ETV Bharat / elections

ಮಹಿಳೆಯರನ್ನ ಆಕರ್ಷಿಸುತ್ತಿವೆ ಪಿಂಕ್‌ ಮತಗಟ್ಟೆ ಕೇಂದ್ರಗಳು.. ಪ್ರಜಾ ದೇಗುಲದ ಮತದಾನ ಗರ್ಭಗುಡಿಗೆ ನಾರಿಯರಿಗೆ ಆಹ್ವಾನ - undefined

13 ರಾಜ್ಯಗಳ ಆಯ್ದ ಮತಗಟ್ಟೆಗಳಲ್ಲಿ ಪಿಂಕ್ ಮತಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಅವು ಮಹಿಳಾ ಮತದಾರರನ್ನು ಸೆಳೆಯುತ್ತಿವೆ. ಆಯಾ ಕ್ಷೇತ್ರಗಳಲ್ಲಿ ಸಜ್ಜುಗೊಳಿಸಿರುವ ಪಿಂಕ್ ಮತಗಟ್ಟೆಗಳಿಗೆ ಸ್ಥಳೀಯ ಚುನಾವಣಾಧಿಕಾರಿಗಳು ಭೇಟೆ ನೀಡಿ ಪರಿಶೀಲಿಸಿದರು. ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು.

ಬಿಹಾರದ ಭಗ್ಲಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪಿಂಕ್​ ಮತಗಟ್ಟೆ
author img

By

Published : Apr 18, 2019, 7:44 AM IST

ಬೆಂಗಳೂರು: ದೇಶಾದ್ಯಂತ 17ನೇ ಲೋಕಸಭೆ ಚುನಾವಣೆಯ 2ನೇ ಹಂತದ ಮತದಾನಕ್ಕೆ 12 ರಾಜ್ಯಗಳ 95 ಕ್ಷೇತ್ರಗಳ ಸಾವಿರಾರು ಪಿಂಕ್​ ಮತಗಟ್ಟೆಗಳು ಮದುವಣಗಿತ್ತಿಯಂತೆ ಶೃಂಗಾರಗೊಂಡು ಮತದಾರರನ್ನು, 'ಪ್ರಜಾಪ್ರಭುತ್ವ ದೇಗುಲ ಮತದಾನದ ಗರ್ಭಗುಡಿಗೆ ಆಹ್ವಾನ' ನೀಡುವಂತಿವೆ.

ಎಲ್ಲಾ ಪಿಂಕ್​ ಮತಗಟ್ಟೆಗಳು ಪಿಂಕ್ ಬಣ್ಣದಿಂದ ಕಂಗೊಳಿಸುತ್ತಿದ್ದು, ಬಲೂನ್ ತೋರಣ, ಮಹಿಳಾ ಮತದಾರರನ್ನು ಮತಗಟ್ಟೆಗೆ ಆಹ್ವಾನಿಸುವ ಫ್ಲೆಕ್ಸ್​ಗಳಿಂದ ಕಂಗಳಿಸುತ್ತಿವೆ. ಈ ಮತಗಟ್ಟೆಗಳಲ್ಲಿ ಚುನಾವಣಾಧಿಕಾರಿ ಸೇರಿದಂತೆ ಎಲ್ಲ ಸಿಬ್ಬಂದಿ ಮಹಿಳೆಯರೇ ಇರುತ್ತಾರೆ. ಹೆಚ್ಚಿನ ಪೊಲೀಸ್ ಸಿಬ್ಬಂದಿ ಸಹ ಮಹಿಳೆಯರೇ ಇರುವುದು ಇನ್ನೊಂದು ಇದರ ವಿಶೇಷ.

ಚುನಾವಣಾ ಆಯೋಗ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಪಿಂಕ್​ ಮತಗಟ್ಟೆಗಳಲ್ಲಿ ಸ್ಥಾಪಿಸಲು ಸೂಚನೆ ನೀಡಿದೆ. ಅದರಂತೆ ಆಯ್ದ ಮತಗಟ್ಟೆಗಳನ್ನು ಪಿಂಕ್​ಮಯಗೊಳಿಸಲಾಗಿದೆ.

  • Chhattisgarh: Latest visuals from a polling station in Rajnandgaon. Voting on three parliamentary constituencies in the state for the second phase of elections will be held today. pic.twitter.com/dErU9a9bqx

    — ANI (@ANI) April 18, 2019 " class="align-text-top noRightClick twitterSection" data=" ">

ಈ ಪಿಂಕ್​ ಮತಗಟ್ಟೆಗಳಲ್ಲಿ ಆಯಾ ಮತಗಟ್ಟೆ ವ್ಯಾಪ್ತಿಯಲ್ಲಿರುವ ಪುರುಷ ಮತದಾರರು ಸಹ ಮತ ಚಲಾಯಿಸಬೇಕಾಗಿದೆ. ಪ್ರತಿ ಮತಗಟ್ಟೆಯಲ್ಲೂ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಸಾಲು ಇರಲಿದೆ. ಪಿಂಕ್ ಮತಗಟ್ಟೆಗಳಲ್ಲಿ ಮಹಿಳೆಯರಿಗೆ ವಿಶ್ರಾಂತಿ ಕೊಠಡಿ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.