ETV Bharat / elections

ಆನೇಕಲ್ ತಾಲೂಕಲ್ಲಿ ಮತದಾನಕ್ಕೆ ನೀರಸ ಪ್ರತಿಕ್ರಿಯೆ

author img

By

Published : Apr 18, 2019, 5:50 PM IST

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಆನೇಕಲ್ ತಾಲೂಕಲ್ಲಿ ಮತದಾನ ನೀರಸವಾಗಿದೆ. ಪ್ರತಿ ಮತಗಟ್ಟೆಯಲ್ಲಿ ಮತದಾನ ಮಂದಗತಿಯಲ್ಲಿ ನಡೆದಿದೆ.

ಮತದಾನಕ್ಕೆ ಅಡತಡೆ...ಆನೇಕಲ್ ವಿಧಾಸಭಾ ಕ್ಷೇತ್ರದಲ್ಲಿ 29.35% ಮತದಾನ ದಾಖಲೆ

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಆನೇಕಲ್ ತಾಲೂಕಿನ ಮತಗಟ್ಟೆಗಳಲ್ಲಿ ಕಾರಣಾಂತರಗಳಿಂದ ಮತದಾನ ಮಂದಗತಿಯಲ್ಲಿ ಸಾಗಿದೆ.

ಆನೇಕಲ್ ನ ಗಟ್ಟಹಳ್ಳಿ, ಹುಸ್ಕೂರು, ರಾಗಿಹಳ್ಳಿ ದಾಸನಪುರ ಮುಂತಾದೆಡೆ ವಿವಿಧ ಕಾರಣಗಳಿಂದ ಮತದಾನಕ್ಕೆ ಕೊಂಚ ಅಡೆತಡೆ ಉಂಟಾಯಿತು. ದಾಸನಪುರದಲ್ಲಿ ಹಿರಿಯ ಮತದಾರರ ಹೆಸರು ಈ ಬಾರಿ ಮತದಾರರ ಪಟ್ಟಿಯಲ್ಲಿಲ್ಲದ ಕಾರಣ ಮತಗಟ್ಟೆಗೆ ಬಂದು ಸಿಬ್ಬಂದಿಯನ್ನು ಪ್ರಶ್ನಿಸಿದರು. ಮತಪಟ್ಟಿಯಲ್ಲಿ ಹೆಸರಿಲ್ಲದ್ದಕ್ಕೆ ಮತಗಟ್ಟೆಯವರು ತಮಗೆ ಇದು ಸಂಬಂಧಪಟ್ಟ ವಿಚಾರವಲ್ಲವೆಂದು ಸಮಜಾಯಿಸಿ ನೀಡಿ ವಾಪಸ್ ಕಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಮತದಾನಕ್ಕೆ ಅಡೆತಡೆ...ಆನೇಕಲ್ ವಿಧಾಸಭಾ ಕ್ಷೇತ್ರದಲ್ಲಿ 29.35% ಮತದಾನ

ಇನ್ನೂ ಕೆಲವೆಡೆ ಇವಿಎಂ ಯಂತ್ರಗಳು ಕೈಕೊಟ್ಟ ಕಾರಣ ಚಂದಾಪುರ ಮುಖ್ಯ ನಿರ್ವಹಣಾ ಕೇಂದ್ರದಿಂದ ಅವುಗಳನ್ನು ಸರಿಪಡಿಸಿ ಬದಲಾಯಿಸುವಲ್ಲಿ ತಾಂತ್ರಿಕ ಚುನಾವಣಾಧಿಕಾರಿಗಳು ಯಶಸ್ವಿಯಾದರು. ಬೆಳಗ್ಗೆ ಮಂದಗತಿಯಿಂದ ಆರಂಭಗೊಂಡ ಮತದಾನ ನಂತರ 11-12ಗೆ ಚೇತರಿಕೆ ಕಂಡಿತ್ತು. ಮ. 1.3ರ ಸುಮಾರಿಗೆ 29.35% ಮತದಾನ ದಾಖಲಾಗಿತ್ತು.

Intro:ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಆನೇಕಲ್ ವಿಧಾನಸಭೆ ಕ್ಷೇತ್ರದ ಮತಗಟ್ಟೆಗಳಲ್ಲಿ ಮತದಾನ ತಾಂತ್ರಿಕ ದೋಷದಿಂದ ವಿಳಂಬವಾಯಿತು.
Body:ಆನೇಕಲ್ ನ ಗಟ್ಟಹಳ್ಳಿ, ಹುಸ್ಕೂರು, ರಾಗಿಹಳ್ಳಿ ದಾಸನಪುರ ಮುಂತಾದೆಡೆ ವಿವಿಧ ಕಾರಣಗಳಿಂದ ಮತದಾನಕ್ಕೆ ತುಸು ಅಡೆತಡೆ ಉಂಟಾಯಿತು. ದಾಸನಪುರದಲ್ಲಿ ಹಿರಿಯ ಮತದಾರರು ಇಷ್ಟು ವರ್ಷ ಮತ ನೀಡಿದ್ದು ಈ ಬಾರಿ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ಮತಗಟ್ಟೆಗೆ ಬಂದು ಸಿಬ್ಬಂದಿಯನ್ನು ಪ್ರಶ್ನಿಸಿದರು. ಮತಪಟ್ಟಿಯಲ್ಲಿ ಹೆಸರಿಲ್ಲದ್ದಕ್ಕೆ ಮತಗಟ್ಟೆಯವರು ಸಂಬಂದಪಟ್ಟವರಲ್ಲ ಎಂದು ಸಮಜಾಯಿಸಿ ನೀಡಿ ವಾಪಸ್ ಕಳಿಸಿದರು. ಮತ್ತೆ ಕೆಲವೆಡೆ ಇವಿಎಂ ಯಂತ್ರಗಳು ಕೈಕೊಟ್ಟ ಕಾರಣ ಚಂದಾಪುರ ಮುಖ್ಯ ನಿರ್ವಹಣಾ ಕೇಂದ್ರದಿಂದ ಅವುಗಳನ್ನು ಸರಿಪಡಿಸಿ ಬದಲಾಯಿಸುವಲ್ಲಿ ತಾಂತ್ರಿಕ ಚುನಾವಣಾಧಿಕಾರಿಗಳು ಯಶಸ್ವಿಯಾದರು.Conclusion:ಬೆಳಗ್ಗೆ ಮಂದಗತಿಯಿಂದ ಆರಂಭಗೊಂಡ ಮತದಾನ ನಂತರ 11-12ಗೆ ಚೇತರಿಕೆ ಕಂಡಿದೆ. ಈವರೆಗೆ 1.38ಕ್ಕೆ ಆನೇಕಲ್ ವಿಧಾಸಭಾ ಕ್ಷೇತ್ರದಲ್ಲಿ 29.35% ಮತದಾನ ದಾಖಲಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.