ETV Bharat / elections

ಮಂಡ್ಯ ನಾಯಕರ ಜತೆ ಖಾಸಗಿ ಹೋಟೆಲ್​ನಲ್ಲಿ ದಿನೇಶ್​ ಗುಂಡೂರಾವ್​​​ ಚರ್ಚೆ - kannada news

ಮಂಡ್ಯ ರಾಜಕೀಯದಲ್ಲಿ ಉಂಟಾಗಿರುವ ಭಿನ್ನಮತದ ಹಿನ್ನೆಲೆ ಕಾಂಗ್ರೆಸ್ ನಾಯಕರು ಸಭೆ ಮೇಲೆ ಸಭೆ ನಡೆಸಿ ಮಂಡ್ಯ ನಾಯಕರ ಮನವೊಲಿಸುವ ಕಸರತ್ತು ನಡೆಸಿದ್ದಾರೆ.

ಮಂಡ್ಯ ನಾಯಕರ ಜತೆ ಖಾಸಗಿ ಹೋಟೆಲ್ನಲ್ಲಿ ದಿನೇಶ್ ಚರ್ಚೆ
author img

By

Published : Apr 11, 2019, 8:21 PM IST

ಬೆಂಗಳೂರು: ಮಂಡ್ಯ ಕಾಂಗ್ರೆಸ್ ನಾಯಕರ ಜೊತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಂದು ಮಹತ್ವದ ಸಭೆ ನಡೆಸಿದರು.

ನಗರದ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಖಾಸಗಿ ಹೋಟೆಲ್​ನಲ್ಲಿ ಇಂದು ಬೆಳಗ್ಗೆ ಸಭೆ ನಡೆದಿದ್ದು, ಶತಾಯಗತಾಯ ಮಂಡ್ಯ ಭಾಗದ ಕಾಂಗ್ರೆಸ್ ನಾಯಕರನ್ನು ಪ್ರಚಾರಕ್ಕೆ ಕರೆತರುವ ಅನಿವಾರ್ಯ ಎದುರಾಗಿದೆ. ಹಾಗಅಗಿ ಕಾಂಗ್ರೆಸ್ ರಾಜ್ಯ ನಾಯಕರು ಮೇಲಿಂದ ಮೇಲೆ ಸಭೆ ನಡೆಸುತ್ತಿದ್ದು, ಎಲ್ಲವೂ ವಿಫಲವಾಗುತ್ತಿದೆ. ಇಂದಿನ ಸಭೆ ಕೂಡ ನಿರೀಕ್ಷಿತ ಫಲ ಕೊಟ್ಟಿಲ್ಲ ಎನ್ನಲಾಗಿದೆ.

ಮಂಡ್ಯದಲ್ಲಿ ನಾಳೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ ಜಂಟಿ ಪ್ರಚಾರ ನಡೆಸಲಿದ್ದಾರೆ. ಹೀಗಾಗಿ ನಾಳೆ ನಡೆಯುವ ಪ್ರಚಾರದಲ್ಲಿ ಭಾಗಿಯಾಗುವಂತೆ ಮಂಡ್ಯದ ನಾಯಕರಿಗೆ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ. ಈ ಸಂದರ್ಭ ದಿನೇಶ್ ಮಾತಿಗೆ ತಲೆಯಾಡಿಸಿರುವ ನಾಯಕರು ನಾಳೆ ನಡೆಯಲಿರುವ ಪ್ರಚಾರದಲ್ಲಿ ಭಾಗಿಯಾಗುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಈಗಾಗಲೇ ಮಾಜಿ ಸಚಿವ ಚೆಲುವರಾಯಸ್ವಾಮಿ, ಮಾಜಿ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ನರೇಂದ್ರ ಸ್ವಾಮಿ ಮತ್ತಿತರರ ಮನವೊಲಿಸಿ ಪ್ರಚಾರ ಕಣಕ್ಕಿಳಿಸಲು ಸಚಿವ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಪ್ರಯತ್ನ ನಡೆಸಿ ವಿಫಲರಾಗಿದ್ದಾರೆ. ಇದೀಗ ದಿನೇಶ್ ಗುಂಡೂರಾವ್ ಇನ್ನೊಂದು ಸುತ್ತಿನ ಯತ್ನ ನಡೆಸಿದ್ದಾರೆ. ಇದಕ್ಕೆ ಯಾವ ಫಲ ಸಿಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Intro:ಮಂಡ್ಯ ನಾಯಕರ ಜತೆ ಖಾಸಗಿ ಹೋಟೆಲ್ನಲ್ಲಿ ದಿನೇಶ್ ಚರ್ಚೆ

ಬೆಂಗಳೂರು: ಮಂಡ್ಯ ಕಾಂಗ್ರೆಸ್ ನಾಯಕರ ಜೊತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಂದು ಮಹತ್ವದ ಸಭೆ ನಡೆಸಿದರು.
Body:ನಗರದ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ನಲ್ಲಿ ಇಂದು ಬೆಳಗ್ಗೆ ಸಭೆ ನಡೆದಿದೆ. ಶತಾಯಗತಾಯ ಮಂಡ್ಯ ಭಾಗದ ಕಾಂಗ್ರೆಸ್ ನಾಯಕರನ್ನು ಪ್ರಚಾರಕ್ಕೆ ಕರೆತರುವ ಅನಿವಾರ್ಯ ಎದುರಿಸುತ್ತಿರುವ ಕಾಂಗ್ರೆಸ್ ರಾಜ್ಯ ನಾಯಕರು ಮೇಲಿಂದ ಮೇಲೆ ಸಭೆ ನಡೆಸುತ್ತಿದ್ದು ಎಲ್ಲವೂ ವಿಫಲವಾಗುತ್ತಿದೆ. ಇಂದಿನ ಸಭೆ ಕೂಡ ನಿರೀಕ್ಷಿತ ಫಲ ಕೊಟ್ಟಿಲ್ಲ ಎನ್ನಲಾಗಿದೆ.
ಮಂಡ್ಯದಲ್ಲಿ ನಾಳೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ ಜಂಟಿ ಪ್ರಚಾರ ನಡೆಸಲಿದ್ದಾರೆ. ಹೀಗಾಗಿ ನಾಳೆ ನಡೆಯುವ ಪ್ರಚಾರದಲ್ಲಿ ಭಾಗಿಯಾಗುವಂತೆ ಮಂಡ್ಯದ ನಾಯಕರಿಗೆ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ. ಈ ಸಂದರ್ಭ ದಿನೇಶ್ ಮಾತಿಗೆ ತಲೆಯಾಡಿಸಿರುವ ನಾಯಕರು ನಾಳೆ ನಡೆಯಲಿರುವ ಪ್ರಚಾರದಲ್ಲಿ ಭಾಗಿಯಾಗುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
Conclusion:ಈಗಾಗಲೇ ಮಾಜಿ ಸಚಿವ ಚೆಲುವರಾಯಸ್ವಾಮಿ, ಮಾಜಿ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ನರೇಂದ್ರ ಸ್ವಾಮಿ ಮತ್ತಿತರರನ್ನು ಮನವೊಲಿಸಿ ಪ್ರಚಾರ ಕಣಕ್ಕಿಳಿಸಲು ಸಚಿವ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಪ್ರಯತ್ನ ನಡೆಸಿ ವಿಫಲರಾಗಿದ್ದು, ಇದೀಗ ದಿನೇಶ್ ಗುಂಡೂರಾವ್ ಇನ್ನೊಂದು ಸುತ್ತಿನ ಯತ್ನ ನಡೆಸಿದ್ದಾರೆ. ಇದಕ್ಕೆ ಯಾವ ಫಲ ಸಿಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.