ಹೈದ್ರಾಬಾದ್: ಸೂಪರ್ ಸ್ಟಾರ್ ಪ್ರಭಾಸ್ ಸಾಲು ಸಾಲು ಚಿತ್ರಗಳ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾದ 'ಸಲಾರ್' ಮತ್ರು 'ಪ್ರಾಜೆಕ್ಟ್ ಕೆ'ಯಲ್ಲಿ ಬ್ಯುಸಿಯಾಗಿರುವ ಪ್ರಭಾಸ್ ತೆಲುಗಿನ ಹಾರಾಟ್- ಕಾಮಿಡಿ ಚಿತ್ರ 'ರಾಜ ಡಿಲಕ್ಸ್'ನಲ್ಲೂ ನಟಿಸುತ್ತಿದ್ದಾರೆ. ಈ ನಡುವೆ ಅವರ ಆದಿಪುರುಷ್ ಸಿನಿಮಾ ಕೂಡ ಬಿಡುಗಡೆಗೆ ಸದ್ದಾಗಿದೆ. ಈ ಎಲ್ಲಾ ಸಿನಿಮಾಗಳ ನಡುವೆ ಮತ್ತೊಂದು ಚಿತ್ರಕ್ಕೆ ಅವರ ಮಾತುಕತೆ ನಡೆಸಿದ್ದಾರೆ. ಹಿಂದಿಯಲ್ಲಿ ಬ್ಲಾಕ್ ಬಸ್ಟರ್ ಹಿಟ್ ನೀಡಿರುವ ಪಠಾಣ್ ಸಿನಿಮಾದ ನಿರ್ದೇಶಕ ಸಿದ್ದಾರ್ಥ್ ಆನಂದ್ ಜೊತೆ ಅವರ ತಮ್ಮ ಮುಂದಿನ ಚಿತ್ರದ ಮಾತುಕತೆ ನಡೆಸಿದ್ದಾರೆ. ಈ ಚಿತ್ರದಲ್ಲಿ ನಟ ಹೃತಿಕ್ ರೋಷನ್ ಕೂಡ ಇದ್ದು, ಪ್ರಭಾಸ್ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರೆ ಎಂದು ವರದಿ ತಿಳಿಸಿದೆ.
- " class="align-text-top noRightClick twitterSection" data="
">
'ಪುಷ್ಪ: ದಿ ರೈಸ್', 'ವೀರ ಸಿಂಹ ರೆಡ್ಡಿ', 'ವಾಲ್ಟೈರ್ ವೀರಯ್ಯ', 'ರಂಗಸ್ಥಳಂ' ಚಿತ್ರ ನಿರ್ಮಾಣ ಮಾಡಿದ ಮೈತ್ರಿ ಮೂವಿ ಮೇಕರ್ ಈ ಸಿನಿಮಾ ನಿರ್ಮಾಣ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ವರದಿ ಅನುಸಾರ, ಇದೊಂದು ಮಲ್ಟಿ ಸ್ಟಾರರ್ ಚಿತ್ರ ಇದಾಗಿದ್ದು, ಚಿತ್ರ ನಿರ್ಮಾಣ ಸಂಸ್ಥೆಯೊಂದಿಗೆ ಈ ಚಿತ್ರದ ಮಾತುಕತೆ ನಡೆದಿದೆ ಎನ್ನಲಾಗಿದೆ.
ಎಲ್ಲವೂ ಅಂದುಕೊಂಡಂತೆ ಆದರೆ, ಸಿದ್ದಾರ್ಥ್ ಆನಂದ್ ಅವರ ನಿರ್ದೇಶನದ ಪ್ರಭಾಸ್ ಮತ್ತು ಹೃತಿಕ್ ಅಭಿನಯದ ಈ ಚಿತ್ರ ಮುಂದಿನ ವರ್ಷ ಸೆಟ್ಟೇರುವ ಸಾಧ್ಯತೆ ಇದೆ. ಸದ್ಯ ಹೃತಿಕ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಸಿನಿಮಾ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರ ಮುಗಿದ ಬಳಿಕವೇ ಮುಂದಿನ ಚಿತ್ರಕ್ಕೆ ಅವರು ತಯಾರಿ ನಡೆಸಲಿದ್ದಾರೆ. ಇತ್ತ ಪ್ರಭಾಸ್ ಕೂಡ ಹಲವು ಪ್ರಾಜೆಕ್ಟ್ನಲ್ಲಿ ಬ್ಯುಸಿಯಾಗಿದ್ದು, ಇವು ಮುಗಿದ ಬಳಿಕ ಮುಂದಿನ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ.
ಎಲ್ಲವೂ ಅಂದಿಕೊಂತೆ ಆದರೆ ಸಿದ್ದಾರ್ಥ್ ಮತ್ತು ಹೃತಿಕ್ ಜೊತೆಯಾಗಿ ಮಾಡುವ ನಾಲ್ಕನೇ ಚಿತ್ರ ಇದಾಗಿರಲಿದೆ. ಈಗಾಗಲೇ ಮೂರು ಚಿತ್ರಗಳಲ್ಲಿ ಈ ಜೋಡಿ ಕೆಲಸ ಮಾಡಿದೆ. 2014ರಲ್ಲಿ ಬ್ಯಾಂಗ್ ಬ್ಯಾಂಗಿ, 2019ರಲ್ಲಿ ವಾರ್ ಮಾಡಿದ್ದು, ಸದ್ಯ ಇವರು ಫೈಟರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರ 2024ಕ್ಕೆ ಬಿಡುಗಡೆಯಾಗಲಿದೆ. ಈ ಮೂರು ಸಿನಿಮಾ ಬಾಲಿವುಡ್ನಲ್ಲಿ ನಿರ್ದೇಶಕನಿಗೆ ಉತ್ತಮ ಹೆಸರು ಮತ್ತು ಹಣವನ್ನು ನೀಡಿದೆ. ಸದ್ಯ ಅವರ ಪಠಾಣ್ ಸಿನಿಮಾ ನಿರೀಕ್ಷೆಗೂ ಮೀರಿದ ಯಶಸ್ಸನ್ನು ಕಾಣುತ್ತಿದೆ. ಇನ್ನು ನಟ ಹೃತಿಕ್ ಮತ್ತು ಪ್ರಭಾಸ್ ಒಟ್ಟಿಗೆ ಸಿನಿಮಾ ಮಾಡಿದರೆ, ಅದು ಕೂಡ ಆ್ಯಕ್ಷನ್ ಚಿತ್ರ ಆಗಿರಲಿದೆ. ಇದೊಂದು ಬಿಗ್ ಬಜೆಟ್ ಚಿತ್ರ ಆಗಿರಲಿದ್ದು, ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆ ಎನ್ನಲಾಗ್ತಿದೆ.
- " class="align-text-top noRightClick twitterSection" data="
">
ಸದ್ಯ, ಪ್ರಶಾಂತ್ ನೀಲ್ ಅವರ ಪ್ಯಾನ್ ಇಂಡಿಯಾ ಸಿನಿಮಾ ಸಲಾರ್ ಹಾಗೂ ಪ್ರಾಜೆಕ್ಟ್ ಕೆ ಅಲ್ಲಿ ನಟ ಪ್ರಭಾಸ್ ಬ್ಯುಸಿಯಾಗಿದ್ದಾರೆ. ಈ ನಡುವೆ ಸೈಫ್ ಆಲಿ ಖಾನ್ ರಾವಣನಾಗಿ ನಟಿಸುತ್ತಿರುವ ಪ್ರಭಾಸ್ ರಾಮನಾಗಿ ನಟಿಸಿರುವ ಆದಿಪುರುಷ್ ಸಿನಿಮಾದ ಟೀಸರ್ ಇತ್ತೀಚಿಗಷ್ಟೇ ಬಿಡುಗಡೆಗೊಂಡಿತ್ತು.
ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪೂಜಾ ಹೆಗ್ಡೆ ಸಹೋದರ ರಿಷಬ್ ಹೆಗ್ಡೆ: ಫೋಟೋಗಳಿವೆ ನೋಡಿ