ETV Bharat / elections

ಈಡಿಗ ಮಠದ ಕಾರ್ಯದರ್ಶಿ ಮೇಲೆ ಬಿಜೆಪಿ ಹಲ್ಲೆ ಆರೋಪ.. ಶಾಸಕ ಹಾಲಪ್ಪಗೆ ಕೈ ಕಾರ್ಯಕರ್ತರಿಂದ ತರಾಟೆ

ಈಡಿಗ ಮಠದ ಕಾರ್ಯದರ್ಶಿ ಮೇಲೆ ಹಲ್ಲೆ ಆರೋಪ, ಕೈ ಕೈ ಮಿಲಾಯಿಸಿದ ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರು.

ಈಡಿಗ ಮಠದ ಕಾರ್ಯದರ್ಶಿ ಮೇಲೆ ಹಲ್ಲೆ ಆರೋಪ
author img

By

Published : Apr 21, 2019, 9:26 PM IST

ಶಿವಮೊಗ್ಗ : ಈಡಿಗ ಮಠದ ಕಾರ್ಯದರ್ಶಿ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕಳೆದ ಮೂರು ದಿನಗಳ ಹಿಂದೆ ಹೊಸನಗರ ತಾಲೂಕು ನಲ್ಲಿಬೀಡು ಗ್ರಾಮದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಕೈ ಕೈ ಮಿಲಾಯಿಸಿದ್ದರು. ಇದನ್ನು ಬಗೆಹರಿಸಲು ಸಾಗರ ಶಾಸಕ ಹರತಾಳು ಹಾಲಪ್ಪನವರು ಗ್ರಾಮಕ್ಕೆ ತೆರಳಿದ್ದರು.

ಶಾಸಕ ಹಾಲಪ್ಪಗೆ ಕೈ ಕಾರ್ಯಕರ್ತರ ತರಾಟೆ

ಈ ವೇಳೆ ಹಾಲಪ್ಪನವರು ಈಡಿಗ ಮಠದ ಕಾರ್ಯದರ್ಶಿ ರಾಮಪ್ಪ ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ಸಮಾಧಾನ ಮಾಡುವಾಗ ಮತ್ತೆ ವಾಗ್ವಾದ ತಾರಕಕ್ಕೇರಿ ಗಲಾಟೆ ನಡೆದಿದೆ. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಹಾಲಪ್ಪನವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಬಡಿದಾಡಿಕೊಂಡಿದ್ದಾರೆ. ಅಷ್ಟರಲ್ಲಿ ಹಾಲಪ್ಪ ಅಲ್ಲಿಂದ ಹಿಂದಿರುಗಿದ್ದಾರೆ. ಹೊಸನಗರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಆದರೆ, ಈವರೆಗೂ ದೂರು ದಾಖಲಾಗಿಲ್ಲ.

Intro:ಈಡಿಗ ಮಠದ ಕಾರ್ಯದರ್ಶಿ ಮೇಲೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಳೆದ ಮೂರು ದಿನಗಳ ಹಿಂದೆ ಹೊಸನಗರ ತಾಲೂಕು ನಲ್ಲಿಬೀಡು ಗ್ರಾಮದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಕೈ ಕೈ ಮಿಲಾಯಿಸಿ ಕೊಂಡಿದ್ದರು. ಇದನ್ನು ಬಗೆಹರಿಸಲು ಸಾಗರ ಶಾಸಕ ಹರತಾಳು ಹಾಲಪ್ಪನವರು ನಲ್ಲಿಬೀಡು ಗ್ರಾಮಕ್ಕೆ ತೆರಳಿದ್ದರು.Body: ಈ ವೇಳೆ ಹಾಲಪ್ಪನವರು
ಈಡಿಗ ಮಠದ ಕಾರ್ಯದರ್ಶಿ ರಾಮಪ್ಪ ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ಸಮಾಧಾನ ಮಾಡುವಾಗ ಮತ್ತೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಈ ವೇಳೆ ಕಾಂಗ್ರೆಸ್ ಹಾಲಪ್ಪನವರನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ.Conclusion:ಈ ವೇಳೆ ಕಾಂಗ್ರೆಸ್
ಹಾಗೂ ಬಿಜೆಪಿ ಕಾರ್ಯಕರ್ತರು ಎಳೆದಾಡಿ ಕೊಂಡಿದ್ದಾರೆ. ಈ ವೇಳೆ ಎರಡು ಬಣಗಳ ನಡುವೆ ಗಲಾಟೆ ನಡೆದಿದೆ. ಅಷ್ಟರಲ್ಲಿ ಹಾಲಪ್ಪ ಅಲ್ಲಿಂದ ವಾಪಸ್ ಆಗಿದ್ದಾರೆ. ಹೊಸನಗರದ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಆದ್ರೆ ಇದುವರೆಗೂ ದೂರು ದಾಖಲಾಗಿಲ್ಲ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.