ETV Bharat / entertainment

12 ದಿನದೊಳಗೆ ಮೂವರು ನಟಿಯರು ಅನುಮಾನಾಸ್ಪದ ಸಾವು.. ಟಾಲಿವುಡ್​ ಚಿತ್ರರಂಗಕ್ಕೆ ಆಘಾತ! - ನಟಿ ಮಂಜುಷಾ ನಿಯೋಗಿ ಆತ್ಮಹತ್ಯೆ

ಕಳೆದ 12 ದಿನದೊಳಗೆ ಮೂವರು ನಟಿಯರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಪಶ್ಚಿಮ ಬಂಗಾಳದ ಟಾಲಿವುಡ್​ ಚಿತ್ರರಂಗ ಆಘಾತಕ್ಕೊಳಗಾಗಿದೆ. ಈ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Bengali film industry shocked, Bengali film industry shocked over three suicides, Bengali film industry news, Tollywood news, Tollywood actress suicide, actress Pallavi Dey suicide, Actress Bidisha De Majumder suicide, Actress Manjusha Niyogi suicide, ಬೆಂಗಾಳಿ ಚಿತ್ರರಂಗ ಆಘಾತ, ಬೆಂಗಾಳಿ ಚಿತ್ರರಂಗದ ಮೂರು ಆತ್ಮಹತ್ಯೆ, ಬೆಂಗಾಲಿ ಚಿತ್ರರಂಗದ ಸುದ್ದಿ, ಟಾಲಿವುಡ್ ಸುದ್ದಿ, ಟಾಲಿವುಡ್ ನಟಿ ಆತ್ಮಹತ್ಯೆ, ನಟಿ ಪಲ್ಲವಿ ಡೇ ಆತ್ಮಹತ್ಯೆ, ನಟಿ ಬಿದಿಶಾ ಡಿ ಮಜುಂದಾರ್ ಆತ್ಮಹತ್ಯೆ, ನಟಿ ಮಂಜುಷಾ ನಿಯೋಗಿ ಆತ್ಮಹತ್ಯೆ,
12 ದಿನದೊಳಗೆ ಮೂವರು ನಟಿಯರು ಅನುಮಾನಸ್ಪದ ಸಾವು
author img

By

Published : May 28, 2022, 9:19 AM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ) : ಪಶ್ಚಿಮ ಬಂಗಾಳ ಚಿತ್ರರಂಗದಲ್ಲಿ ಸರಣಿ ಆತ್ಮಹತ್ಯೆಗಳು ಸಂಚಲನ ಮೂಡಿಸುತ್ತಿವೆ. ಯುವ ನಟಿ ಮತ್ತು ರೂಪದರ್ಶಿ ಮಂಜುಷಾ ನಿಯೋಗಿ ಶುಕ್ರವಾರ ಕೋಲ್ಕತ್ತಾದ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮಂಜುಷಾ ಅವರ ಗೆಳತಿ, ನಟಿ ಬಿದಿಶಾ ಮಜುಂದಾರ್ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದರು.

ಸ್ನೇಹಿತೆಯ ಸಾವಿನಿಂದ ತೀವ್ರ ಖಿನ್ನತೆಗೆ ಒಳಗಾಗಿ ಮಂಜುಶಾ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮತ್ತೋರ್ವ ನಟಿ ಪಲ್ಲವಿ ಡೇ ಕೂಡ ಇದೇ ತಿಂಗಳ 15 ರಂದು ನೇಣಿಗೆ ಶರಣಾಗಿದ್ದರು. 12 ದಿನಗಳಲ್ಲಿ ಮೂವರು ಚಿತ್ರ ನಟಿಯರ ಸಾವಿನಿಂದಾಗಿ ಬಂಗಾಳ ಚಿತ್ರರಂಗ ಶೋಕ ಸಾಗರದಲ್ಲಿ ಮುಳುಗಿದೆ.

ಅನುಮಾನಾಸ್ಪದ ಸಾವು: ಜನಪ್ರಿಯ ಬಂಗಾಳಿ ಕಿರುತೆರೆ ನಟಿ ಪಲ್ಲವಿ ಡೇ ಅವರ ಮೃತದೇಹ ದಕ್ಷಿಣ ಕೋಲ್ಕತ್ತಾದ ಅಪಾರ್ಟ್​​ಮೆಂಟ್‌ನಲ್ಲಿ ಮೇ 15 ರಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಲ್ಲವಿ ಏಪ್ರಿಲ್‌ನಲ್ಲಿ ದಕ್ಷಿಣ ಕೋಲ್ಕತ್ತಾದ ಗಾರ್ಫಾ ಪ್ರದೇಶದಲ್ಲಿ ಅಪಾರ್ಟ್​​ಮೆಂಟ್ ಅನ್ನು ಬಾಡಿಗೆಗೆ ಪಡೆದಿದ್ದರು ಎನ್ನಲಾಗ್ತಿದೆ. ತಮ್ಮ ಗೆಳೆಯನ ಜೊತೆ ವಾಸವಿದ್ದರು. ಸುದ್ದಿಗಾರರಿಗೆ ಮಾಹಿತಿ ನೀಡಿರುವ ಅಪಾರ್ಟ್‌ಮೆಂಟ್‌ನ ಕೇರ್‌ಟೇಕರ್, ಮಲಗುವ ಕೋಣೆಯಲ್ಲಿ ಅವರು ನೇಣು ಬಿಗಿದುಕೊಂಡಿದ್ದಾರೆ ಎಂದು ತಿಳಿದ ತಕ್ಷಣ ಅವರ ಗೆಳೆಯ ನನ್ನನ್ನು ಜೋರಾಗಿ ಕೂಗಿ ಕರೆದರು. ನಂತರ ಇತರೆ ಮನೆಗೆಲಸದ ಸಿಬ್ಬಂದಿಯೊಂದಿಗೆ ಪಲ್ಲವಿ ಅವರ ಶವವನ್ನು ಕೆಳಗೆ ಇಳಿಸಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು ಎಂದು ತಿಳಿಸಿದರು.

ಓದಿ: ಅಪಾರ್ಟ್​ಮೆಂಟ್​​ನಲ್ಲಿ ಶವವಾಗಿ ಪತ್ತೆಯಾದ ಯುವ ನಟಿ.. ಖಿನ್ನತೆಗೊಳಗಾಗಿ ಆತ್ಮಹತ್ಯೆ ಶಂಕೆ!

ಖಿನ್ನತೆಗೆ ಮತ್ತೋರ್ವ ನಟಿ ಬಲಿ: ಕೇವಲ 21 ವರ್ಷದ ರೂಪದರ್ಶಿ, ನಟಿ ಬಿದಿಶಾ ಡಿ ಮಜುಂದಾರ್​​ ತಾವು ವಾಸವಾಗಿದ್ದ ಅಪಾರ್ಟ್​​ಮೆಂಟ್​​ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ನಟಿ ಆತ್ಮಹತ್ಯೆಗೆ ಶರಣಾಗಿರುವ ಸ್ಥಳದಲ್ಲಿ ಡೆತ್​ನೋಟ್​ ಲಭ್ಯವಾಗಿದ್ದು, ಪೊಲೀಸರು ಮೃತದೇಹವನ್ನ ವಶಕ್ಕೆ ಪಡೆದುಕೊಂಡು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಬಾಡಿಗೆ ಅಪಾರ್ಟ್​​ಮೆಂಟ್​​ನಲ್ಲಿ ನಟಿ ವಾಸವಾಗಿದ್ದು, ಮೇ 25ರ ಬುಧವಾರ ಸಂಜೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಬಾಗಿಲು ಮುರಿದು ರೂಮ್​​ನೊಳಗೆ ಹೋಗಿ ನೋಡಿದಾಗ ನಟಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಘಟನಾ ಸ್ಥಳಕ್ಕೆ ಬ್ಯಾರಕ್​ಪುರ ಪೊಲೀಸರು ಭೇಟಿ ನೀಡಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ ನಟಿ ಬಿದಿಶಾ, ಅನುಭಾವ್​ ಬೇರಾ ಎಂಬ ಗೆಳೆಯನೊಂದಿಗೆ ಸಂಬಂಧವಿಟ್ಟುಕೊಂಡಿದ್ದು, ಆತನೊಂದಿಗೆ ಮೇಲಿಂದ ಮೇಲೆ ಜಗಳವಾಡ್ತಿದ್ದರಂತೆ. ಇದರಿಂದ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಮಾಡಲಿಂಗ್ ಕ್ಷೇತ್ರದಲ್ಲಿ ಹೆಚ್ಚು ಹೆಸರು ಮಾಡಿರುವ ಬಿದಿಶಾ, 2021ರಲ್ಲಿ ಬಾರ್​-ದಿ ಕ್ಲೌನ್​ ಎಂಬ ಕಿರುಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಪ್ರವೇಶಿಸಿದ್ದರು.

ಕಳೆದ ಕೆಲ ದಿನಗಳ ಹಿಂದೆ ಬಂಗಾಳದ ಪ್ರಸಿದ್ಧ ನಟಿ ಪಲ್ಲವಿ ಡೇ ಮತ್ತು ಬಿದಿಶಾ ಅವರ ಅನುಮಾನಾಸ್ಪದ ಸಾವಿನ ಬೆನ್ನಲ್ಲೇ ಮತ್ತೋರ್ವ ನಟಿ ಸಾವನ್ನಪ್ಪಿದ್ದು, ಬೆಂಗಾಳಿ ಚಿತ್ರರಂಗ ಶಾಕ್​​​ಗೊಳಗಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.