ಅಯೋಧ್ಯೆ(ಉತ್ತರ ಪ್ರದೇಶ): ಪ್ರಭಾಸ್, ಕೃತಿ ಸನೋನ್ ಮತ್ತು ಸೈಫ್ ಅಲಿ ಖಾನ್ ಅಭಿನಯದ ಆದಿಪುರುಷ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಅ.2 ರಂದು ರಾಮ ನಗರಿ ಅಯೋಧ್ಯೆಯಲ್ಲಿ 50 ಅಡಿ ಎತ್ತರದ ಪೋಸ್ಟರ್ ಮತ್ತು 'ಆದಿಪುರುಷ' ಟೀಸರ್ ಬಿಡುಗಡೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲೂ ಇದರ ಜನಪ್ರಿಯತೆ ಕಂಡು ಬರುತ್ತಿದೆ.
ಕಾರ್ಯಕ್ರಮದ ಬಳಿಕ ಆದಿಪುರುಷ ಚಿತ್ರ ತಂಡ ಅಯೋಧ್ಯೆಯಲ್ಲಿರುವ ರಾಮಲಲ್ಲಾಗೆ ಭೇಟಿ ನೀಡಿತ್ತಿ. ಅಲ್ಲಿ ರಾಮಲಲ್ಲಾರ ದರ್ಶನ ಪಡೆದರು. ದರ್ಶನದ ಸಂದರ್ಭದಲ್ಲಿ ರಾಮಜನ್ಮಭೂಮಿಯ ಅರ್ಚಕರು ಪ್ರಸಾದ ವಿತರಿಸಿದರು. ಈ ವೇಳೆ ವಿಭಾಗೀಯ ಆಯುಕ್ತ ಅಯೋಧ್ಯ ಮಂಡಲ್ ನವದೀಪ್ ರಿನ್ವಾ ಉಪಸ್ಥಿತರಿದ್ದರು.
ಐದು ಭಾಷೆಗಳಲ್ಲಿ ಆದಿಪುರುಷ ಚಿತ್ರದ ಟೀಸರ್ ಬಿಡುಗಡೆಯಾಗಿದೆ. 1 ನಿಮಿಷ 45 ಸೆಕೆಂಡುಗಳ ಈ ಟೀಸರ್‌ನಲ್ಲಿ ಚಿತ್ರದ ಬಹುತೇಕ ಪ್ರಮುಖ ತಾರೆಯರ ಫಸ್ಟ್ ಲುಕ್ ಕಂಡು ಬಂದಿದೆ. ಮುಂದಿನ ವರ್ಷ ಅಂದರೆ 2023ರಲ್ಲಿ ವಿಶ್ವದಾದ್ಯಂತ ಸುಮಾರು 20 ಸಾವಿರ ಸ್ಕ್ರೀನ್‌ಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಸುಮಾರು 500 ಕೋಟಿ ರೂ. ವೆಚ್ಚದಲ್ಲಿ ಈ ಚಿತ್ರ ತಯಾರಾಗುತ್ತಿದೆ.
ಆದಿಪುರುಷ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಶ್ರೀರಾಮನಾಗಿ ಪ್ರಭಾಸ್, ಸೀತೆಯಾಗಿ ಕೃತಿ, ರಾವಣನಾಗಿ ಸನ್ನಿ ಲಕ್ಷ್ಮಣ್ ಮತ್ತು ಸೈಫ್ ಅಲಿ ಖಾನ್ ನಟಿಸಿದ್ದಾರೆ. ಇದುವರೆಗೆ ತನ್ಹಾ ಜಿ ಮತ್ತು ಸಿಟಿ ಆಫ್ ಗೋಲ್ಡ್ ಚಿತ್ರಗಳನ್ನು ನಿರ್ದೇಶಿಸಿರುವ ಓಂ ರಾವುತ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಇದನ್ನೂ ಓದಿ: ‘ಆದಿಪುರುಷ’ ತಂಡದ ಫೋಟೋ ಹಂಚಿಕೊಂಡ ನಿರ್ದೇಶಕ ಓಂ ರಾವತ್..!