ಮಹಾಸಮುಂದ್ (ಛತ್ತೀಸ್ಗಢ): ಕುಟುಂಬ ಕಲಹದಿಂದ ನೊಂದ ಮಹಿಳೆಯೊಬ್ಬರು ತನ್ನ ಐವರು ಹೆಣ್ಣುಮಕ್ಕಳೊಂದಿಗೆ ಚಲಿಸುತ್ತಿರುವ ರೈಲಿನ ಎದುರು ಜಿಗಿದು ಪ್ರಾಣಬಿಟ್ಟಿರುವ ಘಟನೆ ಛತ್ತೀಸ್ಗಢದ ಮಹಾಸಮುಂದ್ ಜಿಲ್ಲೆಯಲ್ಲಿ ನಡೆದಿದೆ. ಗಂಡನೊಂದಿಗೆ ಜಗಳವಾಡಿದ್ದ ಮಹಿಳೆ ರಾತ್ರಿ ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಮಹಾಸಮುಂದ್ ಜಿಲ್ಲೆಯ ಬೆಮ್ಚಾ ಗ್ರಾಮದ ನಿವಾಸಿ ಉಮಾ ಸಾಹು ಹಾಗೂ ಅವರ ಮಕ್ಕಳಾದ ಅನ್ನಪೂರ್ಣ, ಭೂಮಿಕಾ, ಸ್ವಾಜಾ, ತುಳಸಿ ಮತ್ತು ಕುಮ್ಕುಮ್ ಎಂದು ಗುರುತಿಸಲಾಗಿದೆ. ಪತಿ ರಾಮ್ ಸಾಹು ದಿನನಿತ್ಯ ಕುಡಿದು ಬಂದು ಹೆಂಡತಿಯೊಂದಿಗೆ ಜಗಳವಾಡುತ್ತಿದ್ದು, ನಿನ್ನೆ ರಾತ್ರಿಯೂ ಗಲಾಟೆ ಮಾಡಿದ್ದಾನೆ. ಕೂಡಲೇ ಆಕೆ ಮಕ್ಕಳನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿದ್ದರು ಎಂದು ಹೇಳಲಾಗಿದೆ.
ಇದನ್ನೂ ಓದಿ: ಶಿವಮೊಗ್ಗ: ಹಣಕ್ಕಾಗಿ ವೃದ್ದೆಯ ಕತ್ತು ಹಿಸುಕಿ ಕೊಂದ ಮಹಾಪಾಪಿಗಳು
ಸ್ಥಳಕ್ಕೆ ಬಂದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.