ಪ್ರಯಾಗರಾಜ್ (ಉತ್ತರ ಪ್ರದೇಶ): ಪ್ರಯಾಗರಾಜ್ನಲ್ಲಿ ನಡೆದ ಎನ್ಕೌಂಟರ್ನಲ್ಲಿ ಇಬ್ಬರು ಕೊಲೆ ಅಪರಾಧಿಗಳನ್ನು ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಹತ್ಯೆ ಮಾಡಿದೆ.
ವಕೀಲ್ ಪಾಂಡೆ ಅಲಿಯಾಸ್ ರಾಜು ಪಾಂಡೆ ಮತ್ತು ಅಮ್ಜಾದ್ ಅಲಿಯಾಸ್ ಪಿಂಟು ಮೃತಪಟ್ಟ ಕ್ರಿಮಿನಲ್ಸ್. ಇವರಿಬ್ಬರು 2013ರಲ್ಲಿ ಅಂದಿನ ಉಪ ಜೈಲಧಿಕಾರಿಯಾಗಿದ್ದ ಅನಿಲ್ ಕುಮಾರ್ ತ್ಯಾಗಿ ಅವರನ್ನು ಕೊಂದಿದ್ದರು. ಗ್ಯಾಂಗ್ಸ್ಟರ್ ಮುನ್ನಾ ಭಜರಂಗಿ ಮತ್ತು ಮುಖ್ತಾರ್ ಅನ್ಸಾರಿ ಆದೇಶದ ಮೇರೆಗೆ ಈ ಕೃತ್ಯ ಎಸಗಿದ್ದರು.
ಇದನ್ನೂ ಓದಿ: ಪ್ರೇಮಿ ಜೊತೆ ಐಷಾರಾಮಿ ಜೀವನ ಕಳೆಯಲು ಮಾಲೀಕನಿಗೆ ಪಂಗನಾಮ ಹಾಕಿದ ಯುವಕ!
ಕಳೆದ ರಾತ್ರಿ ಪ್ರಯಾಗರಾಜ್ನ ಅರೈಲ್ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನಲ್ಲಿ ವಕೀಲ್ ಪಾಂಡೆ ಹಾಗೂ ಅಮ್ಜಾದ್ ಮೇಲೆ ಪೊಲೀಸರು ಗುಂಡು ಹಾರಿಸಿದ್ದರು.