ಕನ್ನಡ ಚಿತ್ರರಂಗಕ್ಕೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ತಂದುಕೊಟ್ಟ 'ಚಾರ್ಲಿ 777' ಸಿನಿಮಾಗೆ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ಇಂದು ನಟ ರಕ್ಷಿತ್ ಶೆಟ್ಟಿ ಮತ್ತು ನಿರ್ದೇಶಕ ಕಿರಣ್ ರಾಜ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಕನ್ನಡದ ಅತ್ಯುತ್ತಮ ಚಿತ್ರ ಎಂಬ ಹೆಗ್ಗಳಿಕೆ 'ಚಾರ್ಲಿ 777' ಮುಡಿಗೇರಿದೆ.
-
What an absolutely surreal moment!✨
— Paramvah Studios (@ParamvahStudios) October 17, 2023 " class="align-text-top noRightClick twitterSection" data="
Our hearts swell with pride as our beloved @rakshitshetty and @kiranraj_k receive the 69th National Award for Best Feature Film Kannada by honourable President of India Droupadi Murmu♥️#777Charlie#69thNationalFilmAwards pic.twitter.com/bZRYiTdmap
">What an absolutely surreal moment!✨
— Paramvah Studios (@ParamvahStudios) October 17, 2023
Our hearts swell with pride as our beloved @rakshitshetty and @kiranraj_k receive the 69th National Award for Best Feature Film Kannada by honourable President of India Droupadi Murmu♥️#777Charlie#69thNationalFilmAwards pic.twitter.com/bZRYiTdmapWhat an absolutely surreal moment!✨
— Paramvah Studios (@ParamvahStudios) October 17, 2023
Our hearts swell with pride as our beloved @rakshitshetty and @kiranraj_k receive the 69th National Award for Best Feature Film Kannada by honourable President of India Droupadi Murmu♥️#777Charlie#69thNationalFilmAwards pic.twitter.com/bZRYiTdmap
ದೆಹಲಿಯಲ್ಲಿ ಇಂದು 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈಗಾಗಲೇ ಘೋಷಿತ ವಿಜೇತರಿಗೆ ಪ್ರತಿಷ್ಟಿತ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಚಿತ್ರರಂಗದ ಅನೇಕ ಕಲಾವಿದರು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಸ್ಯಾಂಡಲ್ವುಡ್ನಿಂದ ರಕ್ಷಿತ್ ಶೆಟ್ಟಿ ಹಾಗೂ ಕಿರಣ್ ರಾಜ್ ತಮ್ಮ 'ಚಾರ್ಲಿ' ಚಿತ್ರಕ್ಕಾಗಿ ಪ್ರಶಸ್ತಿ ಸ್ವೀಕರಿಸಿದರು. ಪ್ರಾಣಿ ಪ್ರಿಯರನ್ನು ವಿಶೇಷವಾಗಿ ಆಕರ್ಷಿಸಿದ ಈ ಚಿತ್ರಕ್ಕೆ ಪ್ರಶಸ್ತಿ ಲಭಿಸಿದ್ದು, ಅಭಿಮಾನಿಗಳಿಗೆ ಖುಷಿ ತಂದುಕೊಟ್ಟಿದೆ.
ಪರಂವಃ ಸ್ಟುಡಿಯೋ ಸಂತಸ: ರಕ್ಷಿತ್ ಶೆಟ್ಟಿ ಅವರ ಪರಂವಃ ಸ್ಟುಡಿಯೋ ಮೂಲಕ 'ಚಾರ್ಲಿ 777' ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಿಕ್ಕಿರುವುದಕ್ಕೆ ಪರಂವಃ ಸ್ಟುಡಿಯೋ ಸಂತಸ ವ್ಯಕ್ತಪಡಿಸಿದೆ. ಎಕ್ಸ್ನಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಕಿರಣ್ ರಾಜ್ ಪ್ರಶಸ್ತಿ ಸ್ವೀಕರಿಸುತ್ತಿರುವ ವಿಡಿಯೋ ಹಾಗೂ ಫೋಟೋವನ್ನು ಹಂಚಿಕೊಂಡಿರುವ ಸಂಸ್ಥೆ, "ಎಂತಹ ಅದ್ಭುತ ಕ್ಷಣ. ನಮ್ಮ ಪ್ರೀತಿಯ ರಕ್ಷಿತ್ ಶೆಟ್ಟಿ ಹಾಗೂ ಕಿರಣ್ ರಾಜ್ ಅವರು ಭಾರತದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಕನ್ನಡದ ಅತ್ಯುತ್ತಮ ಚಲನಚಿತ್ರಕ್ಕಾಗಿ 69ನೇ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದಂತೆ ನಮ್ಮ ಹೃದಯ ಹೆಮ್ಮೆಯಿಂದ ಉಬ್ಬುತ್ತದೆ" ಎಂದು ಬರೆದುಕೊಂಡಿದೆ.
ಚಾರ್ಲಿ 777 ಸಿನಿಮಾವು ಕಳೆದ ವರ್ಷ 2022ರ ಜೂನ್ 10 ರಂದು ಬಿಡುಗಡೆಯಾಗಿತ್ತು. ಚಾರ್ಲಿ ಹೆಸರಿನ ಶ್ವಾನ ಮತ್ತು ರಕ್ಷಿತ್ ಶೆಟ್ಟಿ ನಡುವಿನ ವಿಶೇಷ ಎಮೋಷನಲ್ ಬಾಡಿಂಗ್ ಕಥೆ ಇದಾಗಿತ್ತು. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ, ರಾಜ್ ಬಿ. ಶೆಟ್ಟಿ, ಬಾಬಿ ಸಿಂಹ, ಶಾರ್ವರಿ, ಗೋಪಾಲಕೃಷ್ಣ ದೇಶಪಾಂಡೆ ಸೇರಿದಂತೆ ಅನೇಕರು ನಟಿಸಿದ್ದರು. ಪರಂವಃ ಸ್ಟುಡಿಯೋಸ್‍ನಡಿ ನಿರ್ಮಾಣವಾದ ಮೊದಲ ಪ್ಯಾನ್ ಇಂಡಿಯಾ ಚಿತ್ರವಿದು.
ಇನ್ನೂ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, 'ಸರ್ದಾರ್ ಉದಾಮ್' ಅತ್ಯುತ್ತಮ ಹಿಂದಿ ಚಿತ್ರ, ಅತ್ಯುತ್ತಮ ಮಲಯಾಳಂ ಚಿತ್ರ 'ಹೋಮ್', ಅತ್ಯುತ್ತಮ ಗುಜರಾತಿ ಚಿತ್ರ 'ಚೆಲೋ ಶೋ', ಅತ್ಯುತ್ತಮ ತಮಿಳು ಚಿತ್ರ 'ಕಡೈಸಿ ವಿವಾಸಾಯಿ', ಅತ್ಯುತ್ತಮ ತೆಲುಗು ಚಿತ್ರ 'ಉಪ್ಪೇನಾ', ಅತ್ಯುತ್ತಮ ಮೈಥಿಲಿ ಚಿತ್ರ 'ಸಮನಾಂತರ', ಅತ್ಯುತ್ತಮ ಮಿಶಿಂಗ್ ಚಿತ್ರ 'ಬೂಂಬಾ ರೈಡ್', ಅತ್ಯುತ್ತಮ ಮರಾಠಿ ಚಿತ್ರ 'ಏಕದಾ ಕಾಯ್ ಜಲಾ', ಅತ್ಯುತ್ತಮ ಬಂಗಾಳಿ ಚಿತ್ರ 'ಕಲ್ಕೊಕ್ಕೊ', 'ಪ್ರತೀಕ್ಷ್ಯಾ' ಅತ್ಯುತ್ತಮ ಒಡಿಯಾ ಚಿತ್ರವಾಗಿ ಹೊರಹೊಮ್ಮಿವೆ.
ಇದನ್ನೂ ಓದಿ: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ: ಯಾರಿಗೆ ಯಾವ ಪ್ರಶಸ್ತಿ? ವಿಜೇತರ ವಿವರ