ETV Bharat / elections

ಬಿಜೆಪಿ ಆಡಳಿತಾವಧಿಯಲ್ಲೇ ಭಯೋತ್ಪಾದನಾ ಚಟುವಟಿಕೆ ಹೆಚ್ಚು:  ವಿ ಆರ್​ ಸುದರ್ಶನ್ - kannada news

ಬಿಜೆಪಿ ಆಡಳಿತ ಅವಧಿಯಲ್ಲಿಯೇ ಭಯೋತ್ಪಾದನೆ ಹೆಚ್ಚಾಗಿದ್ದು- ಬಿಜೆಪಿ ನಾಯಕರಿಗೆ ದೇಶದಲ್ಲಿ ಶಾಂತಿ ನೆಲೆಸುವುದು ಬೇಕಿಲ್ಲವೆಂದು ಕಾಂಗ್ರೆಸ್​ ಮುಖಂಡ ವಿ. ಆರ್​ ಸುದರ್ಶನ್ ಆರೋಪಿಸಿದ್ದಾರೆ.

ಕಾಂಗ್ರೆಸ್ ಮುಖಂಡ ವಿ ಸುದರ್ಶನ್
author img

By

Published : Apr 5, 2019, 7:51 PM IST

ಮಂಗಳೂರು: ಬಿಜೆಪಿಗೆ ದೇಶದಲ್ಲಿ ಭಯೋತ್ಪಾದನೆ ಇರಬೇಕಾಗಿದೆ. ಅವರು ಅಧಿಕಾರದಲ್ಲಿರುವಾಗಲೇ ದೇಶದಲ್ಲಿ ಭಯೋತ್ಪಾದನೆ ಹೆಚ್ಚಾಗಿದೆ ಎಂದು ಕಾಂಗ್ರೆಸ್ ಮುಖಂಡ ವಿ ಆರ್​ ಸುದರ್ಶನ್ ಆರೋಪಿಸಿದ್ದಾರೆ.

ಕಾಂಗ್ರೆಸ್ ಮುಖಂಡ ವಿ ಸುದರ್ಶನ್

ನಗರದಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪುಲ್ವಾಮಾ, ಕಾರ್ಗಿಲ್, ಗೋದ್ರಾ ಹತ್ಯಾಕಾಂಡ, ಮೊದಲಾದ ಭಯೋತ್ಪಾದನೆ ಚಟುವಟಿಕೆಗಳು ನಡೆದಿದ್ದು ಬಿಜೆಪಿ ಆಡಳಿತಾವಧಿಯಲ್ಲಿ. ಧರ್ಮರಕ್ಷಣೆ ಎಂದು ಹೇಳುವ ಇವರು ಮಾಡುತ್ತಿರುವುದೇನು? ಪಾಕಿಸ್ತಾನದ ಬಾಲಕೋಟ್ ಮೇಲಿನ ಏರ್​ಸ್ಟ್ರೈಕ್​ ವಿಚಾರ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿ ಈ ದೇಶ ಆಳಲು ನಾಲಾಯಕ್. ಅವರಿಗೆ ಅಧಿಕಾರ ಮಾಡಲು ನೈತಿಕ ಹಕ್ಕಿಲ್ಲ ಎಂದು ಗುಡುಗಿದರು.

ಬಿಜೆಪಿ ನವಭಾರತದ ಹೆಸರಿನಲ್ಲಿ ದ್ವೇಷ, ಆತಂಕದ ವಾತಾವರಣ ನಿರ್ಮಾಣ ಮಾಡಿದೆ. ನಮಗೆ ಬೇಕಾಗಿರುವುದು ಮಾಡರ್ನ್ ಇಂಡಿಯಾ. ನೆಹರು, ಗಾಂಧಿಯವರ ಈ ಕಲ್ಪನೆಯನ್ನು ಮುಂದುವರಿಸಿಕೊಂಡು ಹೋಗಬೇಕಿದೆ ಎಂದು ವಿ ಆರ್​ ಸುದರ್ಶನ್​ ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ರಮಾನಾಥ ರೈ, ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಉಪಸ್ಥಿತರಿದ್ದರು.

Intro:ಮಂಗಳೂರು; ಬಿಜೆಪಿಗೆ ದೇಶದಲ್ಲಿ ಭಯೋತ್ಪಾದನೆ ಇರಬೇಕಾಗಿದೆ. ಬಿಜೆಪಿ ಅಧಿಕಾರದಲ್ಲಿರುವಾಗಲೇ ದೇಶದಲ್ಲಿ ಭಯೋತ್ಪಾದನೆ ಜಾಸ್ತಿಯಾಗಿದೆ ಎಂದು ಕಾಂಗ್ರೆಸ್ ಮುಖಂಡ ವಿ ಸುದರ್ಶನ್ ಆರೋಪಿಸಿದ್ದಾರೆ.

Body:ಮಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು ಪುಲ್ವಾಮ, ಕಾರ್ಗಿಲ್, ಗೋದ್ರಾ ದುರಂತ, ಸಬರಮತಿ , ಅಕ್ಷರಧಾಮ , ರಘುನಾಥ ದೇವಸ್ಥಾನ ಮೊದಲಾದ ಭಯೋತ್ಪಾದನೆ ಚಟುವಟಿಕೆ ನಡೆದಿದ್ದು ಬಿಜೆಪಿ ಆಡಳಿತಾವಧಿಯಲ್ಲಿ. ಧರ್ಮರಕ್ಷಣೆ ಎಂದು ಹೇಳುವ ಇವರು ಮಾಡುತ್ತಿರುವುದೇನು? ಬಾಲಕೋಟ್ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆಪಾದಿಸುತ್ತಿದ್ದಾರೆ. ಬಿಜೆಪಿ ಈ ದೇಶ ಆಳಲು ನಾಲಾಯಕ್. ಅವರಿಗೆ ಅಧಿಕಾರ ಮಾಡಲು ನೈತಿಕ ಹಕ್ಕಿಲ್ಲ ಎಂದರು.
ನವಭಾರತದ ಹೆಸರಿನಲ್ಲಿ ದ್ವೇಷ, ಆತಂಕದ ವಾತವರಣ ನಿರ್ಮಾಣ ಮಾಡಿದೆ. ನಮಗೆ ಬೇಕಾಗಿರುವುದು ಮಾಡರ್ನ್ ಇಂಡಿಯಾ. ನೆಹರು , ಗಾಂಧಿಯವರ ಈ ಕಲ್ಪನೆಯನ್ನು ಮುಂದುವರಿಸಿಕೊಂಡು ಹೋಗಬೇಕಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ರಮಾನಾಥ ರೈ, ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಉಪಸ್ಥಿತರಿದ್ದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.