ಹಾಲಿವುಡ್ ನಿರ್ದೇಶಕ ವಿಲಿಯಂ ಫ್ರೈಡ್ಕಿನ್ ಸೋಮವಾರ ಲಾಸ್ ಏಂಜಲೀಸ್ನಲ್ಲಿ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. 'ದಿ ಫ್ರೆಂಚ್ ಕನೆಕ್ಷನ್' ಮತ್ತು 'ದಿ ಎಕ್ಸಾರ್ಸಿಸ್ಟ್' ಚಿತ್ರಗಳಿಗಾಗಿ ಅವರು ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ವಿಲಿಯಂ ಫ್ರೈಡ್ಕಿನ್ ಅವರ ಪತ್ನಿ ಶೆರ್ರಿ ಲ್ಯಾನ್ಸಿಂಗ್ ಅವರ ಆಪ್ತ ಸ್ನೇಹಿತ, ಚಾಪ್ಮನ್ ವಿಶ್ಚವಿದ್ಯಾಲಯದ ಡೀನ್ ಸ್ಟೀಫನ್ ಗ್ಯಾಲೋವೆ ನಟನ ನಿಧನವನ್ನು ಧೃಢಪಡಿಸಿದ್ದಾರೆ.
ವಿಲಿಯಂ ಫ್ರೈಡ್ಕಿನ್ ನಿರ್ದೇಶನದ 'ದಿ ಕೇನ್ ಮ್ಯೂಟಿನಿ ಕೋರ್ಟ್ ಮಾರ್ಷಲ್' ಚಿತ್ರದ ಪ್ರಥಮ ಪ್ರದರ್ಶನವನ್ನು ಆಯೋಜಿಸಲು ವೆನಿಸ್ ಚಲನಚಿತ್ರೋದ್ಯಮ ನಿರ್ಧರಿಸಿದೆ. ಈ ಚಿತ್ರದಲ್ಲಿ ಕೀಫರ್ ಸದರ್ಲ್ಯಾಂಡ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇದು ಫ್ರೈಡ್ಕಿನ್ ಅವರ ಕೊನೆಯ ಚಿತ್ರವಾಗಿದೆ.
ಆಸ್ಕರ್ ವಿಜೇತ ವಿಲಿಯಂ ಫ್ರೈಡ್ಕಿನ್: ಫ್ರೈಡ್ಕಿನ್ ಅವರು 1970ರ ದಶಕದಲ್ಲಿ, ಯುವ ಮತ್ತು ಧೈರ್ಯಶಾಲಿ ನಿರ್ದೇಶಕರ ಗುಂಪಿನೊಂದಿಗೆ ಸೇರಿಕೊಂಡರು. ಹಾಲ್ ಅಶ್ಬೈ, ಫ್ರಾನ್ಸಿಸ್ ಫಾರ್ಡ್ ಕೊಪ್ಪೊಲಾ ಮತ್ತು ಪೀಟರ್ ಬಾಗ್ಡಾನೋವಿಚ್ ಅವರೊಂದಿಗೆ ಎ- ಪಟ್ಟಿಯಲ್ಲಿ ಖ್ಯಾತಿ ಗಳಿಸಿದರು. ಬಳಿಕ ಹಾರರ್ ಮತ್ತು ಪೊಲೀಸ್ ಥ್ರಿಲ್ಲರ್ ಪ್ರಕಾರದ ಚಿತ್ರಗಳನ್ನು ತೆರೆಗೆ ತರುವಲ್ಲಿ ಬಹುಮುಖ್ಯ ಪಾತ್ರ ವಹಿಸಿದರು. ವಿಶೇಷವಾಗಿ ದೂರದರ್ಶನಕ್ಕೆ ಸಂಬಂಧಪಟ್ಟಂತೆ ಅತ್ಯಾಧುನಿಕ ಶೈಲಿಯನ್ನು ಪ್ರೇಕ್ಷಕರಿಗೆ ಉಣಬಡಿಸುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ: 'ವ್ಯಾನಿಶಿಂಗ್ ಪಾಯಿಂಟ್' ಖ್ಯಾತಿಯ ಹಾಲಿವುಡ್ ಹಿರಿಯ ನಟ ಬ್ಯಾರಿ ನ್ಯೂಮನ್ ನಿಧನ
'ದಿ ಫ್ರೆಂಚ್ ಕನೆಕ್ಷನ್' ಅನ್ನು ಸಾಕ್ಷ್ಯಚಿತ್ರ ಶೈಲಿಯಲ್ಲಿ ಚಿತ್ರೀಕರಿಸಲಾಯಿತು. ಇದು ಪ್ರಸಿದ್ಧವಾದ ಕಾರ್ ಚೇಸ್ ಸೀಕ್ವೆನ್ಸ್ ಅನ್ನು ಒಳಗೊಂಡಿತ್ತು. ಈ ಚಿತ್ರವು ಅತ್ಯುತ್ತಮ ಚಿತ್ರ, ನಿರ್ದೇಶಕ ಮತ್ತು ನಟ ಸೇರಿದಂತೆ ಅನೇಕ ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡಿತು. ಈ ಮೂಲಕ ಹಾಲಿವುಡ್ನ ಖ್ಯಾತ ನಿರ್ದೇಶಕರ ಸಾಲಿನಲ್ಲಿ ವಿಲಿಯಂ ಫ್ರೈಡ್ಕಿನ್ ಸೇರಿಕೊಂಡರು.
'ದಿ ಫ್ರೆಂಚ್ ಕನೆಕ್ಷನ್' ಚಿತ್ರ ವಿಮರ್ಶಾತ್ಮಕ ಮೆಚ್ಚುಗೆ ಗಳಿಸಿದ ನಂತರ, 1973 ರಲ್ಲಿ ಬಿಡುಗಡೆಯಾದ 'ದಿ ಎಕ್ಸಾರ್ಸಿಸ್ಟ್' ಚಿತ್ರ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 500 ಮಿಲಿಯನ್ ಡಾಲರ್ ಗಳಿಸಿತು. ದಿ ಗಾಡ್ಫಾದರ್ ಸಿನಿಮಾ ಜೊತೆ ಉತ್ತಮ ಸ್ಪರ್ಧೆಯನ್ನು ನೀಡಿತು. 'ದಿ ಫ್ರೆಂಚ್ ಕನೆಕ್ಷನ್' ವಿಲಿಯಂ ಪೀಟರ್ ಬ್ಲಾಟಿಯವರ ಪುಸ್ತಕವನ್ನು ಆಧರಿಸಿದ ಕಥೆಯಾಗಿದೆ. ಇದು ಒಂದು ಹಾರರ್ ಚಿತ್ರ. ಒಂದು ಚಿಕ್ಕ ಹುಡುಗಿಗೆ ದೆವ್ವ ಹಿಡಿಯುವ ಬಗ್ಗೆ ಭಯಾನಕವಾಗಿ ತೋರಿಸಲಾಗಿದೆ.
'ದಿ ಫ್ರೆಂಚ್ ಕನೆಕ್ಷನ್' ಚಿತ್ರಕ್ಕಾಗಿ ಎರಡನೇ ಬಾರಿಗೆ ಅವರು ಪ್ರತಿಷ್ಠಿತ ಆಸ್ಕರ್ನ ಅತ್ಯುತ್ತಮ ನಿರ್ದೇಶಕ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದರು. ಫ್ರೈಡ್ಕಿನ್ ಸುಮಾರು 2,000 ಕ್ಕೂ ಹೆಚ್ಚು ದೂರದರ್ಶನ ಕಾರ್ಯಕ್ರಮಗಳನ್ನು ನಿರ್ದೇಶಿಸಿದ್ದಾರೆ. ಅದರಲ್ಲಿ ದಿ ಪೀಪಲ್ ವರ್ಸ್ಸ್ ಪಾಲ್ ಕ್ರಂಪ್ ಕೂಡ ಸೇರಿದೆ.
ಇದನ್ನೂ ಓದಿ: 'ಬ್ರೇಕಿಂಗ್ ಬ್ಯಾಡ್' ಖ್ಯಾತಿಯ ಹಾಲಿವುಡ್ ನಟ ಮಾರ್ಕ್ ಮಾರ್ಗೋಲಿಸ್ ನಿಧನ