ಸೆ.16 ರಾಷ್ಟ್ರೀಯ ಸಿನಿಮಾ ದಿನ. ಈ ದಿನವನ್ನು ಆಚರಿಸಲು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (MAI) ಬಂಪರ್ ಆಫರ್ ಘೋಷಿಸಿದೆ. ಅಂದು ಚಲನಚಿತ್ರ ಟಿಕೆಟ್‌ಗಳ ಬೆಲೆ ಕೇವಲ 75 ರೂಪಾಯಿ ಇರಲಿದೆ.
ಸೆಪ್ಟೆಂಬರ್ 16 ರಂದು 'ರಾಷ್ಟ್ರೀಯ ಸಿನಿಮಾ ದಿನ'ವನ್ನು ಆಚರಿಸಲು ಕೇವಲ ರೂ.75 ಕ್ಕೆ ಚಲನಚಿತ್ರ ಟಿಕೆಟ್ ನೀಡಲಾಗುತ್ತಿದೆ ಎಂದು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಟ್ವೀಟ್‌ನಲ್ಲಿ ಈಗಾಗಲೇ ತಿಳಿಸಿದೆ.
ರಾಷ್ಟ್ರೀಯ ಸಿನಿಮಾ ದಿನವು 4,000ಕ್ಕೂ ಹೆಚ್ಚು ಪರದೆಗಳಲ್ಲಿ ನಡೆಯಲಿದೆ. ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್‌ನಂತಹ ಸ್ಟ್ರೀಮಿಂಗ್ ಸೇವೆಗಳು ನೀಡುವ ಅನುಕೂಲದೊಂದಿಗೆ ಸ್ಪರ್ಧಿಸಲು ಹೆಣಗಾಡುತ್ತಿರುವ ಚಿತ್ರಮಂದಿರಗಳಿಗೆ ಮರಳಲು ಈ ಒಂದು ದಿನದ ರಿಯಾಯಿತಿಯು ಹೆಚ್ಚಿನ ಜನರನ್ನು ಮನವೊಲಿಸುತ್ತದೆ ಎಂದು ಚಲನಚಿತ್ರ ಥಿಯೇಟರ್ ಮಾಲೀಕರು ಮತ್ತು ನಿರ್ವಾಹಕರು ನಂಬಿದ್ದಾರೆ.
-
National Cinema Day will be held at more than 4000 participating screens and will include cinema screens of PVR, INOX, CINEPOLIS, CARNIVAL, MIRAJ, CITYPRIDE, ASIAN, MUKTA A2, MOVIE TIME, WAVE, M2K, DELITE and many others. pic.twitter.com/nVpM5neXd1
— Multiplex Association Of India (@MAofIndia) September 2, 2022 " class="align-text-top noRightClick twitterSection" data="
">National Cinema Day will be held at more than 4000 participating screens and will include cinema screens of PVR, INOX, CINEPOLIS, CARNIVAL, MIRAJ, CITYPRIDE, ASIAN, MUKTA A2, MOVIE TIME, WAVE, M2K, DELITE and many others. pic.twitter.com/nVpM5neXd1
— Multiplex Association Of India (@MAofIndia) September 2, 2022National Cinema Day will be held at more than 4000 participating screens and will include cinema screens of PVR, INOX, CINEPOLIS, CARNIVAL, MIRAJ, CITYPRIDE, ASIAN, MUKTA A2, MOVIE TIME, WAVE, M2K, DELITE and many others. pic.twitter.com/nVpM5neXd1
— Multiplex Association Of India (@MAofIndia) September 2, 2022
ಇದನ್ನೂ ಓದಿ: ಸೈಮಾ ಅವಾರ್ಡ್ಸ್ 2022: ಪುನೀತ್ ರಾಜ್‌ಕುಮಾರ್‌ಗೆ ಮರಣೋತ್ತರ ಅತ್ಯುತ್ತಮ ನಟ ಪ್ರಶಸ್ತಿ
ಕೋವಿಡ್ ವೇಳೆ ಚಿತ್ರಮಂದಿರಗಳು ಬಂದ್ ಆಗಿದ್ದವು. ಕೋವಿಡ್ ನಿಯಮ, ಲಾಕ್ಡೌನ್ ತೆರವಿನ ಬಳಿಕ ಮಲ್ಟಿಪ್ಲೆಕ್ಸ್ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಹಿನ್ನೆಲೆ ಜನರಿಗೆ ಧನ್ಯವಾದ ತಿಳಿಸಲು ಜೊತೆಗೆ ಎಲ್ಲಾ ವರ್ಗದವರು ಮಲ್ಟಿಪ್ಲೆಕ್ಸ್ ನಲ್ಲಿ ಸಿನಿಮಾ ನೋಡಿ ಆನಂದಿಸಲು ಈ ಒಂದು ದಿನದ ರಿಯಾಯಿತಿ ನೀಡಲಾಗಿದೆ.