ಇದೀಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ಕಿರುತೆರೆಯಲ್ಲಿ ಇದೇ ವಾರ ಪ್ರಸಾರ ಆಗುತ್ತಿದೆ. ಹೀಗಾಗಿ ಜೇಮ್ಸ್ ಚಿತ್ರ ಸುವರ್ಣ ವರ್ಲ್ಡ್ ಪ್ರಿಮಿಯರ್ ಅಂತಾ, ಸ್ಟಾರ್ ಸುವರ್ಣ ವಾಹಿನಿ ಹಬ್ಬದಂತೆ ಆಚರಿಸುತ್ತಿದೆ. ಅದರಲ್ಲಿ ಮಕ್ಕಳಿಗಾಗಿಯೇ ವಿಶೇಷ ಅಭಿಯಾನವನ್ನೊಂದು ಆಯೋಜಿಸಿದೆ.
![40 thousand little hands coloring the Power Star image](https://etvbharatimages.akamaized.net/etvbharat/prod-images/15832793_bin.jpg)
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ಗೆ ಮಕ್ಕಳು ಎಂದರೆ ತುಂಬಾ ಇಷ್ಟ. ಮಕ್ಕಳಿಗೂ ಅಪ್ಪು ಅಂದ್ರೆ ಅಷ್ಟೇ ಇಷ್ಟ. ಹಾಗಾಗಿ ವಾಹಿನಿಯಲ್ಲಿ ಜೇಮ್ಸ್ ಪ್ರಪ್ರಥಮಬಾರಿಗೆ ಪ್ರಸಾರವಾಗ್ತಿರೋ ಈ ವೇಳೆಯಲ್ಲಿ ಇಂತಹ ವಿಶಿಷ್ಠ ಅಭಿಯಾನವನ್ನ ಹಮ್ಮಿಕೊಂಡಿದೆ. ಅದರಂತೆ, ರಾಜ್ಯಾದ್ಯಂತ ಸುಮಾರು 40 ಸಾವಿರ ಶಾಲಾ ಮಕ್ಕಳಿಂದ ಪುನೀತ್ ರಾಜ್ ಕುಮಾರ್ ರೇಖಾಚಿತ್ರಕ್ಕೆ ಬಣ್ಣ ತುಂಬುವ ಸ್ಪರ್ಧೆಯನ್ನ ನಡೆಸಿದೆ.
![James movie on TV](https://etvbharatimages.akamaized.net/etvbharat/prod-images/kn-bng-02-puneeth-rajkumar-rekhachitrakke-banna-hachida-40thousand-makkalu-7204735_15072022170233_1507f_1657884753_499.jpg)
ರಾಜ್ಯದ ವಿವಿಧ ಶಾಲೆಗಳಲ್ಲಿ ಮಕ್ಕಳು ರಾಜಕುಮಾರ ಪುನೀತ್ರ ಭಾವ ಚಿತ್ರಕ್ಕೆ ಬಣ್ಣ ತುಂಬಿ ಸಂಭ್ರಮಿಸಿದ್ದಾರೆ. ಅತ್ಯುತ್ತಮವಾಗಿ ಬಣ್ಣ ತುಂಬಿದ ಮಕ್ಕಳಿಗೆ ಸುವರ್ಣ ವಾಹಿನಿ ವತಿಯಿಂದ ಪ್ರಶಂಸಾ ಪತ್ರವನ್ನ ನೀಡಲಾಗುತ್ತಿದೆ. ಈ ವಿಶೇಷ ಅಭಿಯಾನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದ್ದು, ರಾಜ್ಯಾದ್ಯಂತ ಎಲ್ಲ ಮಾದರಿಯ ಶಾಲಾ ಮಕ್ಕಳಿಂದ ರಾಜಕುಮಾರ, ಪುನೀತ್ ರಾಜ್ ಕುಮಾರ್ ರೇಖಾ ಚಿತ್ರಕ್ಕೆ ಬಣ್ಣ ತುಂಬುವ ಮೂಲಕ ಅಪ್ಪು ಸ್ಮರಣೆಯನ್ನ ಮಾಡಲಾಗ್ತಿದೆ.
![40 thousand little hands coloring the Power Star image](https://etvbharatimages.akamaized.net/etvbharat/prod-images/kn-bng-02-puneeth-rajkumar-rekhachitrakke-banna-hachida-40thousand-makkalu-7204735_15072022170233_1507f_1657884753_157.jpg)
ಇದನ್ನೂ ಓದಿ: ಡಬಲ್ ಮೀನಿಂಗ್ ಡೈಲಾಗ್ ಜೊತೆ ಜೀವನದ ವಾಸ್ತವದ ಕಥೆ - ಪೆಟ್ರೋಮ್ಯಾಕ್ಸ್ಗೆ ಪ್ರೇಕ್ಷಕರಿಂದ ಚಪ್ಪಾಳೆ