ETV Bharat / entertainment

'ಸಲಾರ್​​'ಗೆ ಸಿನಿಮ್ಯಾಟಿಕ್​​ ಏರ್ ಸೆಲ್ಯೂಟ್: ಕೆನಡಾ ಅಭಿಮಾನಿಗಳ ಅದ್ಭುತ ವಿಡಿಯೋ ನೋಡಿ - hombale films

ಕೆನಡಾದಲ್ಲಿರುವ ಪ್ರಭಾಸ್ ಅಭಿಮಾನಿಗಳು 'ಸಲಾರ್​​'ಗೆ ಸಿನಿಮ್ಯಾಟಿಕ್​​ ಏರ್ ಸೆಲ್ಯೂಟ್ ಕೊಟ್ಟಿದ್ದು, ಹೊಂಬಾಳೆ ಫಿಲ್ಮ್ಸ್ ಅದ್ಭುತ ವಿಡಿಯೋ ಅನಾವರಣಗೊಳಿಸಿದೆ.

A cinematic air salute to Salaar and Prabhas
'ಸಲಾರ್​​'ಗೆ ಸಿನಿಮ್ಯಾಟಿಕ್​​ ಏರ್ ಸೆಲ್ಯೂಟ್
author img

By ETV Bharat Karnataka Team

Published : Dec 16, 2023, 7:36 AM IST

Updated : Dec 16, 2023, 8:22 AM IST

ಪ್ಯಾನ್​ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಮುಂದಿನ ಬಹುನಿರೀಕ್ಷಿತ ಸಿನಿಮಾ ಸಲಾರ್ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಸಿನಿಮಾ ಕುರಿತು ವಿಶ್ವದಾದ್ಯಂತ ಅಭಿಮಾನಿಗಳಲ್ಲಿ ಅಪಾರ ಉತ್ಸಾಹ ಮನೆ ಮಾಡಿದೆ. ಚಿತ್ರದ ಪ್ರಚಾರ, ಅಡ್ವಾನ್ಸ್ ಟಿಕೆಟ್​ ಬುಕಿಂಗ್ ಜೋರಾಗೇ ನಡೆಯುತ್ತಿದೆ.

ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ಮೇಲಿನ ಉತ್ಸಾಹ, ನಿರೀಕ್ಷೆ, ಕುತೂಹಲ ವ್ಯಕ್ತಪಡಿಸಲು ಕೆನಡಾದಲ್ಲಿರುವ ಪ್ರಭಾಸ್ ಅಭಿಮಾನಿಗಳು 'ಸಿನಿಮೀಯ ಏರ್ ಸೆಲ್ಯೂಟ್' ಅನ್ನು ಆಯೋಜಿಸಿದ್ದರು. ಸಿನಿಮಾ ಹಿಂದಿರುವ ಹೊಂಬಾಳೆ ಫಿಲ್ಮ್ಸ್ ಅದ್ಭುತ ವಿಡಿಯೋ ಅನಾವರಣಗೊಳಿಸಿದ್ದು, ಇದು ಸಿನಿಮಾ ಸುತ್ತಲಿನ ನಿರೀಕ್ಷೆಗಳನ್ನು ಸಾಬೀತುಪಡಿಸಿದೆ.

ಶುಕ್ರವಾರದಂದು ಸಲಾರ್ ಸಿನಿಮಾ​ ನಿರ್ಮಾಣ ಮಾಡಿರುವ ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​​​ಗಳಲ್ಲಿ ವಿಡಿಯೋ ಹಂಚಿಕೊಂಡಿದೆ. ''ಕೆನಡಾದ ರೆಬೆಲ್ ಸ್ಟಾರ್ ಅಭಿಮಾನಿಗಳಿಂದ ಪ್ರಭಾಸ್ ಅವರಿಗೆ ಸಿನಿಮ್ಯಾಟಿಕ್ ಏರ್ ಸೆಲ್ಯೂಟ್. ಡಿಸೆಂಬರ್ 22 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಸಲಾರ್ 1 ತೆರೆಕಾಣಲಿದೆ'' ಎಂಬ ಕ್ಯಾಪ್ಷನ್​ ಕೂಡ ಕೊಟ್ಟಿದೆ.

ಕೆನಡಾದ ಟೊರೊಂಟೊದ ಪ್ರಭಾಸ್ ಅಭಿಮಾನಿಗಳು ಆರು ಹೆಲಿಕಾಪ್ಟರ್‌ಗಳನ್ನು ಹಾರಿಸಿದ್ದಾರೆ. ಒಂದೊಂದು ಹೆಲಿಕಾಪ್ಟರ್‌ಗಳಲ್ಲಿಯೂ 'SALAAR'ನ ಒಂದೊಂದು ಅಕ್ಷರಗಳನ್ನು ಕಾಣಬಹುದು. ನಿಸ್ಸಂದೇಹವಾಗಿ ಇದೊಂದು ಅದ್ಭುತ ಕ್ಷಣವಾಗಿದ್ದು, ಸೋಷಿಯಲ್​​ ಮೀಡಿಯಾಗಳಲ್ಲಿ ವಿಡಿಯೋ ಸಖತ್​ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಇಂದಿನಿಂದಲೇ ಕರ್ನಾಟಕದಲ್ಲಿ 'ಸಲಾರ್​' ಟಿಕೆಟ್​ ಬುಕ್ಕಿಂಗ್​ ಓಪನ್​

ಈ ಸಿನಿಮಾ 2 ಗಂಟೆ 55 ನಿಮಿಷಗಳ ರನ್‌ಟೈಮ್ ಹೊಂದಿದೆ. ಇತ್ತೀಚೆಗಷ್ಟೇ ಸೆನ್ಸಾರ್ ಮಂಡಳಿಯಿಂದ 'ಎ' ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಹಿಂಸಾತ್ಮಕ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿ ಗುರುತಿಸಲ್ಪಟ್ಟಿದ್ದರೂ, ಮುಖ್ಯ ಪಾತ್ರಗಳ ನಡುವಿನ ಸಹೋದರ ಬಾಂಧವ್ಯ ಕಥಾಹಂದರದದ ತೂಕ ಹೆಚ್ಚಿಸಿದೆ. ಚಿತ್ರದಲ್ಲಿ ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್ ಜೊತೆಗೆ ಸೌತ್​ ಸೂಪರ್ ಸ್ಟಾರ್​ಗಳಾದ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಮತ್ತು ಜಗಪತಿ ಬಾಬು ಸಹ ನಟಿಸಿದ್ದಾರೆ. ಕೆಜಿಎಫ್​ ಖ್ಯಾತಿಯ ವಿಜಯ್ ಕಿರಗಂದೂರು ಈ ಚಿತ್ರದ ನಿರ್ಮಾಪಕರು. ವಿಜಯ್ ಕಿರಗಂದೂರು ಮತ್ತು ಹೊಂಬಾಳೆ ಫಿಲ್ಮ್ಸ್ ಈಗಾಗಲೇ ಕೆಜಿಎಫ್​ ಸರಣಿ ಸಿನಿಮಾಗಳ ಮೂಲಕ ಜನಪ್ರಿಯರಾಗಿರೋ ಹಿನ್ನೆಲೆ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.

ಇದನ್ನೂ ಓದಿ: ಸೀರೆಯಲ್ಲಿ ಆಲಿಯಾ ಅಂದ ವರ್ಣನಾತೀತ: ಮುಂದಿನ ಸಿನಿಮಾಗಳ ಮೇಲೆ ಅಭಿಮಾನಿಗಳ ಕುತೂಹಲ

ಸಲಾರ್ ಸಿನಿಮಾ ವೀಕ್ಷಿಸುವ ಕಾತರ ಹೆಚ್ಚುತ್ತಿದೆ. ರಾಕಿಂಗ್​​ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ನಂತರ ಪ್ರಶಾಂತ್ ನೀಲ್​ ನಿರ್ದೇಶನದ ಆ್ಯಕ್ಷನ್​​ ಸಿನಿಮಾವಿದು. ಡಿಸೆಂಬರ್ 22 ರಂದು ಪರದೆ ಮೇಲೆ ಬಿರುಗಾಳಿ ಎಬ್ಬಿಸಲು ಸಲಾರ್​ ಸಜ್ಜಾಗಿದೆ. ಬಾಕ್ಸ್ ಆಫೀಸ್‌ನಲ್ಲಿ ಬಾಲಿವುಡ್ ಸೂಪರ್‌ ಸ್ಟಾರ್ ಶಾರುಖ್ ಖಾನ್ ಅವರ ಡಂಕಿ ಸಿನಿಮಾದೊಂದಿಗೆ ಪೈಪೋಟಿ ನಡೆಸಲಿದೆ.

Last Updated : Dec 16, 2023, 8:22 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.