ಹಲವು ಸಿನಿಮಾ ತಾರೆಯರು ಇತ್ತೀಚೆಗೆ ನಟನೆ ಜೊತೆಗೆ ಬಗೆ ಬಗೆಯ ಉದ್ಯಮದಲ್ಲಿಯೂ ಗುರುತಿಸಿಕೊಳ್ಳುತ್ತಿದ್ದಾರೆ. ಯಾರು, ಯಾವ ಉದ್ಯಮ ನಡೆಸುತ್ತಿದ್ದಾರೆ ಎಂಬುದರ ಮಾಹಿತಿ ತಿಳಿಯೋಣ..
ಬಾಲಿವುಡ್ನ ನಟಿ ಪ್ರಿಯಾಂಕಾ ಚೋಪ್ರಾ, ಜಾಕ್ವೆಲಿನ್ ಫರ್ನಾಂಡಿಸ್, ಶಿಲ್ಪಾ ಶೆಟ್ಟಿ, ಅರ್ಜುನ್ ರಾಂಪಾಲ್, ಡಿನೋ ಮೋರಿಯಾ ಸೇರಿದಂತೆ ಹಲವು ತಾರೆಯರು ಐಷಾರಾಮಿ ಹೋಟೆಲ್, ರೆಸ್ಟೋರೆಂಟ್, ಪಬ್ ಸೇರಿದಂತೆ ಆಹಾರೋದ್ಯಮದಲ್ಲಿ ಗುರುತಿಸಿಕೊಳ್ಳುವ ಮೂಲಕ ತಮ್ಮ ಆದಾಯವನ್ನು ಸಹ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಸದ್ಯ ತಮ್ಮದೇ ಆದ ಐಷಾರಾಮಿ ರೆಸ್ಟೋರೆಂಟ್ ಮತ್ತು ಹೋಟೆಲ್ ಹೊಂದಿರುವ ಇವರು ಇದನ್ನು ಪ್ರಾರಂಭಿಸುವುದಕ್ಕೆ ಆಹಾರದ ಮೇಲಿನ ಪ್ರೀತಿಯೂ ಒಂದು ಮೂಲ ಕಾರಣವಂತೆ.
ಪ್ರಿಯಾಂಕಾ ಚೋಪ್ರಾ: ನಟಿಯಾಗಿ, ನಿರ್ಮಾಪಕಿಯಾಗಿ, ಬರಹಗಾರ್ತಿ ಆಗಿ ಗಮನ ಸೆಳೆದಿರುವ ನಟಿ ಪಿಗ್ಗಿ ನಟಿ, ಐಷಾರಾಮಿ ರೆಸ್ಟೋರೆಂಟ್ ಮಾಲೀಕರೂ ಹೌದು. ಸೋನಾ ರೆಸ್ಟೊರೆಂಟ್ ಮೂಲಕ ಆಹಾರ ಮತ್ತು ಆತಿಥ್ಯದ ಕ್ಷೇತ್ರದಲ್ಲಿ ತಮ್ಮ ರೆಕ್ಕೆಯನ್ನು ವಿಸ್ತರಿಸಿಕೊಂಡಿರುವ ಅವರು ಇನ್ನಿತರ ಮಹಿಳೆಯರಿಗೂ ಮಾದರಿಯಾಗಿದ್ದಾರೆ. ಇದನ್ನು ಅವರು 'ಮಿಮಿ' ಎಂದು ಕರೆಯುತ್ತಾರೆ.
ಜಾಕ್ವೆಲಿನ್ ಫರ್ನಾಂಡಿಸ್: 2017 ರಲ್ಲಿ ಕೊಲಂಬೊದಲ್ಲಿ ಈ ನಟಿ ತಮ್ಮ ಮೊದಲ ರೆಸ್ಟೋರೆಂಟ್ ಅನ್ನು ಸ್ಥಾಪಿಸುವ ಮೂಲಕ ಉದ್ಯಮಕ್ಕೆ ಕಾಲಿಟ್ಟರು. ಕೇಮಾ ಸೂತ್ರ ಎಂದು ಕರೆಯಲಾಗುವ ರೆಸ್ಟೋರೆಂಟ್ 5-ಸ್ಟಾರ್ ಹೋಟೆಲ್ ಆಗಿದ್ದು ಶಾಂಗ್ರಿ-ಲಾ ಎಂಬ ಪ್ರದೇಶದಲ್ಲಿದೆ. ಪ್ರಸಿದ್ಧ ಬಾಣಸಿಗ ದರ್ಶನ್ ಮುನಿದಾಸ ಸಹಭಾಗಿತ್ವದಲ್ಲಿ ಹೋಟೆಲ್ ತೆರೆಯಲಾಗಿದೆಯಂತೆ.
ಅರ್ಜುನ್ ರಾಂಪಾಲ್: ಅರ್ಜುನ್ 2009 ರಲ್ಲಿ ಆತಿಥ್ಯ ಉದ್ಯಮಕ್ಕೆ ಪ್ರವೇಶಿಸಿದರು. ಲ್ಯಾಪ್ (LAP) ಎಂಬ ಪ್ರೀಮಿಯಂ ನೈಟ್‌ಕ್ಲಬ್ ತೆರೆಯುವ ಮೂಲಕ ತಾವೂ ಕೂಡ ಓರ್ವ ಉದ್ಯಮಿ ಎಂಬುದನ್ನು ಸಾಬೀತು ಮಾಡಿದರು. ಸಾಮ್ರಾಟ್‌ನ ಭಾಗವಾಗಿ ಈ ಹೋಟೆಲ್ ಅನ್ನು ತೆರೆಯಲಾಗಿದ್ದು, ಅದ್ಧೂರಿಯುತ ಪಾರ್ಟಿ ಮಾಡುವವರಿಗೆ ಇದು ಸೂಕ್ತವಾದ ವಾತಾವರಣವನ್ನು ಹೊಂದಿದೆ.
ಶಿಲ್ಪಾ ಶೆಟ್ಟಿ ಕುಂದ್ರಾ: ಇವರು ಮುಂಬೈನ ಬಾಸ್ಟಿಯನ್ ರೆಸ್ಟೋರೆಂಟ್ ಫ್ರಾಂಚೈಸಿಯ ಸಹ-ಮಾಲೀಕರಾಗಿದ್ದಾರೆ. 2019 ರಲ್ಲಿ ಬಾಸ್ಟಿಯನ್ ಹಾಸ್ಪಿಟಾಲಿಟಿಯಲ್ಲಿ ಶೇ. 50 ಪಾಲನ್ನು ಖರೀದಿಸುವ ಮೂಲಕ ಉದ್ಯಮಕ್ಕೆ ಧುಮುಕಿದರು. ಇದು ಸುಂದರ ಮೇಲ್ಛಾವಣಿ ಮತ್ತು ಬಣ್ಣ ಬಣ್ಣದ ಪೀಠೋಪಕರಣಗಳನ್ನು ಹೊಂದಿರುವ ಶ್ರೀಮಂತ ರೆಸ್ಟೋರೆಂಟ್ ಆಗಿದೆ.
ಡಿನೋ ಮೋರಿಯಾ: ಸಹೋದರನ ಸಹಕಾರಿಂದ ಡಿನೋ ಮೋರಿಯಾ ಕ್ರೇಪ್ ಸ್ಟೇಷನ್ ಕೆಫೆ ಎಂಬ ಐಷಾರಾಮಿ ರೆಸ್ಟೋರೆಂಟ್ ತೆರೆಯುವ ಮೂಲಕ ಉದ್ಯಮಿ ಕೂಡ ಆದರು. ರುಚಿಕರ ಮತ್ತು ಸಂತೋಷಕರವಾದ ಯುರೋಪಿಯನ್ ಭಕ್ಷ್ಯಗಳನ್ನು ಒದಗಿಸುವ ರೆಸ್ಟೋರೆಂಟ್ ಆಗಿದ್ದು, ಬಾಯಲ್ಲಿ ನೀರೂರಿಸುವ ದೋಸೆಯಿಂದ ಫೇಮಸ್.