ನಟ ಟೊವಿನೋ ಥಾಮಸ್ ಮುಖ್ಯಭೂಮಿಕೆಯ ಮಲಯಾಳಂ ಸಿನಿಮಾ '2018: ಎವ್ರಿಒನ್ ಈಸ್ ಎ ಹೀರೋ' ಆಸ್ಕರ್ 2024 ನಾಮನಿರ್ದೇಶನ ಪ್ರಕ್ರಿಯೆಗೆ ಪ್ರವೇಶ ಪಡೆದುಕೊಂಡಿದೆ. ಈ ಸಿನಿಮಾದ ಆಸ್ಕರ್ ಪ್ರಚಾರಕ್ಕಾಗಿ ನಿರ್ದೇಶಕ ಜೂಡ್ ಆಂಥೋನಿ ಜೋಸೆಫ್ ಅವರು ಕಾಲಿವುಡ್ ಹಿರಿಯ ನಟ ರಜನಿಕಾಂತ್ ಅವರ ಆಶೀರ್ವಾದ ಪಡೆದುಕೊಂಡಿದ್ದಾರೆ. ಭಾನುವಾರ ಸೂಪರ್ಸ್ಟಾರ್ ಭೇಟಿಯಾದ ಫೋಟೋಗಳನ್ನು ಜೂಡ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="">
ಒಂದು ಫೋಟೋದಲ್ಲಿ ಜೂಡ್ ಮತ್ತು ರಜನಿ ನಗುತ್ತಾ ನಿಂತಿದ್ದಾರೆ. ಈ ವೇಳೆ, ತಲೈವಾ ಕಪ್ಪು ಕುರ್ತಾ ಮತ್ತು ಧೋತಿ ಧರಿಸಿದ್ದರು. ಜೂಡ್ ಮುದ್ರಿತ ವೈಟ್ ಶರ್ಟ್ ಮತ್ತು ಡೆನಿಮ್ನಲ್ಲಿದ್ದರು. ಜೂಡ್ ಫೋಟೋದ ಶೀರ್ಷಿಕೆಯಲ್ಲಿ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲೇ ಹೆಚ್ಚಿನ ಪೋಟೋಗಳನ್ನು ಶೇರ್ ಮಾಡುವುದಾಗಿ ಭರವಸೆ ನೀಡಿದ್ದಾರೆ. ಮತ್ತೊಂದು ಫೋಟೋದಲ್ಲಿ ರಜನಿ ಕಾಲಿಗೆ ಬಿದ್ದು ಜೂಡ್ ಆಶೀರ್ವಾದ ಪಡೆದುಕೊಳ್ಳುತ್ತಿರುವುದನ್ನು ಕಾಣಬಹುದು. ಮತ್ತೊಂದು ಮಾತುಕತೆಯಲ್ಲಿ ತೊಡಗಿರುವ ಗ್ರೂಪ್ ಫೋಟೋ ಆಗಿದೆ.
ಈ ವೇಳೆ ರಜನಿಕಾಂತ್ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, "ಎಂತಹ ಚಿತ್ರ ಜೂಡ್, ನೀವು ಹೇಗೆ ಶೂಟ್ ಮಾಡಿದ್ದೀರಿ? ಅದ್ಭುತ ಕೆಲಸ" ಎಂದು ಕೊಂಡಾಡಿದ್ದಾರೆ. ಆಸ್ಕರ್ ಪ್ರಯಾಣಕ್ಕಾಗಿ ಆಶೀರ್ವಾದ ಮಾಡಿದ್ದಾರೆ. ಜೊತೆಗೆ ಪ್ರತಿಷ್ಠಿತ ಪ್ರಶಸ್ತಿ ತರಲು ಪ್ರೋತ್ಸಾಹಿಸಿದ್ದಾರೆ. ಈ ಅವಕಾಶವನ್ನು ಸಾಧ್ಯವಾಗಿಸಿದ ದೇವರು ಹಾಗೂ ಅವರ ಸ್ನೇಹಿತೆ ಸೌಂದರ್ಯ ಅವರಿಗೆ ಜೂಡ್ ಕೃತಜ್ಞತೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಆಸ್ಕರ್ 2024 ಪ್ರಶಸ್ತಿ ಸಮಾರಂಭಕ್ಕೆ ಮುಹೂರ್ತ ನಿಗದಿ: ಪ್ರಮುಖ ದಿನಾಂಕಗಳ ಪಟ್ಟಿ ಹೀಗಿದೆ..
ಆಸ್ಕರ್ ಪ್ರವೇಶಿಸಿದ '2018': ಮಲಯಾಳಂ ಸಿನಿಮಾ '2018: ಎವ್ರಿಒನ್ ಈಸ್ ಎ ಹೀರೋ' (2018-Everyone is a Hero) ಆಸ್ಕರ್ 2024 ಸಮಾರಂಭದಲ್ಲಿ ಭಾರತವನ್ನು ಪ್ರತಿನಿಧಿಸಲಿದೆ. ಟೊವಿನೋ ಥಾಮಸ್ ಮುಖ್ಯಭೂಮಿಕೆಯ ಈ ಸಿನಿಮಾ ಮೇ ತಿಂಗಳಿನಲ್ಲಿ ತೆರೆಕಂಡು ಅಭೂತಪೂರ್ವ ಯಶಸ್ಸು ಗಳಿಸಿದೆ. ಮಲಯಾಳಂ ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪೈಕಿ ಈ ಸಿನಿಮಾವೂ ಒಂದು. ಚಿತ್ರವು ಆಸ್ಕರ್ 2024 ನಾಮನಿರ್ದೇಶನ ಪ್ರಕ್ರಿಯೆಗೆ ಪ್ರವೇಶ ಪಡೆದುಕೊಂಡಿದೆ.
ಈ ಚಿತ್ರವು ಕೇರಳದಲ್ಲಿ ಭಾರಿ ಅವಾಂತರ ಸೃಷ್ಟಿಸಿದ ಪ್ರವಾಹದ ಹಿನ್ನೆಲೆಯ ಕಥೆಯನ್ನೊಳಗೊಂಡಿದೆ. ಇದೀಗ ವಿಶ್ವದ ಪ್ರತಿಷ್ಠಿತ ಪ್ರಶಸ್ತಿ ಪ್ರಕ್ರಿಯೆಯಲ್ಲಿ ಸ್ಥಾನ ಪಡೆಯುವ ಮೂಲಕ ಅಪರೂಪದ ಗೌರವಕ್ಕೆ ಪಾತ್ರವಾಗಿದೆ. 16 ಸದಸ್ಯರನ್ನೊಳಗೊಂಡ ಆಯ್ಕೆ ಸಮಿತಿ ಭಾರತೀಯ ಚಿತ್ರರಂಗದ ಹಲವು ಸಿನಿಮಾಗಳನ್ನು ಪರಿಶೀಲಿಸಿ ಅಂತಿಮವಾಗಿ '2018: ಎವ್ರಿಒನ್ ಈಸ್ ಎ ಹೀರೋ' ಚಿತ್ರವನ್ನು ಆಯ್ಕೆ ಮಾಡಿತು. 2018ರಲ್ಲಿ ಕೇರಳದ ಕೆಲ ಪ್ರದೇಶಗಳನ್ನು ಧ್ವಂಸಗೊಳಿಸಿದ್ದ ಭೀಕರ ಪ್ರವಾಹದ ಹಿನ್ನೆಲೆಯಲ್ಲಿ ಈ ಚಿತ್ರಕಥೆ ಸುತ್ತುತ್ತದೆ.
ಜಾಗತಿಕ ಬಾಕ್ಸ್ ಆಫೀಸ್ನಲ್ಲಿ 100 ಕೋಟಿ ರೂ.ಗಳನ್ನು ಅತ್ಯಂತ ವೇಗವಾಗಿ ತಲುಪಿದ ಮಲಯಾಳಂ ಚಿತ್ರ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದೆ. ಜೂಡ್ ಆಂಥನಿ ಜೋಸೆಫ್ (Jude Anthany Joseph) ನಿರ್ದೇಶನದ ಈ ಚಿತ್ರದಲ್ಲಿ ಆಸಿಫ್ ಅಲಿ, ಕುಂಚಾಕೋ ಬೋಬನ್, ಲಾಲ್, ನರೈನ್, ವಿನೀತ್ ಶ್ರೀನಿವಾಸನ್, ಅಪರ್ಣಾ ಬಾಲಮುರಳಿ, ತನ್ವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ವಿಮರ್ಶಕರು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸ್ವೀಕರಿಸಿದೆ.
ಇದನ್ನೂ ಓದಿ: ಕಪ್ಪೆರಾಗ ಸಾಕ್ಷ್ಯಚಿತ್ರಕ್ಕೆ ಗ್ರೀನ್ ಆಸ್ಕರ್ ಪ್ರಶಸ್ತಿ: ಅಭಿನಂದನೆ ತಿಳಿಸಿದ ಸಿಎಂ ಸಿದ್ದರಾಮಯ್ಯ