ಬಾಲಿವುಡ್ನ ಪ್ರಣಯ ಪಕ್ಷಿಗಳಾದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಲ್ಲದೇ ಟ್ವಿಟರ್ನಲ್ಲಿ ಟ್ರೆಂಡ್ ಸೃಷ್ಟಿಸಿದೆ.
![ಬಿಳಿ ಶೇರ್ವಾನಿಯಲ್ಲಿ ರಣಬೀರ್- ಲೈಟ್ ವೈಟ್ ಸೀರೆಯಲ್ಲಿ ಆಲಿಯಾ](https://etvbharatimages.akamaized.net/etvbharat/prod-images/15020232_alia10.jpg)
ಸುಮಾರು 5 ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಇಂದು ಸಪ್ತಪದಿ ತುಳಿದಿದ್ದಾರೆ.
![ಕ್ಯಾಮೆರಾಗೆ ಪೋಸ್ ನೀಡಿದ ಬಾಲಿವುಡ್ ಜೋಡಿ](https://etvbharatimages.akamaized.net/etvbharat/prod-images/15020232_alia1.jpg)
ಮುಂಬೈನ ಬಾಂದ್ರಾದಲ್ಲಿರುವ ಮನೆಯಲ್ಲಿ ವಿವಾಹ ಸಂಭ್ರಮ ನೆರವೇರಿದೆ. ಮದುವೆಯ ಬಳಿಕ ಆಲಿಯಾ ಮತ್ತು ರಣಬೀರ್ ತಮ್ಮ ಮನೆಯ ಟೆರೇಸ್ ಮೇಲೆ ನಿಂತುಕೊಂಡು ಫೋಟೋ ತೆಗೆದುಕೊಂಡ ವಿಡಿಯೋ, ಫೋಟೋಗಳು ವೈರಲ್ ಆಗಿವೆ.
![ಮದುವೆ ಬಳಿಕ ಸಾರ್ವಜನಿಕವಾಗಿ ಮೊದಲ ಬಾರಿಗೆ ಕಾಣಿಸಿಕೊಂಡ ಜೋಡಿ](https://etvbharatimages.akamaized.net/etvbharat/prod-images/15020232_alia9.jpg)
ಭಾರಿ ಗೌಪ್ಯತೆಯಿಂದ ನಡೆದ ಬಾಲಿವುಡ್ ಜೋಡಿಯ ಈ ಮದುವೆ ಇಂದು ಕೊನೆಗೂ ಬಹಿರಂಗವಾಗಿದೆ. ಇಬ್ಬರೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಮದುವೆಯನ್ನು ದೃಢೀಕರಿಸಿದ್ದಾರೆ.
![ಪತ್ನಿ ಆಲಿಯಾಗೆ ಚುಂಬಿಸಿದ ರಣಬೀರ್ ಕಪೂರ್](https://etvbharatimages.akamaized.net/etvbharat/prod-images/15020232_alia6.jpg)
ಪತ್ನಿಗೆ ಕಿಸ್ ಮಾಡಿದ ರಣಬೀರ್: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೋಟೋಗಳಲ್ಲಿ ಪತ್ನಿ ಆಲಿಯಾ ಭಟ್ಗೆ ರಣಬೀರ್ ಕಪೂರ್ ಚುಂಬಿಸಿದ ಫೋಟೋ ಸಖತ್ ಸದ್ದು ಮಾಡುತ್ತಿದೆ.
![ಆಲಿಯಾ ಭಟ್- ರಣಬೀರ್ ಕಪೂರ್](https://etvbharatimages.akamaized.net/etvbharat/prod-images/15020232_alia4.jpg)
ಬಿಳಿ ಶೇರ್ವಾನಿಯಲ್ಲಿರುವ ಪೇಟ ಧರಿಸಿರುವ ರಣಬೀರ್, ಲೈಟ್ ವೈಟ್ ಬಣ್ಣದ ಸೀರೆಯಲ್ಲಿರುವ ಬೆಡಗಿ ಆಲಿಯಾ ಇಬ್ಬರೂ ಆಲಂಗಿಸಿಕೊಂಡಿರುವ ಫೋಟೋ ಕೂಡ ಹರಿಬಿಡಲಾಗಿದೆ.
![ಆಲಿಯಾ ಭಟ್- ರಣಬೀರ್ ಕಪೂರ್ ಜೊತೆ ನಟಿ ಕರೀಷ್ಮಾ ಕಪೂರ್](https://etvbharatimages.akamaized.net/etvbharat/prod-images/15020232_alia7.jpg)
ವಿವಾಹದ ವೇಳೆ ಆಲಿಯಾ ಮತ್ತು ರಣಬೀರ್ ಪರಸ್ಪರ ಚೇಷ್ಟೆಯಲ್ಲಿ ತೊಡಗಿರುವ ಮತ್ತು ಮಾತುಕತೆ ಮಾಡುತ್ತಿರುವ ಫೋಟೋಗಳು ಇವೆ.
![ನಗುವಿನ ಕಡಲಲ್ಲಿ ತೇಲುತ್ತಿರುವ ಬಾಲಿವುಡ್ ಜೋಡಿ](https://etvbharatimages.akamaized.net/etvbharat/prod-images/15020232_alia.jpg)
ಸ್ಟಾರ್ ಜೋಡಿಯ ಮದುವೆಯಲ್ಲಿ ಬಾಲಿವುಡ್ನ ಆಪ್ತೇಷ್ಟೆಯರು ಮಾತ್ರ ಭಾಗವಹಿಸಿದ್ದರು. ಅಲ್ಲದೇ ಕುಟುಂಬದ ಸದಸ್ಯರು ಕೂಡ ಜೊತೆಗಿದ್ದರು. ನಟಿ ಕರೀಷ್ಮಾ ಕಪೂರ್, ನಿರ್ಮಾಪಕ ಕರಣ್ ಜೋಹರ್ ಫೋಟೋಗಳಲ್ಲಿ ಕಾಣಿಸಿಕೊಂಡಿದ್ದಾರೆ.
![ಅಂದದ ಗೊಂಬೆಯಂತೆ ಮಿಂಚುತ್ತಿರುವ ಆಲಿಯಾ ಭಟ್](https://etvbharatimages.akamaized.net/etvbharat/prod-images/15020232_alia5.jpg)
ಇದಲ್ಲದೇ ಮದುವೆಯಲ್ಲಿ ನೀತು ಕಪೂರ್, ರಿದ್ಧಿಮಾ ಕಪೂರ್ ಸಾಹ್ನಿ, ಕರೀನಾ ಕಪೂರ್ ಖಾನ್, ಕರಿಷ್ಮಾ ಕಪೂರ್, ಮಹೇಶ್ ಭಟ್, ಸೋನಿ ರಜ್ದಾನ್, ಶಾಹೀನ್ ಭಟ್ ಮತ್ತು ಇತರರು ಭಾಗವಹಿಸಿದ್ದರು.
![ನಿರ್ಮಾಪಕ ಕರಣ ಜೋಹರ್ ಜೊತೆ ಆಲಿಯಾ- ರಣಬೀರ್](https://etvbharatimages.akamaized.net/etvbharat/prod-images/15020232_alia8.jpg)
ಇದನ್ನೂ ಓದಿ: ಬಾಳಸಂಗಾತಿಗಳಾದ ರಣಬೀರ್ ಕಪೂರ್, ಆಲಿಯಾ ಭಟ್; ಸಾಂಗವಾಗಿ ನೆರವೇರಿದ ವಿವಾಹ