ವಿಧು ವಿನೋದ್ ಚೋಪ್ರಾ ಅವರ ಬಹುನಿರೀಕ್ಷಿತ ಚಿತ್ರ '12th ಫೇಲ್' ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ವಿಕ್ರಾಂತ್ (Vikrant Massey) ನಟನೆಯ ಸಿನಿಮಾ ಮತ್ತು ಕಂಗನಾ ರಣಾವತ್ ಅವರ ವೈಮಾನಿಕ ಸಾಹಸ ಚಿತ್ರ 'ತೇಜಸ್' ಒಂದೇ ದಿನ ತೆರೆಕಂಡಿದ್ದು, ಎರಡೂ ಚಿತ್ರಗಳ ಕಲೆಕ್ಷನ್ ಅಂಕಿ ಅಂಶ ಸಾಧಾರಣವಾಗಿದೆ. '12th ಫೇಲ್' ಗಳಿಕೆ ಇಂದು ಮತ್ತು ನಾಳೆ (ವಾರಾಂತ್ಯ) ಕೊಂಚ ಏರುವ ಸಾಧ್ಯತೆ ಇದೆ ಎಂದು ಸಿನಿ ಪಂಡಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, '12th ಫೇಲ್' ಸಿನಿಮಾ ತೆರೆಕಂಡ ಮೊದಲ ದಿನ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ 1.10 ಕೋಟಿ ರೂಪಾಯಿ ಸಂಗ್ರಹಿಸಿದೆ. ಈ ಅಂಕಿ ಅಂಶ ಆರಂಭಿಕ ಅಂದಾಜಿನ ಎರಡು ಪಟ್ಟು ಹೆಚ್ಚು. ಸ್ಯಾಕ್ನಿಲ್ಕ್ ಆರಂಭಿಕ ಅಂದಾಜಿನ ಪ್ರಕಾರ, ಇಂದು (ಶನಿವಾರ) 1.75 ಕೋಟಿ ರೂಪಾಯಿ ಗಳಿಸುವ ಸಾಧ್ಯತೆ ಇದೆ. ಈ ಮೂಲಕ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಚಿತ್ರದ ಒಟ್ಟು ಕಲೆಕ್ಷನ್ (ಎರಡು ದಿನದ ಗಳಿಕೆ) 2.85 ಕೋಟಿ ರೂಪಾಯಿ ಆಗಲಿದೆ.
- " class="align-text-top noRightClick twitterSection" data="">
ನಟಿ ಕಂಗನಾ ರಣಾವತ್ ಅವರ ತೇಜಸ್ ಸಿನಿಮಾ ಕೂಡ ನಿನ್ನೆಯೇ ಬಿಡುಗಡೆ ಆಗಿದೆ. ವಿಕ್ರಾಂತ್ ಮಾಸ್ಸೆ ಅಭಿನಯದ ಚಿತ್ರಕ್ಕಿಂತ ತೇಜಸ್ ಹೆಚ್ಚು ಸದ್ದು ಮಾಡಲಿದೆ ಎಂದು ಊಹಿಸಲಾಗಿತ್ತು. ಆದಾಗ್ಯೂ, ವಿಧು ವಿನೋದ್ ಚೋಪ್ರಾ ನಿರ್ದೇಶನದ '12th ಫೇಲ್' ಸಿನಿಮಾ ಗಳಿಕೆ ವಿಚಾರದಲ್ಲಿ ಮುಂದಿದೆ. ತೇಜಸ್ ಸಿನಿಮಾ ಮೊದಲ ದಿನ ಭಾರತದಲ್ಲಿ 1.25 ಕೋಟಿ ರೂಪಾಯಿ ಗಳಿಸಿದೆ, ಎರಡನೇ ದಿನ 1.50 ಕೋಟಿ ರೂ. ಕಲೆಕ್ಷನ್ ಮಾಡಲಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ನಾಳೆ ಹೊರಬೀಳಲಿದೆ 'ಇಂಡಿಯನ್ 2' ಅಪ್ಡೇಟ್ಸ್.. ಕಮಲ್ ಹಾಸನ್ ಅಭಿಮಾನಿಗಳಲ್ಲಿ ಕುತೂಹಲ
'12th ಫೇಲ್' ಚಿತ್ರವನ್ನು ನಿರ್ದೇಶಕ ವಿಧು ವಿನೋದ್ ಚೋಪ್ರಾ ಅವರೇ ಬರೆದು ನಿರ್ಮಿಸಿದ್ದಾರೆ. ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಮತ್ತು ಐಆರ್ಸ್ ಅಧಿಕಾರಿ ಶ್ರದ್ಧಾ ಜೋಶಿ ಪ್ರಯಾಣದ ಕುರಿತಾರ ಅನುರಾಗ್ ಪಾಠಕ್ ಅವರ ಕಾದಂಬರಿಯನ್ನು ಆಧರಿಸಿದೆ. ಎರಡು ಪ್ರಮುಖ ಪಾತ್ರಗಳಲ್ಲಿ ವಿಕ್ರಾಂತ್ ಮಾಸ್ಸೆ ಮತ್ತು ಮೇಧಾ ಶಂಕರ್ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಪ್ರಿಯಾಂಶು ಚಟರ್ಜಿ, ಅನಂತ್ ಜೋಶಿ, ಅಂಶುಮಾನ್ ಪುಷ್ಕರ್ ಸೇರಿದಂತೆ ಇತರರು ನಟಿಸಿದ್ದಾರೆ.
- " class="align-text-top noRightClick twitterSection" data="">
ಇದನ್ನೂ ಓದಿ: 'ತೇಜಸ್'ಗೆ ಮಿಶ್ರ ಪ್ರತಿಕ್ರಿಯೆ: ಕಂಗನಾ ರಣಾವತ್ ಸಿನಿಮಾ 'ಗಳಿಕೆ'ಯಲ್ಲಿ ಹಿನ್ನೆಡೆ!
ಕೆಆರ್ಜಿ ಸ್ಟುಡಿಯೋಸ್ "12th ಫೇಲ್" ಸಿನಿಮಾವನ್ನು ಕನ್ನಡದಲ್ಲಿ ವಿತರಣೆ ಮಾಡಿದೆ. ಕನ್ನಡ ಚಿತ್ರರಂಗದಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿರುವ ಕೆ.ಆರ್.ಜಿ ಸ್ಟುಡಿಯೋಸ್ ಈವರೆಗೂ 100ಕ್ಕೂ ಅಧಿಕ ಚಿತ್ರಗಳ ವಿತರಣೆ ಮಾಡಿ ಸೆಂಚುರಿ ಸಂಭ್ರಮಾಚರಿಸಿದೆ.