ETV Bharat / elections

ಧರ್ಮ ಆಧಾರಿತ ರಾಜಕೀಯಕ್ಕೆ ಇತಿಶ್ರೀ ಹಾಡಿ: ಸುಳ್ಯ ಮತದಾರರಿಗೆ ಸಿಎಂ ಕರೆ - kannada news

ಬಿಜೆಪಿ ನಾಯಕರು ಜನರ ಹಾದಿ ತಪ್ಪಿಸಲು ಧರ್ಮದ ಹೆಸರನ್ನ ಬಳಸಿಕೊಳ್ಳುತ್ತಿದ್ದಾರೆ. ಅವರ ಕುತಂತ್ರಕ್ಕೆ ಬಲಿಯಾಗಬೇಡಿ ಎಂದು ಸಿ.ಎಂ ಕುಮಾರಸ್ವಾಮಿ ಸುಳ್ಯ ಜನರಿಗೆ ಮನವಿ ಮಾಡಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ
author img

By

Published : Apr 8, 2019, 8:35 AM IST

ಸುಳ್ಯ: ಮಂಗಳೂರು ಬೆಂಗಳೂರಿಗೆ ಸರಿಸಾಟಿಯಾಗಿ ನಿಲ್ಲುವಂತಹ, ಎಲ್ಲಾ ರೀತಿಯ ಸೌಕರ್ಯಗಳನ್ನು ಪಡೆಯುವ ಅರ್ಹತೆ ಹೊಂದಿರುವ ನಗರ. ಆದರೆ ಬಿಜೆಪಿಯವರಿಗೆ ಮಂಗಳೂರು ನಗರ ಬೆಳೆಯೋದು ಬೇಕಾಗಿಲ್ಲ. ಈ ಭಾಗದಲ್ಲಿ ಅಶಾಂತಿಯನ್ನು ಸೃಷ್ಟಿಸುವ ರಾಜಕಾರಣ ಮಾಡುತ್ತಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ಸುಳ್ಯದಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯನ್ನು‌ ಉದ್ದೇಶಿಸಿ ಮಾತನಾಡಿದ ಅವರು, ಯುವಕರೇ ಬಿಜೆಪಿಯವರ ಕುತಂತ್ರಕ್ಕೆ ನೀವು ಬಲಿಯಾಗಬೇಡಿ. ನಿಮ್ಮನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ತೊಂದರೆಯಾದರೆ ನೀವೇ ಅನುಭವಿಸಬೇಕು. ಆದ್ರೆ ಬಿಜೆಪಿ ನಾಯಕರು ಆರಾಮಾಗಿ ದೆಹಲಿಯಲ್ಲಿ ಕುಳಿತಿರುತ್ತಾರೆ. ನಮ್ಮ ಮೈತ್ರಿ ಸರ್ಕಾರ ಈ ಒಂಬತ್ತು ತಿಂಗಳಲ್ಲಿ ಕರಾವಳಿ ಪ್ರದೇಶದಲ್ಲಿ ಒಂದೇ ಒಂದು‌ ಗಲಭೆ ಆಗಲು ಅವಕಾಶ ನೀಡಿಲ್ಲ ಎಂದು ಶಾಂತಿ ಸುವ್ಯವಸ್ಥೆ ಬಗ್ಗೆ ತಿಳಿಸಿದರು.

ನಾವು ನರೇಂದ್ರ ಮೋದಿಯವರಂತೆ ಬೆಳಗ್ಗೆ ಎದ್ದು ಮುಖ ವ್ಯಾಕ್ಸ್ ಮಾಡಿಕೊಂಡು ನಿಮ್ಮ ಎದುರು ಬರುತ್ತಿಲ್ಲ. ಬೆಳಗ್ಗೆ ಸ್ನಾನ ಮಾಡಿ ಬಂದರೆ ಮಳೆ, ಬಿಸಿಲು ಏನೇ ಆದರೂ ಮತ್ತೆ ಸ್ನಾನ ಮಾಡುವುದು ಮರುದಿನ ಬೆಳಗ್ಗೆಯೇ. ನಾವು ಚೆನ್ನಾಗಿ ಕಾಣೋಲ್ಲ ನಿಮಗೆ. ನರೇಂದ್ರ ಮೋದಿಯವರು ಸ್ವಲ್ಪ ಫಳಫಳ ಅಂತ ಹೊಳೆಯುತ್ತಿರುತ್ತಾರೆ. ಕೈಜೋಡಿಸಿ ಮನವಿ ಮಾಡುತ್ತೇನೆ ಅದನ್ನು ನೋಡಿ ಮರುಳಾಗಬೇಡಿ. ಜಿಲ್ಲೆಯ ಅಭಿವೃದ್ಧಿಗೆ ಮೈತ್ರಿ ಸರ್ಕಾರ ದೊಂದಿಗೆ ಕೈ ಜೋಡಿಸಿ ಸಹಕಾರ ನೀಡಿ, ಧರ್ಮದ ಹೆಸರಿನ ರಾಜಕೀಯಕ್ಕೆ ಇತಿಶ್ರೀ ಹಾಡಿ. ನಮ್ಮ ಮೈತ್ರಿ ಸರ್ಕಾರ ಯುವ ಅಭ್ಯರ್ಥಿ ಮಿಥುನ್ ರೈಯನ್ನು ಬೆಂಬಲಿಸಿ ಎಂದು ಜನರಲ್ಲಿ ಸಿಎಂ ಮನವಿ ಮಾಡಿದರು.

ಈ ಹಿಂದೆ ದೇವೇಗೌಡರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಬಾಂಬ್ ಹಾಕಿರುವ ಘಟನೆಗಳು ನಡೆದಿದ್ದವಾ?. ಯುದ್ಧದ ಚಕಮಕಿಯಲ್ಲಿ ಯೋಧರು ಮರಣ ಹೊಂದಿದ ಪ್ರಸಂಗ ನಡೆದಿತ್ತಾ?. ಅತ್ಯಂತ ಶಾಂತಿಯುತವಾಗಿ ಜನ ಬದುಕಿದ್ದರು, ಆ ಹತ್ತು ತಿಂಗಳ ಅವಧಿಯಲ್ಲಿ ಯಾಕೆ ಭಯೋತ್ಪಾದಕರು ಬಾಂಬ್ ಹಾಕಿರಲಿಲ್ಲ, ಇವತ್ತು ಯಾಕೆ ಇಂತಹ ಸ್ಫೋಟ, ಭಯೋತ್ಪಾದಕರ ದಾಳಿಗಳು ನಡೆಯುತ್ತಿವೆ ಎಂದು ಪ್ರಶ್ನಿಸಿದರು. ಅಲ್ಲದೆ, ಇಂತಹ ಅಶಾಂತಿ ಪರಿಸ್ಥಿತಿಗೆ ಪ್ರಧಾನಿ ಮೋದಿ ಕಾರಣನಾ ಅಥವಾ ಬೇರೆಯವರಾ ಎಂಬುದನ್ನು ನೀವೇ ಯೋಚನೆ ಮಾಡಿ ಎಂದು ಮೋದಿ ವಿರುದ್ಧವೂ ಸಿಎಂ ಗುಡುಗಿದರು.

Intro:ಸುಳ್ಯ: ಮಂಗಳೂರು ನಗರವು ಬೆಂಗಳೂರಿಗೆ ಸರಿಸಾಟಿಯಾಗಿ ನಿಲ್ಲುವಂತಹ, ಎಲ್ಲಾ ರೀತಿಯ ಸೌಕರ್ಯಗಳನ್ನು ಕೊಡುವಂತಹ ಅರ್ಹತೆ ಹೊಂದಿರುವ ನಗರ. ಆದರೆ ಬಿಜೆಪಿಯವರಿಗೆ ಮಂಗಳೂರು ನಗರ ಬೆಳೆಯೋದು ಬೇಕಾಗಿಲ್ಲ. ಅವರು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ, ಈ ಭಾಗದಲ್ಲಿ ಅಶಾಂತಿಯನ್ನು ಸೃಷ್ಟಿ ಮಾಡುವ ಮುಖಾಂತರ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.

ಸುಳ್ಯದಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯನ್ನು‌ ಉದ್ದೇಶಿಸಿ ಅವರು ಮಾತನಾಡಿದ ಅವರು, ಯುವಕರೇ ಬಿಜೆಪಿಯವರಿಗೆ ನೀವು ಬಲಿಯಾಗಬೇಡಿ. ನಿಮ್ಮನ್ನು ದುರುಪಯೋಗ ಪಡಿಸುತ್ತಿದ್ದಾರೆ. ತೊಂದರೆಗಳಾದರೆ ನಿಮ್ಮ ಕುಟುಂಬ ಕ್ಕೆ ಹಾಗೂ ನೀವು‌ ಅನುಭವಿಸಬೇಕು. ಅವರು ಆರಾಮವಾಗಿ ದೆಹಲಿಯಲ್ಲಿ ಕುಳಿತಿರುತ್ತಾರೆ. ನಮ್ಮ ಮೈತ್ರಿ ಸರಕಾರ ಈ ಒಂಬತ್ತುವರೆ ತಿಂಗಳಲ್ಲಿ ಕರಾವಳಿ ಪ್ರದೇಶದಲ್ಲಿ ಒಂದೇ ಒಂದು‌ ಗಲಭೆ ಆಗಲು ಅವಕಾಶ ನೀಡಲಿಲ್ಲ ಎಂದು ಅವರು ಹೇಳಿದರು.

Body:ನಾವು ನರೇಂದ್ರ ಮೋದಿಯವರಂತೆ ಬೆಳಗ್ಗೆ ಎದ್ದು ಮುಖಕ್ಕೆ ವ್ಯಾಕ್ಸ್ ಹಾಕಿಕೊಂಡು ನಿಮ್ಮ ಎದುರು ಬರುತ್ತಿಲ್ಲ. ಬೆಳಗ್ಗೆ ಸ್ನಾನ ಮಾಡಿ ಬಂದರೆ ಮಳೆ, ಬಿಸಿಲು ಏನೇ ಆದರೂ ಮತ್ತೆ ಸ್ನಾನ ಮಾಡುವುದು ಮರುದಿನ ಬೆಳಗ್ಗೆಯೇ. ನಾವು ಚೆನ್ನಾಗಿ ಕಾಣೋಲ್ಲ ನಿಮಗೆ. ನರೇಂದ್ರ ಮೋದಿಯವರು ಸ್ವಲ್ಪ ಫಳಫಳ ಅಂತ ಹೊಳೆಯುತ್ತಿರುತ್ತಾರೆ. ಕೈಜೋಡಿಸಿ ಮನವಿ ಮಾಡುತ್ತೇನೆ ಅದನ್ನು ನೋಡಿ ಮರುಳಾಗಬೇಡಿ. ಈ ಜಿಲ್ಲೆಯನ್ನು ಉಳಿಸಿಕೊಳ್ಳುವುದು ನಿಮ್ಮ ಕೈಯ್ಯಲ್ಲಿದೆ. ಹಾಗಾಗಿ ನಮ್ಮ ಮೈತ್ರಿ ಪಕ್ಷವನ್ನು ಬೆಂಬಲಿಸಿ. ಇದು ನಿಮ್ಮ ಪಕ್ಷ ಯೋಚನೆ ಮಾಡಿ ಮತ ಚಲಾಯಿಸಿ. ಧರ್ಮದಲ್ಲಿ ಹೆಸರಿನಲ್ಲಿ ಮಾಡುವ ರಾಜಕೀಯಕ್ಕೆ ಇತಿಶ್ರೀ ಹಾಡಿ. ನಮ್ಮ ಮೈತ್ರಿ ಸರಕಾರದ ಯುವ ಅಭ್ಯರ್ಥಿ ಮಿಥುನ್ ರೈಯನ್ನು ಬೆಂಬಲಿಸಿ ಎಂದು ಅವರು ಹೇಳಿದರು.

Conclusion:ಈ ಹಿಂದೆ ದೇವೇಗೌಡರು ಪ್ರಧಾನಿಯಾಗಿದ್ದ ಹತ್ತು ತಿಂಗಳ ಸಂದರ್ಭ ಬಾಂಬ್ ಹಾಕಿರುವ ಘಟನೆಗಳು ನಡೆದಿತ್ತಾ. ಯುದ್ಧದ ಚಕಮಕಿಯಲ್ಲಿ ಯೋಧರು ಮರಣ ಹೊಂದಿದ ಪ್ರಸಂಗ ನಡೆದಿತ್ತಾ. ಅತ್ಯಂತ ಶಾಂತಿಯುತ ವಾಗಿ ಜನ ಬದುಕಿದ್ದ ಕಾಲದ ಹತ್ತು ತಿಂಗಳ ಅವಧಿಯಲ್ಲಿ ಯಾಕೆ ಬಾಂಬ್ ಹಾಕಿರಲಿಲ್ಲ. ಇವತ್ತು ಯಾಕೆ ಇಂತಹ ಒಂದು ಸಂದರ್ಭ ಪ್ರಾರಂಭವಾಗಿದೆ. ಇದಕ್ಕೆ ಕಾರಣ ನರೇಂದ್ರ ಮೋದಿಯವರೋ ಯಾರೋ ಎಂದು ಯೋಚನೆ ಮಾಡಿ ಎಂದು ಅವರು ಹೇಳಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.