ETV Bharat / crime

ನೂಪುರ್​ ಶರ್ಮಾರ 'ಶಿರಚ್ಛೇದ'ದ ಗ್ರಾಫಿಕ್ ವಿಡಿಯೋ ಹರಿಬಿಟ್ಟ Youtuber ಅರೆಸ್ಟ್​ - ಮುಸ್ಲಿಂರಿಂದ ಪ್ರತಿಭಟನೆ

ಬಿಜೆಪಿ ಮಾಜಿ ವಕ್ತಾರೆ ನೂಪುರ್​ ಶರ್ಮಾ ನೀಡಿದ್ದ ವಿವಾದಾತ್ಮಕ ಹೇಳಿಕೆಯಿಂದ ದೇಶಾದ್ಯಂತ ಪ್ರತಿಭಟನೆ ಭುಗಿಲೆದ್ದಿದೆ. ಈ ಮಧ್ಯೆ ನೂಪುರ್​ ಶರ್ಮಾರ ಶಿರಚ್ಛೇದ ಮಾಡಿರುವ ರೀತಿ ಬಳಸಲಾದ ಗ್ರಾಫಿಕ್ಸ್ಅನ್ನು ಯೂಟ್ಯೂಬ್​ನಲ್ಲಿ ಹರಿಬಿಟ್ಟಿದ್ದ ಆರೋಪದಡಿ ಯೂಟ್ಯೂಬರ್​ ಫೈಸಲ್​ ವಾನಿಯನ್ನು ಪೊಲೀಸರು ಬಂಧಿಸಿದ್ದಾರೆ. ​​

Youtuber arrest
Youtuber ಅರೆಸ್ಟ್​
author img

By

Published : Jun 11, 2022, 7:42 PM IST

ಶ್ರೀನಗರ(ಜಮ್ಮು ಕಾಶ್ಮೀರ): ಕಳೆದ ತಿಂಗಳು ಭಾರತೀಯ ಜನತಾ ಪಕ್ಷದ ಮಾಜಿ ವಕ್ತಾರೆ ಸುದ್ದಿ ವಾಹಿನಿಯೊಂದರಲ್ಲಿ ಮುಸ್ಲಿಂರ ಧರ್ಮ ಗುರು ಪ್ರವಾದಿ ಮುಅಹ್ಮದ್​ ಕುರಿತಾಗಿ ನೀಡಿದ್ದ ಆಕ್ಷೇಪಾರ್ಹ ಹೇಳಿಕೆಯಿಂದ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆಯಲ್ಲದೆ, ಪ್ರತಿಭಟನೆಗಳು ನಡೆದು ಕೆಲವೆಡೆ ಹಿಂಸಾಚಾರ ಉಂಟಾಗಿದೆ. ಈ ಮಧ್ಯೆ ಕಾಶ್ಮೀರದಲ್ಲಿ ಯೂಟ್ಯೂಬರ್​ಅನ್ನು ಪೊಲೀಸರು ಬಂಧಿಸಿದ್ದಾರೆ.

ವಿವಾದಿತ ಹೇಳಿಕೆ ನೀಡಿದ್ದ ನೂಪುರ್​ ಶರ್ಮಾ ಅವರ ಶಿರಚ್ಛೇದ ಮಾಡಿದ ರೀತಿಯಲ್ಲಿರುವ ಗ್ರಾಫಿಕ್ಸ್​ಅನ್ನು ತಮ್ಮ ಯೂಟ್ಯೂಬ್​ ಚಾನಲ್​ನಲ್ಲಿ ಪ್ರಸಾರ ಮಾಡಿದ ಫೈಸಲ್​ ವಾನಿಯನ್ನು ಜಮ್ಮು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿರುವ ಶ್ರೀನಗರ ಪೊಲೀಸ್​ ವರಿಷ್ಠಾಧಿಕಾರಿ ರಾಕೇಶ್​ ಬಾಲ್​ವಾಲ್​, ವಾನಿ ಸಫಾ ಕಾದಲ್​ ನಿವಾಸಿಯಾಗಿದ್ದು, ಆತನನ್ನು ಇಂದು ಬಂಧಿಸಲಾಗಿದೆ. ಸದ್ಯ ಆತ ಸಾಫಾ ಕಾದಲ್​ ಪೊಲೀಸ್​ ಠಾಣೆಯಲ್ಲಿ ಇದ್ದಾನೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿರುವ ಆರೋಪದಡಿ ವಾನಿಯನ್ನು ಬಂಧಿಸಲಾಗಿದೆ. ಯಾರೂ ಕೂಡ ಸಾಮಾಜಿಕ ಸಾಹಾರ್ದತೆಯನ್ನು ಕದಡುವಂತಹ ವಿಡಿಯೋ ಅಥವಾ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಮಾಡಿ ಹಿಂಸೆಗೆ ಪ್ರಚೋದನೆ ನೀಡಬೇಡಿ ಎಂದು ಮನವಿ ಮಾಡಿದ್ದಾರೆ.

ಫೈಸಲ್​ ವಾನಿ Deep Pain Fitness ಹೆಸರಿನ ಯೂಟ್ಯೂಬ್​ ಚಾನಲ್​ ನಡೆಸುತ್ತಿದ್ದು, ಈ ವಿವಾದಾತ್ಮಕ ವಿಡಿಯೋ ಹಾಕಿ ಬಳಿಕ ಅದನ್ನು ತೆಗೆದಿದ್ದಾನೆ. ಅಲ್ಲದೆ, ಇದಕ್ಕೆ ಸಂಬಂಧಿಸಿದಂತೆ ಕ್ಷಮೆ ಕೇಳಿದ್ದಾನೆ. ಈ ಮಾತನಾಡಿರುವ ವಾನಿ 'ಹೌದು ನಾನು ಆ ವಿಡಿಯೋ ಹಾಕಿದ್ದು, ನಿಜ. ಅದು ಕೆಲ ಗಂಟೆಗಳಲ್ಲಿ ವೈರಲ್​ ಆಗಿತ್ತು. ಆದ್ರೆ ಅದರ ಹಿಂದೆ ನನಗೆ ಯಾವುದೇ ದುರುದ್ದೇಶ ಇರಲಿಲ್ಲ. ಮತ್ತು ತಕ್ಷಣವೇ ಅದನ್ನು ನನ್ನ ಅಕೌಂಟ್​ನಿಂದ ಡಿಲಿಟ್​ ಮಾಡಿರುವುದಾಗಿ ಸ್ಪಷ್ಟನೆ ನೀಡಿದ್ದಾನೆ.

ಇದನ್ನೂ ಓದಿ.. ನಡುರಸ್ತೆಯಲ್ಲೇ ನೂಪುರ್ ಶರ್ಮಾ ಅಣಕು ಪ್ರತಿಕೃತಿ ನೇಣಿಗೆ; ಸುಮೋಟೋ ಕೇಸ್​ ದಾಖಲಿಸಿಕೊಂಡ ಬೆಳಗಾವಿ ಪೊಲೀಸರು

ಮೇ 28ರಂದು ನೂಪುರ್​ ಶರ್ಮಾ ಪ್ರವಾದಿ ಕುರಿತು ನೀಡಿದ ಹೇಳಿಕೆಗಳು ಎಲ್ಲೆಡೆ ವೈರಲ್​ ಆದ ಬಳಿಕ, ಖತಾರ್​, ಅಫ್ಘಾನಿಸ್ತಾನ, ಪಾಕಿಸ್ತಾನ, ಸೌದಿ ಅರೇಬಿಯಾ ಸೇರಿದಂತೆ 14 ಮುಸ್ಲಿಂ ದೇಶಗಳಿಂದಲೂ ಸಹ ವಿರೋಧ ವ್ಯಕ್ತವಾಗಿತ್ತು. ಈ ಕುರಿತು ಅಲ್ಲಿನ ಹೈಕಮಿಷನ್​ರಗಳಿಗೆ ಆ ದೇಶಗಳಲ್ಲಿ ನೋಟಿಸ್​ ಜಾರಿ ಆಗಿದ್ದವು. ಈ ವಿವಾದ ಭುಗಿಲೇಳುತ್ತಿದ್ದಂತೆ ಎಚ್ಚೆತ್ತ ಬಿಜೆಪಿ ನಾಯಕರು, ವಿವಾದ ಮತ್ತು ಪ್ರತಿಭಟನೆ ತಣ್ಣಗಾಗಿಸಲು ನೂಪುರ್​ ಶರ್ಮಾ ಮತ್ತು ನವೀನ್​ ಜಿಂದಾಲ್​ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದ್ದರು. ಅಲ್ಲದೆ ಅವರ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲವೆಂದು ಸ್ಪಷ್ಟನೆ ನೀಡಿದ್ದರು.

ಆದ್ರು ಸಹ ದೇಶಾದ್ಯಂತೆ ಮುಸ್ಲಿಂ ಧರ್ಮಿಯರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದು, ಹಲವೆಡೆ ಪ್ರತಿಭಟನೆ, ಕಲ್ಲು ತೂರಾಟದಂತ ಘಟನೆಗಳು ಮುಂದುವರಿದಿವೆ. ಈ ಕುರಿತು ಪ್ರತಿಕ್ರಿಯಿಸುತ್ತಿರುವ ಬಿಜೆಪಿ ನಾಯಕರು ಶರ್ಮಾರ ಹೇಳಿಕೆಯನ್ನು ಮುಂದಿಟ್ಟುಕೊಂಡು ಕೆಲವರು ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.