ಬಾಲಿವುಡ್ ನಟ ರಣವೀರ್ ಸಿಂಗ್ ಕೆಲವೊಮ್ಮೆ ಸಿನೆಮಾಗಳಿಗಾಗಿ, ಮತ್ತೆ ಕೆಲವು ಬಾರಿ ವಿಭಿನ್ನ ಫ್ಯಾಶನ್ ಸೆನ್ಸ್‌ಗೋಸ್ಕರ ಸುದ್ದಿಲೋಕದಲ್ಲಿ ಸದ್ದು ಮಾಡುತ್ತಾರೆ. ಆದ್ರೆ, ಈ ಸಲ ಇವರು ನಗ್ನ ಫೋಟೋಶೂಟ್ ಮೂಲಕ ನೆಟ್ಟಿಗರು ಹೌಹಾರುವಂತೆ ಮಾಡಿದ್ದಾರೆ. ಹೌದು, ಮ್ಯಾಗಜೀನ್ ಫೋಟೋಶೂಟ್ಗಾಗಿ ರಣವೀರ್ ಬೆತ್ತಲಾಗಿದ್ದು, ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
- " class="align-text-top noRightClick twitterSection" data="
">
ಈ ಚಿತ್ರಗಳನ್ನು ನೋಡಿದ ರಣವೀರ್ ಅಭಿಮಾನಿಗಳು, ಇದಕ್ಕೆಲ್ಲ ಪತ್ನಿ ದೀಪಿಕಾ ಅನುಮತಿ ಕೊಟ್ಟಿದ್ದಾರೆಯೇ? ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬರು ರಣವೀರ್ ಸಿಂಗ್ ಸೂಪರ್ ಹಾಟ್ ಆಗಿ ಕಾಣ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಅವತಾರ ನೋಡಿದ ಕೆಲವರಂತೂ ಆಕ್ರೋಶದ ಕಾಮೆಂಟ್‌ಗಳನ್ನೂ ಮಾಡುತ್ತಿದ್ದಾರೆ. ಇನ್ನೂ ಹಲವರು ಬಾಲಿವುಡ್‌ನಲ್ಲಿ ಕೊಳಕು ಹೆಚ್ಚುತ್ತಿದೆ ಎಂದು ಕಿಡಿ ಕಾರಿದ್ದಾರೆ.
ರಣವೀರ್ ಸಿಂಗ್ ಕೊನೆಯದಾಗಿ ಜಯೇಶ್‌ಭಾಯ್ ಜೋರ್ದಾರ್ ಚಿತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿತ ಗಳಿಕೆ ಮಾಡಲಿಲ್ಲ. ಪ್ರಸ್ತುತ, ತಮ್ಮ ಮುಂಬರುವ ಚಿತ್ರಗಳಾದ ಸರ್ಕಸ್, ರಾಕಿ ಮತ್ತು ರಾಣಿ ಕಿ ಪ್ರೇಮ್ ಕಹಾನಿ ಸೇರಿದಂತೆ ಅನೇಕ ಸಿನೆಮಾಗಳಲ್ಲಿ ನಿರತರಾಗಿದ್ದಾರೆ.
ಪೇಪರ್ ಮ್ಯಾಗಜೀನ್ 2014ರಲ್ಲಿ ಹಾಲಿವುಡ್‌ನ ಕಿಮ್ ಕರ್ದಾಶಿಯನ್ ಶಾಂಪೇನ್ ಫೋಟೋಶೂಟ್‌ನೊಂದಿಗೆ ಇಂಟರ್ನೆಟ್ನಲ್ಲಿ ದೂಳೆಬ್ಬಿಸಿತ್ತು. ಇದೀಗ ನಿಯತಕಾಲಿಕೆ ರಣವೀರ್ ನ್ಯೂಡ್ ಫೋಟೋಶೂಟ್ ಮಾಡ್ಸಿ ಇಂಟರ್ನೆಟ್ನಲ್ಲಿ ಸಂಚಲನ ಸೃಷ್ಟಿಸಿದೆ.
ಇದನ್ನೂ ಓದಿ: HBD Ranveer Singh: ಏಷ್ಯಾದ ಶ್ರೀಮಂತ ಸೆಲೆಬ್ರಿಟಿ ದಂಪತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ತಾರಾ ಜೋಡಿ