ETV Bharat / elections

ಬಿಜೆಪಿ ಸುದ್ದಿಗೋಷ್ಠಿಯಲ್ಲಿ ಅಚಾತುರ್ಯ.. ಬಿಜೆಪಿ ಸಂಸದನ ಮೇಲೆ ಶೂ ಎಸೆದ ಸರ್ಜನ್! - kannada news

ಸುದ್ದಿಗೋಷ್ಠಿ ನಡೆಸುತ್ತಿದ್ದ ಬಿಜೆಪಿ ಸಂಸದ ಜಿ.ವಿ.ಎಲ್‌ ನರಸಿಂಹನ್‌ ಮೇಲೆ ವ್ಯಕ್ತಿಯೊಬ್ಬ ಶೂ ಎಸೆದಿದ್ದಾನೆ.

ಬಿಜೆಪಿ ಸುದ್ದಿಗೋಷ್ಠಿಯಲ್ಲಿ ಅಚಾತುರ್ಯ.. ಬಿಜೆಪಿ ಸಂಸದನ ಮೇಲೆ ಶೂ ಎಸೆದ ಸರ್ಜನ್!
author img

By

Published : Apr 18, 2019, 5:12 PM IST

ನವದೆಹಲಿ : ಸಾಧ್ವಿ ಪ್ರಜ್ಞಾ ಸಿಂಗ್‌ಗೆ ಬಿಜೆಪಿ ಟಿಕೆಟ್‌ ಘೋಷಣೆ ಮಾಡಿರೋದಕ್ಕೆ ಕಾಂಗ್ರೆಸ್ ವಿರೋಧಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಂಸದ ಜಿ.ವಿ.ಎಲ್‌ ನರಸಿಂಹನ್‌ ಸುದ್ದಿಗೋಷ್ಠಿ ನಡೆಸುತ್ತಿದ್ದರು. ಈ ವೇಳೆ ನರಸಿಂಹನ್‌ ಮೇಲೆ ವ್ಯಕ್ತಿಯೊಬ್ಬ ಶೂ ಎಸೆದಿದ್ದಾನೆ.

ಬಿಜೆಪಿ ಸಂಸದ ಜಿವಿಎಲ್‌ ನರಸಿಂಹನ್‌ ಸುದ್ದಿಗೋಷ್ಠಿ

ಶಸ್ತ್ರಚಿಕಿತ್ಸಕನಿಗೆ ಬಿಜೆಪಿ ಪ್ರೆಸ್‌ಮೀಟ್‌ನಲ್ಲಿ ಏನು ಕೆಲಸ?

ಶೂ ಎಸೆದ ವ್ಯಕ್ತಿಯನ್ನ ಡಾ. ಶಕ್ತಿ ಭಾರ್ಗವ್‌ ಎಂದು ಗುರುತಿಸಲಾಗಿದೆ. ಈತ ಕಾನ್ಪುರ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕನಾಗಿದ್ದಾನಂತೆ. ಈತನ ಶರ್ಟ್‌ ಜೇಬಿನಲ್ಲಿದ್ದ ವಿಸಿಟಿಂಗ್‌ ಕಾರ್ಡ್‌ ಆಧರಿಸಿ ಈತನ ಹೆಸರು ಗುರುತಿಸಲಾಗಿದೆ. ಸದ್ಯ ಈತನನ್ನ ಹಿಡಿದು ಸೆಕ್ಯುರಿಟಿ ಗಾರ್ಡ್‌ಗಳು ಸ್ಥಳೀಯ ಐಪಿ ಎಸ್ಟೇಟ್‌ ಪೊಲೀಸ್‌ ಸ್ಟೇಷನ್‌ಗೆ ಕರೆದೊಯ್ದಿದ್ದಾರೆ. ಡಾ. ಶಕ್ತಿ ಭಾರ್ಗವ್‌ ಫೇಸ್‌ಬುಕ್‌ ಪೇಜ್‌ನ ಪರಿಶೀಲಿಸಿದಾಗ, ಈತ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನ ವಿರೋಧಿಸಿ ಸಾಕಷ್ಟು ಪೋಸ್ಟ್‌ಗಳನ್ನ ಹಾಕಿದ್ದಾನಂತೆ. ಮೋದಿ ಸರ್ಕಾರದ ಗುಟ್ಟುಗಳನ್ನ ಬಯಲು ಮಾಡುವೆ ಅಂತಾ ಸಾಕಷ್ಟು ಪೋಸ್ಟ್‌ಗಳಲ್ಲಿ ಇವನೇ ಹೇಳಿಕೊಂಡಿದ್ದಾನೆ.

ಅಸಲಿಗೆ ಬಿಜೆಪಿ ಪ್ರೆಸ್‌ಮೀಟ್‌ನಲ್ಲಿ ಆಗಿದ್ದೇನು?

ಮಾಲೇಗಾಂವ್‌ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯಾಗಿದ್ದ ಸಾಧ್ವಿ ಪ್ರಜ್ಞಾ ಸಿಂಗ್‌ ಈಗ ಸಕ್ರಿಯ ರಾಜಕಾರಣಕ್ಕೆ ಧುಮುಕ್ಕಿದ್ದಾರೆ. ಸಾಧ್ವಿ ಪ್ರಜ್ಞಾ ಬಿಜೆಪಿ ಪಕ್ಷ ಸೇರ್ಪಡೆಯಾಗಿ ಲೋಕಸಭೆ ಚುನಾವಣೆ ಕೂಡ ಎದುರಿಸುತ್ತಿದ್ದಾರೆ. ಮಧ್ಯಪ್ರದೇಶದ ಭೂಪಾಲ್‌ ಕ್ಷೇತ್ರದಿಂದ ಬಿಜೆಪಿ ಸಾಧ್ವಿ ಪ್ರಜ್ಞಾಗೆ ಟಿಕೆಟ್‌ ನೀಡಿದೆ. ಇದೇ ಕ್ಷೇತ್ರದಿಂದ ಮಾಜಿ ಸಿಎಂ ದಿಗ್ವಿಜಯ ಸಿಂಗ್‌ ಸ್ಪರ್ಧಿಸಲಿದ್ದಾರೆ. ಜತೆಗೆ ಮಾಲೇಗಾಂವ್‌ ಸ್ಫೋಟ ಆರೋಪಿಯಾಗಿರುವ ಪ್ರಜ್ಞಾ ಸಿಂಗ್‌ಗೆ ಬಿಜೆಪಿ ಟಿಕೆಟ್‌ ನೀಡಿರೋದಕ್ಕೆ ಕಾಂಗ್ರೆಸ್ ಸಾಕಷ್ಟು ವಿರೋಧ ಮಾಡಿದೆ. ಈ ಹಿನ್ನೆಲೆಯಲ್ಲಿ ನವದೆಹಲಿಯ ಕೇಂದ್ರ ಕಚೇರಿಯಲ್ಲಿ ಇವತ್ತು ಬಿಜೆಪಿ ಸಂಸದ ಜಿವಿಎಲ್‌ ನರಸಿಂಹನ್‌ ಸುದ್ದಿಗೋಷ್ಠಿ ನಡೆಸುತ್ತಿದ್ದರು.

ಕಾಂಗ್ರೆಸ್‌ ಸಾಧ್ವಿ ಪ್ರಜ್ಞಾ ಸಿಂಗ್‌ ರಾಜಕೀಯ ಪ್ರವೇಶಕ್ಕೆ ವಿರೋಧಿಸ್ತಿರೋದಕ್ಕೆ ಜಿವಿಎಲ್ ಟೀಕಿಸುತ್ತಿದ್ದರು. ಹಿಂದೂಗಳ ಭಾವನೆಗಳನ್ನ ಕಾಂಗ್ರೆಸ್‌ ಗೌರವಿಸುತ್ತಿಲ್ಲ, ಅದು ಇನ್ನೊಂದು ಧರ್ಮದ ಜನರನ್ನ ಓಲೈಸುತ್ತಿದೆ ಅಂತಾ ಆರೋಪಿಸಿದ್ದರು. ಇದನ್ನ ಬಿಜೆಪಿ ಸಹಿಸೋದಿಲ್ಲ ಅಂತಾ ಹೇಳುತ್ತಿದ್ದಂತೆಯೇ, ಪತ್ರಕರ್ತರ ಜತೆಗೆ ಕುಳಿತಿದ್ದ ಡಾ. ಶಕ್ತಿ ಭಾರ್ಗವ್, ಜಿವಿಎಲ್‌ ನರಸಿಂಹನ್‌ ಮೇಲೆ ಶೂ ಎಸೆದಿದ್ದಾನೆ. ತಕ್ಷಣ ಎಚ್ಚೆತ್ತ ಅಲ್ಲಿದ್ದ ಕೆಲ ಕಾರ್ಯಕರ್ತರು ಆತನನ್ನ ಹೊರಗೆಳೆದೊಯ್ದರು. ಪತ್ರಕರ್ತರು ಈತನನ್ನ ಪ್ರಶ್ನಿಸಲು ಮುಂದಾದ್ರೂ ಆತ ಮಾತ್ರ ಯಾವುದೇ ಕಾರಣಕ್ಕೆ ಬಾಯಿಬಿಡಲಿಲ್ಲ. ಕೊನೆಗೆ ಅಲ್ಲಿದ್ದ ಸೆಕ್ಯುರಿಟಿ ಗಾರ್ಡ್‌ಗಳು ಐಪಿ ಎಸ್ಟೇಟ್‌ ಪೊಲೀಸ್‌ ಠಾಣೆಗೆ ಎಳೆದೊಯ್ದರು. ಇದರ ಮಧ್ಯೆಯೂ ಆತನ ನಡೆ ಖಂಡಿಸಿದ ಜಿವಿಎಲ್‌ ನರಸಿಂಹನ್‌, ಇಂಥ ಬೆದರಿಕೆಗಳಿಗೆ ಅಂಜುವುದಿಲ್ಲ ಅಂತಾ ಹೇಳಿದರು. ಬಳಿಕ ಸುದ್ದಿಗೋಷ್ಠಿಯನ್ನ ಮುಗಿಸಿದರು.

Intro:Body:

ಬಿಜೆಪಿ ಸುದ್ದಿಗೋಷ್ಠಿಯಲ್ಲಿ ಅಚಾತುರ್ಯ.. ಬಿಜೆಪಿ ಸಂಸದನ ಮೇಲೆ ಶೂ ಎಸೆದ ಸರ್ಜನ್!

ನವದೆಹಲಿ : ಸಾಧ್ವಿ ಪ್ರಜ್ಞಾ ಸಿಂಗ್‌ಗೆ ಬಿಜೆಪಿ ಟಿಕೆಟ್‌ ಘೋಷಣೆ ಮಾಡಿರೋದಕ್ಕೆ ಕಾಂಗ್ರೆಸ್ ವಿರೋಧಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಂಸದ ಜಿವಿಎಲ್‌ ನರಸಿಂಹನ್‌ ಸುದ್ದಿಗೋಷ್ಠಿ ನಡೆಸುತ್ತಿದ್ದರು. ಈ ವೇಳೆ ನರಸಿಂಹನ್‌ ಮೇಲೆ ವ್ಯಕ್ತಿಯೊಬ್ಬ ಶೂ ಎಸೆದಿದ್ದಾನೆ. 

ಶಸ್ತ್ರಚಿಕಿತ್ಸಕನಿಗೆ ಬಿಜೆಪಿ ಪ್ರೆಸ್‌ಮೀಟ್‌ನಲ್ಲಿ ಏನು ಕೆಲಸ?

ಶೂ ಎಸೆದ ವ್ಯಕ್ತಿಯನ್ನ ಡಾ. ಶಕ್ತಿ ಭಾರ್ಗವ್‌ ಎಂದು ಗುರುತಿಸಲಾಗಿದೆ. ಈತ ಕಾನ್ಪುರ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕನಾಗಿದ್ದಾನಂತೆ. ಈತನ ಶರ್ಟ್‌ ಜೇಬಿನಲ್ಲಿದ್ದ ವಿಸಿಟಿಂಗ್‌ ಕಾರ್ಡ್‌ ಆಧರಿಸಿ ಈತನ ಹೆಸರು ಗುರುತಿಸಲಾಗಿದೆ. ಸದ್ಯ ಈತನನ್ನ ಹಿಡಿದು ಸೆಕ್ಯುರಿಟಿ ಗಾರ್ಡ್‌ಗಳು ಸ್ಥಳೀಯ ಐಪಿ ಎಸ್ಟೇಟ್‌ ಪೊಲೀಸ್‌ ಸ್ಟೇಷನ್‌ಗೆ ಕರೆದೊಯ್ದಿದ್ದಾರೆ. ಡಾ. ಶಕ್ತಿ ಭಾರ್ಗವ್‌ ಫೇಸ್‌ಬುಕ್‌ ಪೇಜ್‌ನ ಪರಿಶೀಲಿಸಿದಾಗ, ಈತ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನ ವಿರೋಧಿಸಿ ಸಾಕಷ್ಟು ಪೋಸ್ಟ್‌ಗಳನ್ನ ಹಾಕಿದ್ದಾನಂತೆ. ಮೋದಿ ಸರ್ಕಾರದ ಗುಟ್ಟುಗಳನ್ನ ಬಯಲು ವೆ ಅಂತಾ ಸಾಕಷ್ಟು ಪೋಸ್ಟ್‌ಗಳಲ್ಲಿ ಇವನೇ ಹೇಳಿಕೊಂಡಿದ್ದಾನೆ. 

ಅಸಲಿಗೆ ಬಿಜೆಪಿ ಪ್ರೆಸ್‌ಮೀಟ್‌ನಲ್ಲಿ ಆಗಿದ್ದೇನು? :

ಮಾಲೇಗಾಂವ್‌ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯಾಗಿದ್ದ ಸಾಧ್ವಿ ಪ್ರಜ್ಞಾ ಸಿಂಗ್‌ ಈಗ ಸಕ್ರಿಯ ರಾಜಕಾರಣಕ್ಕೆ ಧುಮುಕ್ಕಿದ್ದಾರೆ. ಸಾಧ್ವಿ ಪ್ರಜ್ಞಾ ಬಿಜೆಪಿ ಪಕ್ಷ ಸೇರ್ಪಡೆಯಾಗಿ ಲೋಕಸಭೆ ಚುನಾವಣೆ ಕೂಡ ಎದುರಿಸುತ್ತಿದ್ದಾರೆ. ಮಧ್ಯಪ್ರದೇಶದ ಭೂಪಾಲ್‌ ಕ್ಷೇತ್ರದಿಂದ ಬಿಜೆಪಿ ಸಾಧ್ವಿ ಪ್ರಜ್ಞಾಗೆ ಟಿಕೆಟ್‌ ನೀಡಿದೆ. ಇದೇ ಕ್ಷೇತ್ರದಿಂದ ಮಾಜಿ ಸಿಎಂ ದಿಗ್ವಿಜಯ ಸಿಂಗ್‌ ಸ್ಪರ್ಧಿಸಲಿದ್ದಾರೆ. ಜತೆಗೆ ಮಾಲೇಗಾಂವ್‌ ಸ್ಫೋಟ ಆರೋಪಿಯಾಗಿರುವ ಪ್ರಜ್ಞಾ ಸಿಂಗ್‌ಗೆ ಬಿಜೆಪಿ ಟಿಕೆಟ್‌ ನೀಡಿರೋದಕ್ಕೆ ಕಾಂಗ್ರೆಸ್ ಸಾಕಷ್ಟು ವಿರೋಧ ಮಾಡಿದೆ. ಈ ಹಿನ್ನೆಲೆಯಲ್ಲಿ ನವದೆಹಲಿಯ ಕೇಂದ್ರ ಕಚೇರಿಯಲ್ಲಿ ಇವತ್ತು ಬಿಜೆಪಿ ಸಂಸದ ಜಿವಿಎಲ್‌ ನರಸಿಂಹನ್‌ ಸುದ್ದಿಗೋಷ್ಠಿ ನಡೆಸುತ್ತಿದ್ದರು. 

ಕಾಂಗ್ರೆಸ್‌ ಸಾಧ್ವಿ ಪ್ರಜ್ಞಾ ಸಿಂಗ್‌ ರಾಜಕೀಯ ಪ್ರವೇಶಕ್ಕೆ ವಿರೋಧಿಸ್ತಿರೋದಕ್ಕೆ ಜಿವಿಎಲ್ ಟೀಕಿಸುತ್ತಿದ್ದರು. ಹಿಂದೂಗಳ ಭಾವನೆಗಳನ್ನ ಕಾಂಗ್ರೆಸ್‌ ಗೌರವಿಸುತ್ತಿಲ್ಲ, ಅದು ಇನ್ನೊಂದು ಧರ್ಮದ ಜನರನ್ನ ಓಲೈಸುತ್ತಿದೆ ಅಂತಾ ಆರೋಪಿಸಿದ್ದರು. ಇದನ್ನ ಬಿಜೆಪಿ ಸಹಿಸೋದಿಲ್ಲ ಅಂತಾ ಹೇಳುತ್ತಿದ್ದಂತೆಯೇ, ಪತ್ರಕರ್ತರ ಜತೆಗೆ ಕುಳಿತಿದ್ದ ಡಾ. ಶಕ್ತಿ ಭಾರ್ಗವ್, ಜಿವಿಎಲ್‌ ನರಸಿಂಹನ್‌ ಮೇಲೆ ಶೂ ಎಸೆದಿದ್ದಾನೆ. ತಕ್ಷಣ ಎಚ್ಚೆತ್ತ ಅಲ್ಲಿದ್ದ ಕೆಲ ಕಾರ್ಯಕರ್ತರು ಆತನನ್ನ ಹೊರಗೆಳೆದೊಯ್ದರು. ಪತ್ರಕರ್ತರು ಈತನನ್ನ ಪ್ರಶ್ನಿಸಲು ಮುಂದಾದ್ರೂ ಆತ ಮಾತ್ರ ಯಾವುದೇ ಕಾರಣಕ್ಕೆ ಬಾಯಿಬಿಡಲಿಲ್ಲ. ಕೊನೆಗೆ ಅಲ್ಲಿದ್ದ ಸೆಕ್ಯುರಿಟಿ ಗಾರ್ಡ್‌ಗಳು ಐಪಿ ಎಸ್ಟೇಟ್‌ ಪೊಲೀಸ್‌ ಠಾಣೆಗೆ ಎಳೆದೊಯ್ದರು. ಇದರ ಮಧ್ಯೆಯೂ ಆತನ ನಡೆ ಖಂಡಿಸಿದ ಜಿವಿಎಲ್‌ ನರಸಿಂಹನ್‌, ಇಂಥ ಬೆದರಿಕೆಗಳಿಗೆ ಅಂಜುವುದಿಲ್ಲ ಅಂತಾ ಹೇಳಿದರು. ಬಳಿಕ ಸುದ್ದಿಗೋಷ್ಠಿಯನ್ನ ಮುಗಿಸಿದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.