ಚೆನ್ನೈ (ತಮಿಳುನಾಡು): ಲಾಸ್ಟ್ ಫಿಲ್ಮ್ ಶೋ (ಚೆಲ್ಲೋ ಶೋ) ಸಿನಿಮಾವು ಆಸ್ಕರ್ 2023ಕ್ಕೆ ಭಾರತದಿಂದ ಅಧಿಕೃತ ಪ್ರವೇಶವಾಗಿದೆ. ಈ ಸಿನಿಮಾವನ್ನು ತಯಾರಕರು 95 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಅದು ಕೂಡ ಬಿಡುಗಡೆ ಒಂದು ದಿನ ಬಾಕಿ ಇರುವಾಗಲೇ. ಅಲ್ಲದೇ ಸಿನಿಮಾದ ಟಿಕೆಟ್ ದರವನ್ನು 95 ರೂ.ಗೆ ನಿಗದಿಪಡಿಸಿದ್ದಾರೆ. ಆದ್ರೆ ಚಿತ್ರ ಬಿಡುಗಡೆಗೂ ಮುನ್ನ ದುಃಖದ ಸುದ್ದಿಯೊಂದು ಹೊರ ಬಿದ್ದಿದೆ.
ಹೌದು, ಚೆಲ್ಲೋ ಶೋ ಸಿನಿಮಾ ತಯಾರಕರು ಅಕ್ಟೋಬರ್ 13 ಅಂದರೆ ಗುರುವಾರದ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಆದರೆ, ಗುಜರಾತಿ ಭಾಷೆಯಲ್ಲಿರುವ ಸಿನಿಮಾ ಶುಕ್ರವಾರ (ಅಕ್ಟೋಬರ್14) ಭಾರತದಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ 15 ವರ್ಷದ ಬಾಲಕ ರಾಹುಲ್ ಕೋಲಿ ಇನ್ನಿಲ್ಲ. ಅವರು ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
95ನೇ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾದ ಹಿನ್ನೆಲೆ 95 ಚಿತ್ರಮಂದಿರಗಳಲ್ಲಿ, 95 ರೂಪಾಯಿಗಳ ಟಿಕೆಟ್ ದರದಲ್ಲಿ ಸಿನಿಮಾ ನೋಡಬಹುದಾಗಿದೆ. ಈ ವಿಷಯವನ್ನು ನಿರ್ದೇಶಕ ಪಾನ್ ನಳಿನ್ ಹಂಚಿಕೊಂಡಿದ್ದು, ನಮ್ಮ ಕೊನೆಯ ಚಿತ್ರ ಪ್ರದರ್ಶನ ('ಚೆಲ್ಲೋ ಶೋ') ಸಿನಿಮಾ ನೋಡಲು ಅಭಿಮಾನಿಗಳು ತುಂಬಾ ಉತ್ಸಾಹದಿಂದ ಕಾಯುತ್ತಿದ್ದಾರೆ. ಹಾಗಾಗಿ ನಾವು ಗುರುವಾರ ಬಿಡುಗಡೆ ಮಾಡುತ್ತಿದ್ದೇವೆ ಎಂದು ಹೇಳಿದ್ದರು.