— Vivek Ranjan Agnihotri (@vivekagnihotri) July 21, 2023Thanks for having so much faith in me. Par saari films mujhse hi banwaoge kya yaar? Tumhari ‘Team India’ mein koi ‘man enough’ filmmaker nahin hai kya? https://t.co/35U9FMf32G
— Vivek Ranjan Agnihotri (@vivekagnihotri) July 21, 2023
ಚರ್ಚೆಗೀಡಾದ 'ಟೀಮ್ ಇಂಡಿಯಾ' ಪದ: ನೆಟ್ಟಿಗರ ಟ್ವೀಟ್ಗೆ ನಿರ್ದೇಶಕರು ಪ್ರತಿಕ್ರಿಯಿಸುವಾಗ 'ಟೀಮ್ ಇಂಡಿಯಾ' ಎಂಬ ಪದ ಬಳಸಿದ್ದಾರೆ. ಇದು ಚರ್ಚೆಗೀಡಾಗಿದೆ. ಇತ್ತೀಚೆಗಷ್ಟೇ ಪ್ರತಿಪಕ್ಷಗಳು ಸೇರಿ ಬಿಹಾರ, ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸಿದ್ದವು. ಈ ಮೈತ್ರಿಕೂಟಕ್ಕೆ 'ಇಂಡಿಯಾ' ಎಂದು ಹೆಸರಿಟ್ಟಿದ್ದಾರೆ. ಹಾಗಾಗಿ ನಿರ್ದೇಶಕರು ಪ್ರತಿಪಕ್ಷಗಳನ್ನು ಗುರಿಯಾಗಿಸಿಕೊಂಡರೇ? ಎಂಬ ಚರ್ಚೆಯೂ ನಡೆಯುತ್ತಿದೆ.
ಮಣಿಪುರ ಘಟನೆ ಬೆಳಕಿಗೆ ಬಂದ ದಿನ ಪೋಸ್ಟ್ ಮಾಡಿದ್ದ ವಿವೇಕ್ ಅಗ್ನಿಹೋತ್ರಿ, ''ಯಾವಾಗಲು ನಮ್ಮ ಮುಗ್ಧ ತಾಯಿ, ಅಕ್ಕ ತಂಗಿಯರೇ ಅನಾಗರಿಕ, ಅಮಾನವೀಯ ಘಟನೆಗಳಿಗೆ ಬಲಿಪಶುಗಳಾಗುತ್ತಾರೆ. ಇಂತಹ ಘಟನೆಗಳಿಂದ ನಾನು ಪ್ರತಿ ಬಾರಿಯೂ ಛಿದ್ರಗೊಂಡಿದ್ದೇನೆ. ನನಗೆ ಬಹಳ ನಾಚಿಕೆ ಆಗುತ್ತಿದೆ. ಅಸಹಾಯಕತೆಗೆ ತಪ್ಪಿತಸ್ಥ ಎಂಬ ಭಾವನೆ ಬರುತ್ತಿದೆ, ಪಶ್ಚಾತ್ತಾಪವಾಗುತ್ತಿದೆ. ಓ ಮಣಿಪುರ, ನಾನು ಸಾಕಷ್ಟು ಪ್ರಯತ್ನಿಸಿದೆ, ಆದರೆ ಈ ವಿಷಯದಲ್ಲಿ ನಾನು ವಿಫಲನಾಗಿದ್ದೇನೆ. ನಾವೆಲ್ಲರೂ ಆಯ್ದ, ಸ್ಪರ್ಧಾತ್ಮಕ ರಾಜಕೀಯದ ಬಲಿಪಶುಗಳು. ನಾವುಗಳು ಅಧರ್ಮದ ಬಲಿಪಶುಗಳು. ಈ ಮುಕ್ತ ಭಾರತದಲ್ಲಿ ಜೀವಿಸುವ ಹಕ್ಕು ನಮಗಿಲ್ಲ. ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ಇದು ನನಗೆ ಬೇಕಾದ ಸ್ವಾತಂತ್ರ್ಯವಲ್ಲ, ಪ್ರಜಾಪ್ರಭುತ್ವವಲ್ಲ. ನಮ್ಮದು ವಿಫಲ ಸಮಾಜ, ಕ್ಷಮಿಸಿ, ನನ್ನ ಸಹೋದರಿಯರೇ'' ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ: Suriya Birthday: ಕಂಗುವ ಫಸ್ಟ್ ಗ್ಲಿಂಪ್ಸ್ ರಿಲೀಸ್; ರೋಮಾಂಚಕ ದೃಶ್ಯಗಳಲ್ಲಿ ಕಾಲಿವುಡ್ ಸೂಪರ್ ಸ್ಟಾರ್ ಸೂರ್ಯ!