ETV Bharat / entertainment

ಹೌದು ಪ್ರತಿಯೊಬ್ಬ ತಾಯಿಯೂ ಸೂಪರ್​ ಹೀರೋನೇ: ನಟಿ ಶಿಲ್ಪಾ ಶೆಟ್ಟಿ - ಮಹಿಳೆಯರ ಶಕ್ತಿ ಬಗ್ಗೆ ಮಾತನಾಡಿದ ಶಿಲ್ಪಾ ಶೆಟ್ಟಿ

ಮಹಿಳೆಯರ ಶಕ್ತಿಯ ಬಗ್ಗೆ ನಟಿ ಶಿಲ್ಪಾ ಶೆಟ್ಟಿ ಮಾತಾನಾಡಿದ್ದಾರೆ. ನಿಕಮ್ಮಾ ಚಿತ್ರದ ಮೂಲಕ ಮತ್ತೆ ಬೆಳ್ಳಿ ಪರದೆಗೆ ಕಾಲಿಡುತ್ತಿರುವ ಅವರು ಪ್ರತಿ ತಾಯಿಯೂ ಸೂಪರ್​ ಹೀರೋ ಆಗಿದ್ದಾರೆ ಎಂದು ಹೇಳಿದ್ದಾರೆ.

Shilpa Shetty calls every woman a superhero, Shilpa Shetty talk about Girlpower, Actress Shilpa Shetty news, ಪ್ರತಿ ಮಹಿಳೆಯನ್ನು ಸೂಪರ್ ಹೀರೋ ಎಂದು ಕರೆದ ಶಿಲ್ಪಾ ಶೆಟ್ಟಿ, ಮಹಿಳೆಯರ ಶಕ್ತಿ ಬಗ್ಗೆ ಮಾತನಾಡಿದ ಶಿಲ್ಪಾ ಶೆಟ್ಟಿ, ನಟಿ ಶಿಲ್ಪಾ ಶೆಟ್ಟಿ ಸುದ್ದಿ,
ನಟಿ ಶಿಲ್ಪಾ ಶೆಟ್ಟಿ
author img

By

Published : Jun 13, 2022, 7:52 AM IST

ಮಂಬೈ: ಟಾಲಿವುಡ್​ ಚಿತ್ರರಂಗದಲ್ಲಿ ಸೂಪರ್​ ಹಿಟ್​ ಆಗಿ ಹೊರಹೊಮ್ಮಿದ ‘ಮಿಡಲ್​​ ಕ್ಲಾಸ್​ ಅಬ್ಬಾಯ್​’ ಚಿತ್ರದ ರಿಮೇಕ್​ ‘ನಿಕಮ್ಮಾ’ ಮೂಲಕ ಶಿಲ್ಪಾ ಶೆಟ್ಟಿ ಕುಂದ್ರಾ ಹಿರಿತೆರೆಗೆ ವಾಪಸ್​ ಆಗುತ್ತಿದ್ದಾರೆ. ಈ ತೆಲುಗು ಸೂಪರ್​ ಹಿಟ್​ ಚಿತ್ರದಲ್ಲಿ ನಟ ನಾನಿ, ನಟಿಯರಾದ ಭೂಮಿಕಾ ಮತ್ತು ಸಾಯಿ ಪಲ್ಲವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಈ ಚಿತ್ರದ ಬಗ್ಗೆ ಮಾತನಾಡುವಾಗ ನಟಿ ಶಿಲ್ಪಾ ಶೆಟ್ಟಿ ತನ್ನ ಕೆಲಸ, ಜೀವನ ಮತ್ತು ತಾಯ್ತನ ಕಾರ್ಯವನ್ನು ಬ್ಯಾಲೆನ್ಸ್​ ಮಾಡಿರುವುದರ ಬಗ್ಗೆ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ ಅವರು ಸಂಪೂರ್ಣವಾಗಿ ತಾಯಂದಿರು ಸೂಪರ್ ಹೀರೋಗಳು ಎಂದು ಹೇಳಿದ್ದಾರೆ.

ಪ್ರತಿಯೊಬ್ಬ ಮಹಿಳೆ ಗೃಹಿಣಿಯರೇ, ಅವರ ತಮ್ಮ-ತಮ್ಮ ಮನೆಗಳಲ್ಲಿ ಮತ್ತು ಕಚೇರಿಗಳಲ್ಲಿ ತಮ್ಮ ವೃತ್ತಿಯನ್ನು ಸಮತೋಲನದಿಂದ ನಿಭಾಯಿಸುತ್ತಾರೆ. ಅಮ್ಮಂದಿರು ಕೇಪ್​ ಧರಿಸದ (ಸೂಪರ್​ ಹೀರೋಗಳಿರುವ ಗೌನ್​) ಸೂಪರ್ ಹೀರೋಗಳು ಆಗಿದ್ದಾರೆ. ನಿಮ್ಮೊಳಗೆ ಒಬ್ಬ ನಾಯಕ ಇದ್ದಾನೆ ಎಂದು ಹೇಳಿದ್ದಾರೆ.

ಓದಿ: 'ನಿಕಮ್ಮ' ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಕಣ್ಣಂಚಲಿ ನೀರು ತಂದುಕೊಂಡ ಶಿಲ್ಪಾ ಶೆಟ್ಟಿ

ನಿಕಮ್ಮಾ ಎಂದರೆ ಕೆಲಸಕ್ಕೆ ಹೋಗದೇ ಮನೆಯಲ್ಲಿ ಕಾಲ ಕಳೆಯುವ ವ್ಯಕ್ತಿ. ಮನೆಯಲ್ಲಿ ಯಾರಾದರೂ ಕೆಲಸಕ್ಕೆ ಹೋಗದೇ ಇರುವುದು (ನಿಕಮ್ಮಾ) ಒಬ್ಬರು ಇರುತ್ತಾರೆ. ಅವರು ಕಷ್ಟದ ಸಮಯದಲ್ಲಿ ಹಿರೋಗಳಾಗಿ ಹೊರಹೊಮ್ಮುತ್ತಾರೆ. ಹಾಗಾದರೆ ನಿಮ್ಮ ಜೀವನದಲ್ಲಿ ಆ ಕ್ಷಣ ಯಾವುದು ಎಂದು ಶಿಲ್ಪಾ ಶೆಟ್ಟಿ ಪ್ರಶ್ನಿಸಿದ್ದಾರೆ.

ತೆಲುಗು ಚಿತ್ರ 'ಮಿಡಲ್​ ಕ್ಲಾಸ್​ ಅಬ್ಬಾಯಿ' ಆಧರಿಸಿ, 'ನಿಕಮ್ಮ' ಚಿತ್ರವನ್ನು ಸಬ್ಬೀರ್ ಖಾನ್ ನಿರ್ದೇಶಿಸಿದ್ದಾರೆ. ಶಿಲ್ಪಾ ಶೆಟ್ಟಿ, ಅಭಿಮನ್ಯು ದಸ್ಸಾನಿ, ಸಮೀರ್ ಸೋನಿ, ಶೆರ್ಲಿ ಸೇಟಿಯಾ ಮತ್ತು ಅಭಿಮನ್ಯು ಸಿಂಗ್ ಸೇರಿದಂತೆ ಇತರರು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜೂನ್ 17 ರಂದು 'ನಿಕಮ್ಮಾ' ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.