ನವದೆಹಲಿ: ದೆಹಲಿ ಗದ್ದುಗೆ ಏರಲಿರುವ ಮುಂದಿನ ಸರ್ಕಾರದ ಹಣೆಬರಹ ನಿರ್ಧರಿಸುವ 17ನೇ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನವು ಅಲ್ಲಲ್ಲಿ ಹಿಂಸಾಚಾರ, ಇಬ್ಬರ ಹತ್ಯೆ, ಗಲಭೆ, ಇವಿಎಂ ದೋಷ ಹೀಗೆ ಹಲವು ಅಡೆತಡೆಗಳ ನಡುವೆ ಕೊನೆಗೂ ಮುಕ್ತಾಯವಾಗಿದೆ.
ಮೊದಲ ಹಂತದ ಚುನಾವಣೆಯಲ್ಲಿ 18 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 91 ಕ್ಷೇತ್ರಗಳಲ್ಲಿ ಮತದಾನ ನಡೆಯಿತು. ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ತಾಡಿಪತ್ರಿ ಎಂಬಲ್ಲಿ ತೆಲುಗು ದೇಶಂ ಮತ್ತು ವೈಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದು, ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು ಕಪ್ಪು ಚುಕ್ಕೆಯಾಗಿ ಉಳಿಯಿತು.
ಉತ್ತರ ಪ್ರದೇಶದ ಶಾಮ್ಲಿ ಮತಗಟ್ಟೆಯೊಂದರಲ್ಲಿ ಬಿಎಸ್ಎಫ್ ಸಿಬ್ಬಂದಿ ಹಲವು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಮತಚೀಟಿ ಹೊಂದಿರದ ಕೆಲವರು ಮತದಾನಕ್ಕೆ ಮುಂದಾದಗ ಭದ್ರತೆ ಕಾಣರಣಗಳಿಂದಾಗಿ ಬಿಎಸ್ಎಫ್ ಯೋಧ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಮಹಾರಾಷ್ಟ್ರದ ಗಾಡ್ಚಿರೊಲಿ ಜಿಲ್ಲೆಯ ಇಟಪಳ್ಳಿಯಲ್ಲಿ ನಕ್ಸಲರು ನಡೆಸಿದ ಎಲ್ಇಡಿ ಸ್ಫೋಟ ಹಾಗೂ ಗುಂಡಿನ ದಾಳಿಗೆ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಆಂಧ್ರ ಪ್ರದೇಶದಲ್ಲಿ 15 ಕಡೆಗಳಲ್ಲಿ ಗಲಭೆ ನಡೆದಿದೆ. ಅನಂತಪುರಂ, ಕಡಪ, ಗೋದಾವರಿ, ವಿಶಾಖಪಟ್ಟಣ ಜಿಲ್ಲೆಗಳ ವ್ಯಾಪ್ತಿಯಲ್ಲಿ ಟಿಡಿಪಿ, ವೈಎಸ್ಆರ್ ಕಾಂಗ್ರೆಸ್ ಮತ್ತು ನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷದ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಉಳಿದಂತೆ ಇತರೆ ಮತಗಟ್ಟೆಗಳಲ್ಲಿ ಮತದಾರರ ಪಟ್ಟಿಯಲ್ಲಿ ಕಾಣೆಯಾದ ಹೆಸರು, ಸಣ್ಣ- ಪುಟ್ಟ ಇವಿಎಂ ದೋಷಗಳೊಂದಿಗೆ ಶಾಂತಿಯುತ ಮತದಾನ ನಡೆಯಿತು.

ನಕ್ಸಲರ ಭಯದಿಂದ ಒಡಿಶಾದ 15 ಮತಗಟ್ಟೆಗಳಲ್ಲಿ ಶೂನ್ಯ ಹಾಗೂ ತ್ರಿಪುರದಲ್ಲಿ ಶೇ. 81ರಷ್ಟು ಅತ್ಯಧಿಕ ಮತದಾನವಾಗಿದೆ.
ಭರ್ಜರಿ ಮತದಾನ
ಆಂಧ್ರ ಪ್ರದೇಶ ವಿಧಾನಸಭೆಯ ಎಲ್ಲ 175, ಸಿಕ್ಕಿಂ ವಿಧಾನಸಭೆಯ ಎಲ್ಲ 32 ಕ್ಷೇತ್ರ ಮತ್ತು ಒಡಿಶಾ ವಿಧಾನಸಭೆಯ 147 ಕ್ಷೇತ್ರಗಳ ಪೈಕಿ 28 ಸ್ಥಾನಗಳಿಗೆ ಮತದಾನ ನಡೆಯಿತು.
ಲೋಕ ಕಣದಲ್ಲಿರುವ ಪ್ರಮುಖರು
ಕೇಂದ್ರ ಸಚಿವರಾದ ನಿತಿನ್ ಗಡ್ಕರಿ (ನಾಗ್ಪುರ), ವಿ.ಕೆ. ಸಿಂಗ್ (ಗಾಜಿಯಾಬಾದ್), ಕಿರಣ್ ರಿಜಿಜು (ಅರುಣಾಚಲ ಪಶ್ಚಿಮ), ಆರ್‌ಎಲ್‌ಡಿ ಮುಖ್ಯಸ್ಥ ಅಜಿತ್ ಸಿಂಗ್ (ಮುಜಫ್ಫರ್ ನಗರ), ಎಲ್‌ಜೆಪಿಯ ಚಿರಾಗ್ ಪಾಸ್ವಾನ್ (ಜಮೂಯಿ) ಕ್ಷೇತ್ರಗಳಿಗೆ ಮತದಾನ ನಡೆದಿದೆ.
-
Earlier visuals: One security personnel injured after clash broke out between TDP & YSRCP workers in Kurnool’s Ahobilam area today. #AndhraPradesh pic.twitter.com/nUaa4d96Y0
— ANI (@ANI) April 11, 2019 " class="align-text-top noRightClick twitterSection" data="
">Earlier visuals: One security personnel injured after clash broke out between TDP & YSRCP workers in Kurnool’s Ahobilam area today. #AndhraPradesh pic.twitter.com/nUaa4d96Y0
— ANI (@ANI) April 11, 2019Earlier visuals: One security personnel injured after clash broke out between TDP & YSRCP workers in Kurnool’s Ahobilam area today. #AndhraPradesh pic.twitter.com/nUaa4d96Y0
— ANI (@ANI) April 11, 2019
ಏಪ್ರಿಲ್ 11ರಿಂದ ಆರಂಭಗೊಳ್ಳುವ ಏಳು ಹಂತಗಳ ಮತದಾನ ಮೇ 19ರವರೆಗೆ ಮುಂದುವರಿಯಲಿದ್ದು, ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ.
ರಾಜ್ಯ | ಮತದಾನ (ಶೇಕಡಾ) | ಕ್ಷೇತ್ರಗಳು |
ಅಸ್ಸೋಂ | 68 | 5/14 |
ಉತ್ತರ ಪ್ರದೇಶ | 64 | 8/80 |
ತೆಲಂಗಾಣ | 60 | 17/17 |
ಛತ್ತೀಸ್ಗಢ | 56 | 1/11 |
ಬಿಹಾರ | 50 | 4/40 |
ಪಶ್ಚಿಮ ಬಂಗಾಳ | 81 | 2/42 |
ಒಡಿಶಾ | 68 | 4/28 |
ಆಂಧ್ರ ಪ್ರದೇಶ | 66 | 25/25 |
ಮಹಾರಾಷ್ಟ್ರ | 56 | 7/48 |
ತ್ರಿಪುರಾ | 81.8 | 1/2 |
ನಾಗಾಲ್ಯಾಂಡ್ | 78 | 1/1 |
ಮಣಿಪುರ | 78.2 | 1/2 |
ಮೇಘಾಲಯ | 67.16 | 2/2 |
ಜಮ್ಮು- ಕಾಶ್ಮೀರ | 54.49 | 2/6 |
ಅರುಣಾಚಲ ಪ್ರದೇಶ | 66 | 2/2 |
ಉತ್ತರಾಖಂಡ್ | 57.58 | 5/5 |
ಲಕ್ಷ ದ್ವೀಪ | 66 | 1/1 |
ಅಂಡಮಾನ್- ಎನ್ | 70.67 | 1/1 |
ಮಿಜೋರಾಂ | 60 | 1/1 |
ಸಿಕ್ಕಿಂ | 69 | 1/1 |
ಸಂಜೆ 5ರವರೆಗಿನ ಮತದಾನದ ಪ್ರಮಾಣ ಹೆಚ್ಚಾಗುವ ಸಾಧ್ಯತೆ |