ಬಾಗಲಕೋಟೆ : ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರಕಾರ ಐದು ವರ್ಷಗಳಲ್ಲಿ ರೈತರ ಸಮಸ್ಯೆ ಬಗೆಹರಿಸಲು ಅಗಲಿಲ್ಲ. ಉದ್ಯೋಗ ಸೃಷ್ಟಿ ಅಗಲಿಲ್ಲ. ನರೇಂದ್ರ ಮೋದಿ ಮೇಲೆ ಯಾವ ನಂಬಿಕೆ ಇಟ್ಟು ಕೊಂಡು ಮತ ಹಾಕಬೇಕೆಂದು ಮತದಾರರ ಯೋಚಿಸಬೇಕು ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.
ತೇರದಾಳ ಮತಕ್ಷೇತ್ರದಲ್ಲಿ ಮೈತ್ರಿ ಆಭ್ಯರ್ಥಿ ವೀಣಾ ಕಾಶಪ್ಪನವರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿಎಂ, ದೇಶಕ್ಕೆ ಒಬ್ಬ ಸಮರ್ಥ ನಾಯಕಬೇಕು ಎಂದು ಹೇಳ್ತಾರೆ, ನೆಹರು ಶಾಸ್ತ್ರಿ, ಇಂದಿರಾ ಗಾಂಧಿಯವರು ನಮಗೆ ಸಮರ್ಥ ನಾಯಕತ್ವ ತೋರಿಸಿ ಕೊಟ್ಟಿದ್ದಾರೆ, ಅದ್ರೆ ಮೋದಿ ಸುಳ್ಳುಗಳನ್ನೆ ಬಂಡವಾಳ ಮಾಡಿಕೊಂಡು ಐದು ವರ್ಷ ಕಳೆದಿದ್ದಾರೆ, ನಾನು ಕಣ್ಣೀರು ಹಾಕುವುದನ್ನ ವ್ಯಂಗ್ಯವಾಡಿದ ಮೋದಿಗೇನು ಗೊತ್ತು ನಾನು ಕಣ್ಣೀರು ಹಾಕಿದ್ದು ಪುಲ್ವಾಮಾ ಹುತಾತ್ಮ ಯೋಧರ ಕುಟುಂಬ ನೋಡಿ ಅಂತ, ನಾನು ಭಾವನಾತ್ಮಕ ಜೀವಿ, ಕಣ್ಣೀರು ಹಾಕಿದ್ದು ಮಹಾನ್ ತಪ್ಪಾ ?
ನರೇಗಾದಲ್ಲಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಹಣ ನೀಡಬೇಕಿತ್ತು, ಆದ್ರೆ ನೀಡಲಿಲ್ಲ ರಾಜ್ಯ ಸರಕಾರ ಒಂದುವರೆ ಸಾವಿರ ಕೋಟಿ ಹಣ ನೀಡಿದೆ ಎಂದರು, ಕೇಂದ್ರೀಕೃತ ಬ್ಯಾಂಗ್ ಸಾಲಮನ್ನಾಕ್ಕೆ ರೈತರು ಹೋರಾಟ ಮಾಡಿದ್ರು ಮೋದಿ ಸ್ಪಂದಿಸಲಿಲ್ಲ ಇಂತಹ ಪ್ರಧಾನಿ ನಮಗೆ ಬೇಕಾ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಹಲವಾರು ಭಾಗ್ಯ ಯೋಜನೆಗಳನ್ನ ನೀಡಿದೆ ನಾನು ಸಾಲಮನ್ನಾ ಮಾಡಿರುವು ಇನ್ನು ಮಾಡುತ್ತೇನೆ ಎಂದರು.
ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ ಮಾತನಾಡಿ, ಜಿಎಸ್ಟಿ ಸರಳಿಕರಣ ಮಾಡಬೇಕು, ನಿಜವಾದ ಜ್ಯಾತ್ಯಾತೀತ ಪಕ್ಷಗಳನ್ನ ಕರ್ನಾಟಕದಲ್ಲಿ ಬಂಧು ನೋಡಬೇಕು, ಬರಿ ಬೋಟಾಕಿಯ ಮಾತುಗಳನ್ನ ಆಡಿ ಜನರಿಗೆ ಮಂಕು ಬೂದಿ ಎರಚುವ ಮೋದಿಗೆ ಈ ಬಾರಿ ಜನರು ತಕ್ಕ ಪಾಠ ಕಲಿಸಲಿದ್ದಾರೆ. ರೈತರು ಹೆಸರನ್ನು ಹೇಳಿಕೊಂಡು ಅಧಿಕಾರ ಅನುಭವಿಸಿದ ಮೋದಿ , ಗದ್ದಿಗೌಡ ಏನು ಮಾಡಿದ್ದಾರೆ ? ಎಂದು ಪ್ರಶ್ನಿಸಿದರು,
ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, ಬಿಜೆಪಿ ಯವರಯ ರಾಮಮಂದಿರ ಕಟ್ಟುತ್ತೇವೆ ಎಂದು ಸುಳ್ಳು ಹೇಳಿದರು. ಈಶ್ವರಪ್ಪನವರಿಗೆ ಒಂದು ಹಿಂದುಳಿದ ವರ್ಗಗಳ ಟಿಕೆಟ್ ಕೊಡಿಸಲಾಗಲಿಲ್ಲ, ನಿಮಗ್ಯಾಕೆ ಬೇಕು ಹಿಂದುಳಿದ ವರ್ಗಗಳ ವೋಟ್ ?. ವೀಣಾ ಕಾಶಪ್ಪನವರ ಒಳ್ಳೆಯ ಅಭ್ಯರ್ಥಿ. ಗದ್ದಿಗೌಡರ ಎಲ್ಲಿ ಹೋಗಿದ್ದಾರೆ ಗೊತ್ತಿಲ್ಲ. ಗದ್ದಿಗೌಡರ ಅಲ್ಲ ನಿದ್ದೆ ಗೌಡ ಎಂದು ವ್ಯಂಗ್ಯವಾಡಿದರು.
ಮಾಜಿ ಶಾಸಕಿ ಉಮಾಶ್ರೀ ಮಾತನಾಡಿ, ನಮ್ಮ ಸಂಘರ್ಷದ ಕೋಮುವಾದಿ ಬಿಜೆಪಿ ಪಕ್ಷದ ತೊಲಗಿಸಲು ಎಲ್ಲ ರೂ ಬದ್ಧರಾಗಿದ್ದೇವೆ. ಹದಿನೈದು ವರ್ಷ ಬಿಜೆಪಿ ಸಂಸದರು ಏನೂ ಕಾರ್ಯ ಮಾಡಿಲ್ಲ. ಆದ್ದರಿಂದ ಕಾಂಗ್ರೆಸ್ ಪಕ್ಷ ವೀಣಾ ಕಾಶಪ್ಪನವರ ಮತ ನೀಡಿ ಗೆಲುವು ಸಾಧಿಸಲು ಆಶೀರ್ವಾದ ಮಾಡಬೇಕು ಎಂದು ಮನವಿಸಿದರು
ಈ ಸಂರ್ಭದಲ್ಲಿ ವಿಪ ಸದಸ್ಯ ಎಸ್.ಅರ್ .ಪಾಟೀಲ್, ಸಚಿವ ಶಿವಾನಂದ ಪಾಟೀಲ, ಬಿ.ಬಿ.ಚಿಮ್ಮನಕಟ್ಟಿ, ಬಸವರಾಜ ಬಾಳಿಕಾಯಿ, ಜೆಡಿಎಸ್ ಜಿಲ್ಲಾಧ್ಯಕ್ಷ ಎಸ್.ಅರ್.ನವಲಿಹಿರೇಮಠ, ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಮಾಜಿ ಶಾಸಕ ಜೆ.ಟಿ.ಪಾಟೀಲ, ಎಚ್.ವೈ.ಮೇಟಿ, ಅಜಯಕುಮಾರ ಸರನಾಯಕ, ನಜೀರ್ ಕಂಗೊಳ್ಳಿ, ಜೆಡಿಎಸ್ ಮುಖಂಡ ಸಲೀಮ ಮೋಮಿನ್, ಘನಶ್ಯಾಂ ಬಾಂಢಗೆ, ಬಸವರಾಜ ಕೊಣ್ಣೂರು, ಹನಮಂತ ಮಾವಿನಮರದ, ಅನ್ವರ್ ಮೋಮಿನ್, ಸಚಿವ ಅರ್. ಬಿ.ತಿಮ್ಮಾಪುರ, ಮಾಜಿ ಸಚಿವೆ ಉಮಾಶ್ರೀ, ಶಾಸಕ ಆನಂದ ನ್ಯಾಮಗೌಡ, ವರ್ಧಮಾನ ನ್ಯಾಮಗೌಡ ಉಪಸ್ಥಿತರಿದ್ದರು.