ಹೈದರಾಬಾದ್: ಸದ್ಯ ಹಾಲಿವುಡ್ನ ಗಾಡ್ ಫಾದರ್ ನಟ 83 ವರ್ಷದ ಆಲ್ ಪಾಸಿನೊ ಸುದ್ದಿ ಮಾಡುತ್ತಿದ್ದಾರೆ. ಕಾರಣ ಅವರ ಮೊಮ್ಮಗಳ ವಯಸ್ಸಿನ ಗೆಳತಿಗೆ ತಂದೆಯಾಗುತ್ತಿರುವ ವಿಚಾರದಿಂದ. ಆಲ್ ಪಾಸಿನೊ ಹಾಗೂ ಅವರ 29 ವರ್ಷದ ಗೆಳತಿ ನೂರ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಸದ್ಯ ಎಲ್ಲೆಡೆ ಸದ್ದು ಮಾಡುತ್ತಿದೆ. ಮೊದಲಬಾರಿಗೆ 2022ರಲ್ಲಿ ಒಟ್ಟಿಗೆ ಕಾಣಿಸಿಕೊಂಡ ಈ ಜೋಡಿ ಸಾಂಕ್ರಾಮಿಕ ಸಮಯದಲ್ಲಿ ಡೇಟಿಂಗ್ ನಡೆಸಿದ್ದಾರೆ ಎಂಬ ವರದಿಯಾಗಿದೆ.
ಆದರೆ, ಇದೀಗ ಬಂದ ಹೊಸ ಸುದ್ದಿ ಎಂದರೆ, ಅಲ್ ಪಾಸಿನೊ ಮತ್ತು ನೂರ್ ಆಲ್ಫಾಲ್ಹಾ ಇಬ್ಬರು ಬಹುದಿನಗಳಿಂದ ಒಟ್ಟಿಗೆ ಉಳಿದಿಲ್ಲ. ಆಪ್ತ ಮೂಲಗಳ ಪ್ರಕಾರ, ಪಾಸಿನೊ ಈ ಮಗುವಿನ ಪಿತೃತ್ವ ಪರೀಕ್ಷೆ ನಡೆಸುವಂತೆ ತಿಳಿಸಿದ್ದಾರೆ ಎನ್ನಲಾಗಿದೆ. ಮಾಧ್ಯಮಗಳ ಅನುಸಾರ, ಆಲ್ ಫಾಸಿನೊಗೆ ತಮ್ಮ 22 ವರ್ಷದ ಮಗಳು ಓಲಿವಿಯಾಳಿಂದ ಹಿರಿಯ ನಟನಿಗೆ ನೂರ್ ಪರಿಚಯವಾಗಿದ್ದು, ಇವರು ಕೆಲಸ ಕಾಲ ಡೇಟಿಂಗ್ ನಡೆಸಿದ್ದಾರೆ
ಓಲಿವಿಯಾ ಮತ್ತು ನೂರು ಆಪ್ತ ಸ್ನೇಹಿತರಾಗಿದ್ದು, ಇಬ್ಬರೂ ಎಲ್ಲಿಗೆ ಹೋದರೂ ಅವುಗಳ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಪರಸ್ಪರ ಟ್ಯಾಗ್ ಮಾಡುತ್ತಿದ್ದರು. ಇವರ ನಡುವಿದ್ದ ಆಪ್ತತೆಯಿಂದ ನೂರ್ ಕೂಡ ಹಿರಿಯ ನಟನಿಗೆ ಆತ್ಮೀಯವಾಗಿದ್ದಾರೆ. ಆದರೆ, ಆಲ್ ಪಾಸಿನೊ ಮತ್ತು ನೂರ್ ನಡುವಿನ ಸಂಬಂಧ ಈಗಾಗಲೇ ತುಂಬಾ ದಿನಗಳ ಹಿಂದಿಯೇ ಕಡಿದು ಹೋಗಿದೆ. ಅಲ್ಲದೇ ನೂರು 11 ವಾರಗಳ ಕಾಲ ಆಕೆ ಗರ್ಭಿಣಿ ಆಗಿರುವ ಸತ್ಯವನ್ನು ಉದ್ದೇಶ ಪೂರ್ವಕವಾಗಿ ಆತನಿಂದ ಮರೆ ಮಾಚಿದ್ದಳು.
ಆಕೆಗೆ ಆಲ್ಗೆ ಮಗು ಬೇಡ ಎಂಬುದು ಗೊತ್ತಿತ್ತು. ಅವರ ನಡುವೆ ಯಾವುದೇ ಸಂಬಂಧ ಇರಲಿಲ್ಲ. ಇದು ಕೇವಲ ಗೊಂದಲ ಅಷ್ಟೇ ಎಂದು ಆಪ್ತರು ತಿಳಿಸಿದ್ದಾರೆ. ಈ ಸಂಬಂಧ ವಕೀಲರು ಕೂಡ ಹಲವರು ತಿಂಗಳುಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿದ್ದಾರೆ. ಆಲ್ ಪಾಸಿನೊ ಕೂಡ ತಮ್ಮ ಮಾಜಿ ಗೆಳತಿಯ ಮಗುವಿನ ತಂದೆ ಯಾರು ಎಂಬ ಸತ್ಯವನ್ನು ತಿಳಿಯಲು ಪಿತೃತ್ವ ಪರೀಕ್ಷೆಗೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ನೂರ್ ಕೂಡ ನಟನೊಂದಿಗೆ ಡೇಟಿಂಗ್ ನಡೆಸುವ ಸಂದರ್ಭದಲ್ಲಿ ತಾನು ಮಗುವನ್ನು ಹೇರಲು ಸಾಧ್ಯವಿಲ್ಲ. ಕಾರಣ ತನಗೆ ಥೈರಾಯ್ಡ್ ಸಮಸ್ಯೆ ಇದೆ ಎಂದಿದ್ದಳು ಎಂದು ಮೂಲಗಳು ತಿಳಿಸಿದೆ. ಅದು ಏನೇ ಆಗಲಿ ಇದೀಗ ನೂರ್ ತಾಯಿ ಆಗುತ್ತಿರುವ ವಿಚಾರ ಹಾಲಿವುಡ್ ಹಿರಿಯ ನಟನ ತಲೆ ಕೆಡಿಸಿರುವುದು ಸುಳ್ಳಲ್ಲ. ಇದರಿಂದ ಆತ ತುಂಬಾ ಬೇಸರಗೊಂಡಿದ್ದಾನೆ ಎಂದು ತಿಳಿದು ಬಂದಿದೆ.
ನೂರ್ ಹಿರಿನ ನಟನಿಗೂ ಮೊದಲು 2017- 2018ರವರೆಗೆ 79 ವರ್ಷದ ಮಿಕ್ ಜಗ್ಗರ್, ಜೊತೆಗೆ ಡೇಟಿಂಗ್ ನಡೆಸಿದ್ದಳು. ಇದಾದ ಬಳಿಕ ಆಕೆ ಮಿಕ್ ಜೊತೆಗೆ ನಿಕ್ ಜೊತೆ ಮಾಡಿಕೊಂಡ ನಿಶ್ಚಿತಾರ್ಥವೂ ಮುರಿದು ಬಿದ್ದಿತು. ಇದಾದ ನಂತರ ಆಕೆ ಶ್ರೀಮಂತ ಹೂಡಿಕೆದಾರ ನಿಕೊಲಸ್ ಬರ್ಗ್ರುಯೆನ್ ಎಂಬ 61 ವರ್ಷದ ವ್ಯಕ್ತಿ ಜೊತೆ ಕೂಡ ಸಂಬಂಧ ಹೊಂದಿದ್ದಳು.
ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ಆರ್ ಮಾಧವನ್: ನೀವು ನೋಡಲೇಬೇಕಾದ 5 ಚಿತ್ರಗಳು ಇಲ್ಲಿವೆ!