ETV Bharat / crime

ಶ್ವಾನಕ್ಕೆ ಬಲೂನ್ ಕಟ್ಟಿ ಹಾರಿಸಿ ವಿಡಿಯೋ ಮಾಡಿದ ಯೂಟ್ಯೂಬರ್ ಬಂಧನ

ಸಾಕು ಪ್ರಾಣಿಗಳನ್ನು ಗಾಳಿಯಲ್ಲಿ ತೇಲುವ ಯತ್ನದ ಭಾಗವಾಗಿ ಬಲೂನ್​ಗಳಿಗೆ ಕಟ್ಟಿ, ಅದನ್ನು ವಿಡಿಯೋ ಮಾಡಿ ತನ್ನ ಯುಟ್ಯೂಬ್ ಚಾನೆಲ್​ನಲ್ಲಿ ಅಪ್​ಲೋಡ್ ಮಾಡಿದ. ಯೂಟ್ಯೂಬರ್ ಹಲವು ಬಣ್ಣದ ಆಕಾಶಬುಟ್ಟಿಗಳನ್ನು ನಾಯಿ ದೇಹದ ಮೇಲಿನ ಭಾಗಕ್ಕೆ ಕಟ್ಟಿ ಗಾಳಿಯಲ್ಲಿ ತೇಲುವ ಪ್ರಯತ್ನ ಮಾಡಿದ.

author img

By

Published : May 27, 2021, 8:15 PM IST

YouTuber
YouTuber

ನವದೆಹಲಿ: ಬಲೂನ್‌ಗಳಿಗೆ ಶ್ವಾನ ಕಟ್ಟಿ ಆಗಸದಲ್ಲಿ ಹಾರಿಬಿಡಲು ಪ್ರಯತ್ನಿಸಿದ ದೆಹಲಿ ಮೂಲದ ಗೌರವ್ ಝೋನ್ ಯೂಟ್ಯೂಬ್ ಚಾನಲ್​ನ​ ಯೂಟ್ಯೂಬರ್ ಗೌರವ್​ನನ್ನು ಬಂಧಿಸಲಾಗಿದೆ.

ಸಾಕು ಪ್ರಾಣಿಗಳನ್ನು ಗಾಳಿಯಲ್ಲಿ ತೇಲುವ ಯತ್ನದ ಭಾಗವಾಗಿ ಬಲೂನ್​ಗಳಿಗೆ ಕಟ್ಟಿ, ಅದನ್ನು ವಿಡಿಯೋ ಮಾಡಿ ತನ್ನ ಯುಟ್ಯೂಬ್ ಚಾನೆಲ್​ನಲ್ಲಿ ಅಪ್ಲೋಡ್​ ಮಾಡಿದ. ಯೂಟ್ಯೂಬರ್ ಹಲವು ಬಣ್ಣದ ಆಕಾಶಬುಟ್ಟಿಗಳನ್ನು ನಾಯಿ ದೇಹದ ಮೇಲಿನ ಭಾಗಕ್ಕೆ ಕಟ್ಟಿ ಗಾಳಿಯಲ್ಲಿ ತೇಲುವ ಪ್ರಯತ್ನ ಮಾಡಿದೆ.

ಈ ವಿಡಿಯೋ ಆನ್‌ಲೈನ್‌ಗೆ ಅಪ್ಲೋಡ್​ ಆದ ಕೂಡಲೇ, ಯುಟೂಬರ್​ನ ಅಸೂಕ್ಷ್ಮತೆ ಸಾಕಷ್ಟು ಟೀಕೆಗೆ ಒಳಗಾಗಿತ್ತು. ಗೌರವ್ ಮತ್ತು ಅವರ ತಾಯಿ ವಿರುದ್ಧ ಐಪಿಸಿಯ 188, 269, 34 ಸೆಕ್ಷನ್ ಮತ್ತು ಪ್ರಾಣಿಗಳ ಕ್ರೌರ್ಯ ಕಾಯ್ದೆಯಡಿ ದೆಹಲಿಯ ಮಾಲ್ವಿಯಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಲ್ಕು ದಶಲಕ್ಷ ಚಂದಾದಾರರನ್ನು ಹೊಂದಿರುವ ಗೌರವ್, ಈ ನಂತರ ವಿಡಿಯೋ ಅಳಿಸಿಹಾಕಿದ. ವಿಡಿಯೋವನ್ನು ಚಿತ್ರೀಕರಿಸುವಾಗ ಎಲ್ಲ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದ್ದೇನೆ. ಆ ಭಾಗ ಅಪ್ಲೋಡ್​ ಮಾಡಿದರೆ ವಿಡಿಯೋ ದೀರ್ಘವಾಗುತ್ತದೆ ಮಾಡಿರಲಿಲ್ಲ ಎಂದು ಸಮಂಜಸ ನೀಡಿದ.

ಈ ನಂತರ ಆತ ಈ ಘಟನೆಗೆ ಕ್ಷಮೆಯಾಚಿಸಿದ್ದಾನೆ. ತಾನು ಸಾಕುಪ್ರಾಣಿಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಿರುವುದಾಗಿ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.