ವಿಜಯಪುರ : ಜಿಲ್ಲೆಯಲ್ಲಿ ಬೆಳಿಗ್ಗೆಯಿಂದ ಮತದಾನ ಶಾಂತಿಯುತವಾಗಿ ಸಾಗಿದೆ, ಅದ್ರೆ ಮುಂಜಾನೆ ಇದ್ದಷ್ಟು ಆಸಕ್ತಿ ಬಿಸಿಲಿನ ತಾಪಕ್ಕೆ ಮಧ್ಯಾಹ್ನ ಇಲ್ಲದಂತಾಗಿದ್ದು ಮತಗಟ್ಟೆಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.
ತೀವ್ರ ಕುತೂಹಲ ಕೆರಳಿಸಿರುವ ವಿಜಯಪುರ ಲೋಕಸಭಾ ಚುನಾವಣೆ ಮತದಾನ ನಡೆಯುತ್ತಿದ್ದು, ಜನರಿಗೆ ಬಿಸಿಲಿನ ತಾಪ ತಟ್ಟಿದ್ದು ಮತದಾನ ಮಾಡಲು ಮತಗಟ್ಟೆಗೆ ಬರಲು ಹಿಂಜರಿಯುತ್ತಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಜಿಲ್ಲೆಯಲ್ಲಿ ಶೇ .2 ರಷ್ಟು ಮತದಾನವಾಗಿತ್ತು, ಬಳಿಕ 11 ಗಂಟೆಗೆ ಶೇ.20 ರಷ್ಟು ಮತದಾನ ಮತ್ತು ಮೂರನೆ ಸುತ್ತಿಗೆ ಶೇ. 33 ರಷ್ಟು ಮತದಾನ ನಡೆದಿದೆ.
ನಗರದ ದರ್ಬಾರ್ ಹೈಸ್ಕೂಲಿನ ಆರು ಮತಗಟ್ಟೆಗಳು ಸೇರಿದಂತೆ ಇನ್ನಿತರ ಮತಗಟ್ಟೆಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು, ನರದಲ್ಲಿ ಶೇ 37 ಉಷ್ಣಾಂಶ ಇದ್ದು ಮತದಾರರು ಮನೆಯಿಂದ ಹೊರಬರಲು ಹಿಂದೇಟಾಕಿದರು. ಸಖಿ ಮತಗಟ್ಟೆಗಳು ಸೇರಿದಂತೆ ಮಾದರಿ ಮತಗಟ್ಟೆಗಳಲ್ಲಿ ಕೂಡ ಬರೀ ಸಿಬ್ಬಂದಿ ಮಾತ್ರ ಕಾಣುತ್ತಿದ್ದರು.