ಹೈದರಾಬಾದ್: ಸೂಪರ್ ಸ್ಟಾರ್ ಅಮೀರ್ ಖಾನ್ ಅಭಿನಯದ 'ಲಾಲ್ ಸಿಂಗ್ ಚಡ್ಡಾ' ಚಿತ್ರ ಇಂದು ತಡವಾಗಿ ತೆರೆ ಕಂಡಿದೆ. ಚಿತ್ರದಲ್ಲಿ ಅಮೀರ್ ಖಾನ್ ಮತ್ತು ಕರೀನಾ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಹಾಲಿವುಡ್ ಚಿತ್ರ 'ಫಾರೆಸ್ಟ್ ಗಂಪ್' ನ ಅಧಿಕೃತ ಹಿಂದಿ ರಿಮೇಕ್ ಆಗಿದೆ.
ಚಿತ್ರದ ಬಿಡುಗಡೆಗೂ ಮುನ್ನ ಅಮೀರ್ ಖಾನ್ ತುಂಬಾ ಆತಂಕಗೊಂಡಿದ್ದರು. ಈ ಚಿತ್ರವನ್ನು ಬ್ಯಾನ್ ಮಾಡಬೇಕೆಂಬ ಘೋಷಣೆಯಿಂದಾಗಿ ಅಮೀರ್ ಶಾಂತಿಯುತವಾಗಿ ನಿದ್ದೆ ಮಾಡುತ್ತಿಲ್ಲವಂತೆ. ನಿನ್ನೆ ಬಾಲಿವುಡ್‌ನ ತಾರೆಯರಿಗೆ ಈ ಚಿತ್ರದ ವಿಶೇಷ ಪ್ರದರ್ಶನ ನಡೆಯಿತು. ಲಾಲ್ ಸಿಂಗ್ ಚಡ್ಡಾ ಚಿತ್ರವನ್ನು ವೀಕ್ಷಿಸಲು ಆಲಿಯಾ ಭಟ್ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
![Laal Singh Chaddha release aamir khan movie Laal Singh Chaddha aamir khan movie Laal Singh Chaddha release Laal Singh Chaddha and kareena kapoor khan Alia bhatt Alia bhatt and kareena kapoor khan Alia bhatt and Laal Singh Chaddha ಲಾಲ್ ಸಿಂಗ್ ಚಡ್ಡಾ ಅಮೀರ್ ಖಾನ್ ಮತ್ತು ಕರೀನಾ ಕಪೂರ್ ಖಾನ್ ಅಭಿನಯ ತಡವಾಗಿ ತೆರೆಗೆ ಅಪ್ಪಳಿಸಿದ ಲಾಲ್ ಸಿಂಗ್ ಚಡ್ಡಾ ಫಾರೆಸ್ಟ್ ಗಂಪ್ ಆಲಿಯಾ ಭಟ್ ತಮ್ಮ ಅಭಿಮಾನಿಗಳಿಗೆ ಮನವಿ](https://etvbharatimages.akamaized.net/etvbharat/prod-images/16073385_j.png)
ಆಲಿಯಾ ಭಟ್ ಅಭಿಮಾನಿಗಳಲ್ಲಿ ಮನವಿ: ಆಲಿಯಾ ಭಟ್ ಕೂಡ ಸಿನಿಮಾ ನೋಡಿ ತುಂಬಾ ಒಳ್ಳೆ ಚಿತ್ರ ಎಂದು ಹೇಳಿದ್ದಾರೆ. ಆಲಿಯಾ ತಮ್ಮ ಇನ್ಸ್ಟಾಸ್ಟೋರಿ, ತುಂಬಾ ಅದ್ಭುತವಾದ ಚಿತ್ರ ಎಂದು ಬರೆದುಕೊಂಡಿದ್ದಾರೆ. ಈ ಚಿತ್ರವನ್ನು ಥಿಯೇಟರ್‌ಗಳಿಗೆ ಹೋಗಿ ನೋಡಿ, ಮಿಸ್ ಮಾಡಬೇಡಿ ಎಂದು ಅಭಿಮಾನಿಗಳಿಗೆ ಆಲಿಯಾ ಹೇಳಿದ್ದಾರೆ.
- " class="align-text-top noRightClick twitterSection" data="
">
ಚಿತ್ರದಲ್ಲಿ ತೆಲುಗು ನಟ : ಅಮೀರ್ ಖಾನ್ ಮತ್ತು ಕರೀನಾ ಕಪೂರ್ ಖಾನ್ ಹೊರತುಪಡಿಸಿ, 'ಲಾಲ್ ಸಿಂಗ್ ಚಡ್ಡಾ' ಚಿತ್ರದಲ್ಲಿ ನಟಿ ಮೋನಾ ಸಿಂಗ್ ಮತ್ತು ಟಾಲಿವುಡ್ ಸ್ಟಾರ್ ನಟ ನಾಗ ಚೈತನ್ಯ ಸಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಾಗ ಚೈತನ್ಯ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು.
ಯಾರ್ಯಾರಿಗೆ ಎಷ್ಟೇಷ್ಟು ಸಂಭವಾನೆ: ಮಾಧ್ಯಮಗಳ ಪ್ರಕಾರ ಈ ಚಿತ್ರಕ್ಕಾಗಿ ಅಮೀರ್ ಖಾನ್ 50 ಕೋಟಿ, ಕರೀನಾ ಕಪೂರ್ ಖಾನ್ 8 ಕೋಟಿ, ನಟಿ ಮೋನಾ ಸಿಂಗ್ ಈ ಚಿತ್ರದಲ್ಲಿ ರೋಲ್ ಮಾಡಲು 2 ಕೋಟಿ ಪಡೆದರೆ 6 ಕೋಟಿ ಸಂಭಾವನೆ ಪಡೆದಿರುವ ನಟ ನಾಗ ಚೈತನ್ಯ ಈ ಚಿತ್ರದ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ.
ಅಮೀರ್ ಖಾನ್ ಮತ್ತು ಅಕ್ಷಯ್ ಕುಮಾರ್ ಮುಖಾಮುಖಿ : ಇಂದು ಅಕ್ಷಯ್ ಕುಮಾರ್ ಅಭಿನಯದ 'ರಕ್ಷಾ ಬಂಧನ' ಸಿನಿಮಾ ಕೂಡ ರಿಲೀಸ್ ಆಗಿದೆ. 'ತನು ವೆಡ್ಸ್ ಮನು' ಮತ್ತು 'ರಾಂಜನಾ' ಚಿತ್ರಗಳನ್ನು ನಿರ್ಮಿಸಿದ ನಿರ್ದೇಶಕ ಆನಂದ್ ಎಲ್ ರಾಯ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈಗ ಯಾವ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಎಷ್ಟೊಂದು ಗಳಿಸುತ್ತೆಂಬುದು ಈ ವಾರದೊಳಗೆ ಗೊತ್ತಾಗಲಿದೆ.
ಓದಿ: ಲಾಲ್ ಸಿಂಗ್ ಚಡ್ಡಾ ರಿಲೀಸ್: ಆತಂಕದಿಂದ 48 ಗಂಟೆ ನಿದ್ದೆ ಮಾಡಿಲ್ಲವಂತೆ ನಟ ಅಮೀರ್ ಖಾನ್