ಮೈಸೂರು: ಚಾಮರಾಜನಗರ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸ್ ಪ್ರಸಾದ್ ಪರವಾಗಿ ಮತಯಾಚಿಸಲು ಬಂದಿದ್ದ ಶಾಸಕ ಹರ್ಷವರ್ಧನ್ ಅವರನ್ನು ಊರೊಳಗೆ ಕಾಲಿಡದಂತೆ ವಾಪಸ್ ಕಳುಹಿಸಿರುವ ಘಟನೆ ನಂಜನಗೂಡು ತಾಲೂಕಿನ ಹುಣಸವಾಳು ಗ್ರಾಮದಲ್ಲಿ ನಡೆದಿದೆ.
ನಂಜನಗೂಡು ತಾಲೂಕಿನ ಹುಣಸವಾಳು ಗ್ರಾಮಕ್ಕೆ ಶಾಸಕ ಹರ್ಷವರ್ಧನ್, ಅವರ ಮಾವ ಶ್ರೀನಿವಾಸ್ ಪ್ರಸಾದ್ ಪರವಾಗಿ ಮತಯಾಚನೆಗೆ ತೆರಳಿದ್ದರು. ಈ ವೇಳೆ ರೈತ ಸಂಘದ ಮುಖಂಡರೊಂದಿಗೆ ಸೇರಿ ಗ್ರಾಮದೊಳಗೆ ಬಂದು ಮತ ಕೇಳಬೇಡಿ. ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ವಾಪಸ್ ಹೋಗಿ ಎಂದರು. ಇದರಿಂದ ಕಸಿವಿಸಿಗೊಂಡ ಹರ್ಷವರ್ಧನ್ ರೈತರನ್ನು ಹಾಗೂ ಗ್ರಾಮಸ್ಥರನ್ನು ಸಮಾಧಾನಪಡಿಸಲು ಯತ್ನಿಸಿದರು. ಆದ್ರೆ ಪ್ರಯತ್ನ ಸಫಲವಾಗದೆ ಅಲ್ಲಿಂದ ಕಾಲ್ಕಿತ್ತರು.